ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ನಿಶಾ ಹೆಚ್ ಕಾಮತ್ ಕಿನ್ನಿಗೋಳಿ ಕವಿತೆ “ನಿರಾಸೆ”

ಕಾವ್ಯ ಸಂಗಾತಿ ನಿಶಾ ಹೆಚ್ ಕಾಮತ್ “ನಿರಾಸೆ” ನನಸಾಗದ ಕನಸೆಂದು ತಿಳಿದೂ  ಮನದ ಮೂಲೆಯಲೊಂದು ಆಸೆನಾನೂ ಮನಸ ಬಳಿ ಮಾತನಾಡುವೆ  ಆಡದೇ ಯಾವುದೇ ಭಾಷೆ ಇಂದೋ ನಾಳೆಯೊ ತಿಳಿಯದ ಅಂತ್ಯಮಾಡಿದ್ದೆಲ್ಲವೂ ವ್ಯರ್ಥಕಣ್ಣೆದುರಲ್ಲೇ ಜೀವನ ಮರಣನಮ್ಮಲ್ಲೇಕಿದೆ ಸ್ವಾರ್ಥ ? ತಿಳಿಯದೆ ಏನೂ ವರ್ತಿಸುವುದೇಕೆತಿಳಿದವರಂತೆ ನಾವುತಿಳಿದರೆ ತಿಳಿಸಿ ತೆಗೆವುದು  ಹೇಗೆಮಾನವ ಕುಲದ ನೋವು? ಬೆಳೆಸಿದಿರೇಕೆ ಗಿಡವನು ಅಂದುಆಸೆಯ ಬೀಜವ ನೆಟ್ಟು?ಈ ದಿನ ನಾನು ತಡೆಯಲಿ ಹೇಗೆಜನಗಳ ಕೊಡಲಿಯ ಪೆಟ್ಟು ? ಗುರುತಿಸದಿದ್ದರೂ ನೋವಿರಲಿಲ್ಲನಾನು ಮಾಡಿದ ಸಾಧನೆತಿಳಿದು ಕೊಳ್ಳಲು ಪ್ರಯತ್ನಿಸಬಾರದೆನನ್ನ ಮನಸಿನ ಭಾವನೆ ನಿಶಾ ಹೆಚ್ ಕಾಮತ್ ಕಿನ್ನಿಗೋಳಿ

ನಿಶಾ ಹೆಚ್ ಕಾಮತ್ ಕಿನ್ನಿಗೋಳಿ ಕವಿತೆ “ನಿರಾಸೆ” Read Post »

ಇತರೆ

“ಆಕಾಶ ಬೀಳುವಾಗ ಎಲ್ಲರ ತಲೆ ಒಂದೇ” ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ವಿಶೇಷ ಸಂಗಾತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ಆಕಾಶ ಬೀಳುವಾಗ ಎಲ್ಲರ ತಲೆ ಒಂದೇ” ಸುನಾಮಿ ಎಂದರೇನು ಎಂಬುದು ನಮಗೆ ಅರಿವಿರಲಿಲ್ಲ.ನಟ್ಟ ನಡಾ ಕಡಲು ಉಕ್ಕೇರಿ ದಂಡೆಗಿರುವುದೆಲ್ಲವನು ನೆಕ್ಕುವುದೆಂದು ಗೊತ್ತಿರಲಿಲ್ಲ.ಹಾಗೆಯೆ ಕರೋನಾ ಕಾಲಘಟ್ಟದಲ್ಲಿ ಅದೆಷ್ಟು ದಿನಗಳವರೆಗೆ ಮೌನವನೊತ್ತು ಹಾಗೇ ಸುಮ್ಮನೆ ಮನೆಯಲ್ಲಿ ಮನೆಯ, ಮನದ ಕದವನ್ನು ಮುಚ್ಚಿಕೊಂಡಿದ್ದೆವು.ಇಡೀ ಜಗತ್ತಿಗೆ ಉಸಿರು ಕಟ್ಟಿ ಬಿಟ್ಟಿತ್ತು.ಒಂದು ಬಾರಿ ಕರೆಂಟು ಹೋದರೆ ಜೀವ  ಸಂಕಟಪಡುತ್ತಿತ್ತು. ವಿದ್ಯುತ್ ಇಲಾಖೆಯವರು ಅದೆಷ್ಟು ವೇಗದಲ್ಲಿ ದುರಸ್ತಿ ಕಾರ್ಯ ಕೈಗೊಂಡರು.ಒಂದಿನಿತು ಗಾಳಿಯಾಡದಿದ್ದರೆಹೃದಯ ತಲ್ಲಣಗೊಳ್ಳುತ್ತಿತ್ತು.ಯಾರಾದರೂ ಮನೆಯ ಮುಂದೆ ಬಂದು ಕೂಗಿ ಕರೆದರೆ ಎದೆ ಜಲ್ಲೆನ್ನುತಿತ್ತು.ಯಾರೋ ಸತ್ತರೋ…ಯಾರಿಗೇನು  ಉಸಿರು ಕಟ್ಟಿತೋ…..ಸಹಾಯಕ್ಕಾಗಿ ಕರೆಯುತ್ತಿದ್ದಾರೋ….ಎಂಬ ಭಯದಿಂದ ಮನೆಯ ಬಾಗಿಲನ್ನು ತೆರೆಯದೆ ಮುಚ್ಚಿಕೊಂಡು ಬಿಡುವುದೆಂದರೆ ಎಂತಹ ವಿಪರ್ಯಾಸ! ಯಾವಾವುದೋ ಕಾರಣ ಹೇಳಿಕೊಂಡು ಆಸ್ಪತ್ರೆಯ ಸಿಬ್ಬಂದಿಗಳು   ವಿನಾಕಾರಣ ಇಲ್ಲಸಲ್ಲದ ಸಲಹೆಗಳನ್ನು ಹೇಳುತ್ತಾ  ಉಸಿರು ಕಟ್ಟಿಸಿ ಹೋಗುತ್ತಿದ್ದರು. ಟಿ.ವಿ.ಯಲ್ಲೂ ಭಯಾನಕ ಘಟನೆಗಳು.ನೋಡ ನೋಡುತ್ತಲೆ ನೂರಾರು ಹೆಣಗಳನ್ನು ಒಮ್ಮೆಲೆ ಮಣ್ಣಿನೊಳಗೆ ಮುಚ್ಚುವ ಜೆಸಿಬಿಯ ರೌದ್ರಾವತಾರ ಅದೆಷ್ಟು ಕ್ರೂರ!ಹೀಗೆ………?ಸಾಗಿ….ಬಿಟ್ಟಿತು ಪ್ರಪಂಚದ ನಡುಕ.ಆ ದಿನಗಳು ಏಕಾಏಕಿ ಅತ್ಯಂತ  ಕೆಟ್ಟ ಗಳಿಗೆಯಲ್ಲಿ ಏನೇನೋ..‌‌ನಡೆದುಹೋಯಿತು.ಏನೂ ಮಾಡದ ಸ್ಥಿತಿಯಲ್ಲಿ ಯಾರೂ ಇರಲಿಲ್ಲ.ಆದರೇನು ಮಾಡುವುದು? ಗಾಳಿಯ ತೊಯ್ದಾಟದ ರೋಗವು ಯಾರ ನಿಯಂತ್ರಣದಲ್ಲಿ ಇರಲಿಲ್ಲ.ತಕ್ಷಣಕ್ಕೆ ಮೂಗಿಗೆ ಕವಚ ಕಟ್ಟಿಕೊಳ್ಳುವುದೇ ಏಕೈಕ  ಮಾರ್ಗವಾಗಿತ್ತು. ನಮ್ಮ ದೇಶದ ಸುದೈವವೆ ಸರಿ.ಮತ್ತೇ ಹೊಸ ಗಾಳಿ ಬೀಸಿ ಬಂತು.ಎಲ್ಲವನೂ ಮರೆತು, ಮುಕ್ತವಾಗಿ ತಿರುಗಿದೆವು.ಮುಚ್ಚಿದ ಮನದ ಬಾಗಿಲನ್ನು ತೆರೆದಿಟ್ಟೆವು.ತಂಗಾಳಿ ಬೀಸಿ ತೀಡಿತು.ನಾವೆಲ್ಲರೂ ಉಳಿದೆವು.  ಕಷ್ಟ ಅಥವಾ ವಿಪತ್ತು ಬಂದಾಗ ಎಲ್ಲರೂ ಸಮಾನರು, ಅಲ್ಲಿ ಮೇಲು-ಕೀಳು ಎಂಬ ಭೇದಭಾವ ಇರುವುದಿಲ್ಲ  ನೂರಾರು ವರ್ಷಗಳ ಅನುಭವದ ನಿಷ್ಠುರ ಸತ್ಯಗಳು ಇಂತಹ ಪುಟ್ಟ ಸಾಹಿತ್ಯಿಕ ರೂಪಗಳಲ್ಲಿ ಅಡಕವಾಗಿರುತ್ತವೆ. ಆ ಸಾಲಿನಲ್ಲಿ ಅತ್ಯಂತ ಪ್ರಮುಖವಾದುದು “ಆಕಾಶ ಬೀಳುವಾಗ ಎಲ್ಲರ ತಲೆ ಒಂದೆ” ಎಂಬ ನಾಣ್ನುಡಿ.​ಇಲ್ಲಿ ‘ಆಕಾಶ ಬೀಳುವುದು’ ಎಂದರೆ ಜಗತ್ತಿಗೆ ಬರುವ ಮಹಾ ವಿಪತ್ತು, ಪ್ರಕೃತಿ ವಿಕೋಪ ಅಥವಾ ಅನಿವಾರ್ಯವಾದ ಸಂಕಷ್ಟ ಎಂದರ್ಥ. ಅಂತಹ ಬೃಹತ್ ಸಂಕಷ್ಟ ಎದುರಾದಾಗ ಶ್ರೀಮಂತ-ಬಡವ, ಜಾತಿ-ಮತ, ಬಲಿಷ್ಠ-ದುರ್ಬಲ ಎಂಬ ಭೇದಭಾವಗಳೆಲ್ಲವೂ ಮರೆತುಹೋಗುತ್ತವೆ. ಪ್ರಕೃತಿಯ ಅಥವಾ ಕಾಲದ ನಿಯಮದ ಮುಂದೆ ಎಲ್ಲ ಮಾನವರೂ ಒಂದೇ ಆಗಿಬಿಡುತ್ತಾರೆ ಎಂಬ ನಗ್ನ ಸತ್ಯವನ್ನು ಈ ಮಾತು ನಮಗೆ ನೆನಪಿಸುತ್ತದೆ. ಅಹಂಕಾರದ ವಿನಾಶ​ಮಾನವನು ತನ್ನ ದೈನಂದಿನ ಜೀವನದಲ್ಲಿ ಅಧಿಕಾರ, ಸಂಪತ್ತು, ಅಂತಸ್ತು ಮತ್ತು ರೂಪದ ಮದದಿಂದ ಅಹಂಕಾರಿಯಾಗುತ್ತಾನೆ. “ನಾನು ಎಲ್ಲರಿಗಿಂತ ಶ್ರೇಷ್ಠ” ಎಂಬ ಭ್ರಮೆಯಲ್ಲಿ ಬದುಕುತ್ತಾನೆ. ಆದರೆ ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದರೆ, ಈ ಬ್ರಹ್ಮಾಂಡದ ಸೃಷ್ಟಿಯ ಮುಂದೆ ಮನುಷ್ಯ ತೀರ ಅತ್ಯಲ್ಪ ಜೀವಿ.​ಯಾವಾಗ ಕಾಲ ಅಥವಾ ಪ್ರಕೃತಿ ತನ್ನ ರೌದ್ರರೂಪವನ್ನು ಪ್ರದರ್ಶಿಸುತ್ತದೆಯೋ, ಆಗ ಮನುಷ್ಯನ ಅಹಂಕಾರವೆಲ್ಲ ಧೂಳೀಪಟವಾಗುತ್ತದೆ. ಮೃತ್ಯು ಅಥವಾ ಮಹಾ ವಿಪತ್ತು ಬಂದಾಗ ರಾಜನಿಗೂ ಒಂದೇ ನ್ಯಾಯ, ಭಿಕ್ಷುಕನಿಗೂ ಒಂದೇ ನ್ಯಾಯ. ಆಕಾಶವು ಯಾರಿಗೂ ತಾರತಮ್ಯ ಮಾಡದೆ ಎಲ್ಲರ ಮೇಲೂ ಒಟ್ಟಿಗೆ ಉರುಳಿ ಬೀಳುತ್ತದೆ. ಅಂತಿಮವಾಗಿ ನಾವೆಲ್ಲರೂ ಬರಿಗೈಲಿ ಬಂದು ಬರಿಗೈಲಿ ಹೋಗುವ ಸಾಮಾನ್ಯ ಮರ್ತ್ಯರು ಎಂಬುದನ್ನು ಈ ಮಾತು  ಧ್ರಡೀಕರಿಸುತ್ತದೆ.​ ಪ್ರಕೃತಿ ವಿಕೋಪಗಳು ಮತ್ತು ನೈಜ ಉದಾಹರಣೆಗಳು ಬಹಳಷ್ಟಿವೆ.​ಈ ಮೇಲಿನ ಮಾತಿಗೆ ಅತ್ಯಂತ ಸೂಕ್ತವಾದ ಪ್ರಾಯೋಗಿಕ ಉದಾಹರಣೆ ಎಂದರೆ ಪ್ರಕೃತಿ ವಿಕೋಪಗಳು.​ಭೂಕಂಪಗಳು ಮತ್ತು ಸುನಾಮಿಗಳು ಕೋವಿಡ್ ಕರೋನಾ ,ಭೂಮಿ ನಡುಗಿದಾಗ ಅಥವಾ ಸುನಾಮಿ ಅಪ್ಪಳಿಸಿದಾಗ, ಅದು ಶ್ರೀಮಂತರ ಬಂಗಲೆಯನ್ನಾಗಲಿ ಅಥವಾ ಬಡವರ ಗುಡಿಸಲನ್ನಾಗಲಿ ನೋಡುವುದಿಲ್ಲ. ಪ್ರಕೃತಿಯ ಮುನಿಸಿಗೆ ಎಲ್ಲವೂ ಕ್ಷಣಾರ್ಧದಲ್ಲಿ ನೆಲಸಮವಾಗುತ್ತವೆ.​ಮಹಾ ಪೆಡಂಭೂತಗಳಲ್ಲಿ ಒಂದಾದ ಈ  ಜಗತ್ತನ್ನು ಕಾಡಿದ ಕೋವಿಡ್-19 (ಕೊರೊನಾ) ಮಹಾಮಾರಿಯನ್ನೇ ಉದಾಹರಣೆಯಾಗಿ ಮೇಲೆ ತಿಳಿಸಿದಂತೆ  ಆ ವೈರಸ್ ಶ್ರೀಮಂತ ರಾಷ್ಟ್ರಗಳ ಪ್ರಧಾನ ಮಂತ್ರಿಗಳಿಗೂ ತಗುಲಿತು, ಬೀದಿಯಲ್ಲಿದ್ದ ಸಾಮಾನ್ಯ ಜನರಿಗೂ ತಗುಲಿತು. ಲಾಕ್‌ಡೌನ್ ಆದಾಗ ಮತ್ತು ಆಮ್ಲಜನಕದ ಕೊರತೆಯಾದಾಗ ಪ್ರತಿಯೊಬ್ಬರೂ ಜೀವ ಉಳಿಸಿಕೊಳ್ಳಲು ಹೆಣಗಾಡಿದರು. ಅಲ್ಲಿ ಹಣವಂತನ ಕಾರ್ಡ್ ಕೆಲಸ ಮಾಡಲಿಲ್ಲ, ಬಡವನ ಅಸಹಾಯಕತೆಯೂ ಮುಚ್ಚಿಹೋಗಲಿಲ್ಲ. ಎಲ್ಲರೂ ಸಾವಿನ ಭಯದಲ್ಲಿ ಒಂದೇ ತಟ್ಟೆಯ ದಾಸರಾದರು.  ಸಮಾನತೆಯ ಸಂದೇಶವು​ನಮ್ಮ ಸಮಾಜದಲ್ಲಿ ಜಾತಿ, ಧರ್ಮ, ವರ್ಗ ಮತ್ತು ಲಿಂಗದ ಆಧಾರದ ಮೇಲೆ ಹಲವಾರು ಕೃತಕ ಗೋಡೆಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಮನುಷ್ಯ ಮನುಷ್ಯನನ್ನೇ ದೂರ ಇಡುವ ಅಸ್ಪೃಶ್ಯತೆ, ಮೇಲು-ಕೀಳು ಎಂಬ ಭಾವನೆಗಳು ಇಂದಿಗೂ ಜೀವಂತವಾಗಿವೆ. ಆದರೆ ಈ ಮಾತಿನ  ಸಾಮಾಜಿಕ ಸಮಾನತೆಯ ಅತ್ಯುನ್ನತ ಪಾಠವನ್ನು ಬೋಧಿಸುತ್ತದೆ.​ಮಹಾ ಪ್ರವಾಹ ಬಂದಾಗ ಜನರು ತಮ್ಮ ಜಾತಿ ಯಾವುದು ಎಂದು ಕೇಳಿ ಜೀವ ಉಳಿಸಿಕೊಳ್ಳುವುದಿಲ್ಲ. ತೇಲಿ ಹೋಗುವಾಗ ಸಿಕ್ಕ ಪ್ರತಿಯೊಂದು ಕೈಯೂ ದೇವರೆಂದೇ ಭಾವಿಸುತ್ತಾರೆ. ಸಂಕಷ್ಟದ ಸಮಯದಲ್ಲಿ ಶತ್ರುಗಳೂ ಒಂದಾಗುತ್ತಾರೆ, ಭೇದ ಭಾವದ ಗೋಡೆಗಳು ಕುಸಿದು ಬೀಳುತ್ತವೆ. ವಿಪತ್ತುಗಳು ಮನುಷ್ಯನಿಗೆ ತನ್ನ ನೈಜ ಸಾಮಾಜಿಕ ಜವಾಬ್ದಾರಿಯನ್ನು ಮತ್ತು “ನಾವೆಲ್ಲರೂ ಒಂದೇ” ಎಂಬ ವಿಶ್ವಮಾನವ ತತ್ವವನ್ನು ನೆನಪಿಸಿಕೊಡುತ್ತವೆ. ​ರಾಜಕೀಯ ಮತ್ತು ಜಾಗತಿಕ ಆಯಾಮದ ದೃಷ್ಟಿಯಿಂದ ನೋಡುವುದಾದರೆ ಯುದ್ಧ ಮತ್ತು ಆರ್ಥಿಕ ಕುಸಿತಗಳು​ಜಾಗತಿಕ ಮಟ್ಟದಲ್ಲಿ ದೇಶಗಳು ತಾವೇ ಬಲಿಷ್ಠ ಎಂದು ಅಣುಬಾಂಬುಗಳನ್ನು ಹಿಡಿದು ಮೆರೆಯುತ್ತವೆ. ಆದರೆ ಮಹಾ ಯುದ್ಧಗಳು ಜರುಗಿದಾಗ ಅಥವಾ ಜಾಗತಿಕ ಆರ್ಥಿಕ ಕುಸಿತ  ಉಂಟಾದಾಗ ಅದರ ಬಿಸಿ ಕೇವಲ ಒಂದು ದೇಶಕ್ಕೆ ಸೀಮಿತವಾಗಿರುವುದಿಲ್ಲ.  ಮಹಾಯುದ್ಧಗಳು ನಡೆದಾಗ ಬಾಂಬ್‌ಗಳು ಕೇವಲ ಸೈನಿಕರ ಮೇಲೆ ಬೀಳುವುದಿಲ್ಲ, ನಾಗರಿಕರ ಮೇಲೂ ಬೀಳುತ್ತವೆ. ಹಸಿವು ಮತ್ತು ಸಾವು ಎಲ್ಲರನ್ನೂ ಸಮಾನವಾಗಿ ಕಾಡುತ್ತದೆ. ​ ಇಂದು ಇಡೀ ಜಗತ್ತನ್ನು ಕಾಡುತ್ತಿರುವ ಹವಾಮಾನ ವೈಪರೀತ್ಯವು ಕೇವಲ ಬಡ ದೇಶಗಳ ಸಮಸ್ಯೆಯಲ್ಲ. ಅತಿವೃಷ್ಟಿ, ಅನಾವೃಷ್ಟಿ ಮತ್ತು ಓಝೋನ್ ಪದರದ ನಾಶ ಇಡೀ ಭೂಮಂಡಲದ ಅಸ್ತಿತ್ವಕ್ಕೆ ಧಕ್ಕೆ ತಂದಿದೆ. ಆಕಾಶ ಬಿರುಕು ಬಿಟ್ಟರೆ ಶ್ರೀಮಂತ ದೇಶಗಳೂ ಬದುಕುಳಿಯಲಾರವು. ಹೀಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಎಲ್ಲ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆಯನ್ನು ಇದು ತೋರಿಸುತ್ತದೆ.​ಮಾನಸಿಕ ಮತ್ತು ವೈಯಕ್ತಿಕ ಜೀವನದ ಅನ್ವಯದೊಳಗೆ​ವೈಯಕ್ತಿಕ ಜೀವನದಲ್ಲಿ ಮನುಷ್ಯನಿಗೆ ದುಃಖ, ನಿರಾಸೆ, ಕಾಯಿಲೆ ಅಥವಾ ಸಾವು ಬಂದಾಗ ಆತನ ಮಾನಸಿಕ ಸ್ಥಿತಿ ಎಲ್ಲರಂತೆಯೇ ಇರುತ್ತದೆ. ಕೋಟ್ಯಧಿಪತಿಗೂ ಮನಸ್ಸಿನ ನೆಮ್ಮದಿ ಕೆಟ್ಟರೆ ನಿದ್ರೆ ಬರುವುದಿಲ್ಲ, ಬಡವನಿಗೂ ಅದೇ ಪರಿಸ್ಥಿತಿ.ನಮ್ಮ ವೈಯಕ್ತಿಕ ಜೀವನದಲ್ಲಿ ಬರುವ ಅನಿರೀಕ್ಷಿತ ತಿರುವುಗಳು ನಮ್ಮನ್ನು ಮಣ್ಣಿಗೆ ತರುತ್ತವೆ. ಸೋಲು ಎಲ್ಲರಿಗೂ ಒಂದೇ ರೀತಿಯ ನೋವನ್ನು ನೀಡುತ್ತದೆ. ಆದ್ದರಿಂದ ಯಶಸ್ಸಿನ ಉತ್ತುಂಗದಲ್ಲಿರುವಾಗ ಯಾರೂ ಕೂಡ ತಲೆಕೊಬ್ಬಿನಿಂದ ವರ್ತಿಸಬಾರದು, ಏಕೆಂದರೆ ಕಾಲದ ಚಕ್ರ ಉರುಳಿದಾಗ ಎಲ್ಲರೂ ಒಂದೇ ಮಟ್ಟಕ್ಕೆ ಬರಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಈ ನಾಣ್ನುಡಿ ನೀಡುತ್ತದೆ.​​ಒಟ್ಟಿನಲ್ಲಿ  ಹೇಳುವುದಾದರೆ, “ಆಕಾಶ ಬೀಳುವಾಗ ಎಲ್ಲರ ತಲೆ ಒಂದೆ” ಎಂಬ ಮಾತು ಕೇವಲ ಒಂದು ಎಚ್ಚರಿಕೆಯಲ್ಲ, ಅದು ಮಾನವ ಕುಲಕ್ಕೆ ಪ್ರಕೃತಿ ನೀಡುವ ಮಹತ್ತರವಾದ ಸಂದೇಶ. ನಾವು ಸೃಷ್ಟಿಸಿಕೊಂಡಿರುವ ಕೃತಕ ಭಿನ್ನಾಭಿಪ್ರಾಯಗಳು, ಗಡಿಗಳು ಮತ್ತು ಅಹಂಕಾರಗಳು ಕೇವಲ ತಾತ್ಕಾಲಿಕ. ಪ್ರಕೃತಿಯ ನಿಯಮದ ಮುಂದೆ ನಾವೆಲ್ಲರೂ ಕೇವಲ ಸಹಪ್ರಯಾಣಿಕರು.​ವಿಪತ್ತು ಬಂದಾಗ ಒಂದಾಗುವುದಕ್ಕಿಂತ ಮುಂಚಿತವಾಗಿಯೇ, ಸುಸ್ಥಿತಿಯಲ್ಲಿರುವಾಗಲೇ ನಾವೆಲ್ಲರೂ ಪರಸ್ಪರ ಗೌರವದಿಂದ, ಪ್ರೀತಿಯಿಂದ ಮತ್ತು ಸಮಾನತೆಯಿಂದ ಬಾಳಲು ಕಲಿಯಬೇಕು. ಈ ಗಾದೆಯ ಆಳವಾದ ಅರ್ಥವನ್ನು ಅರಿತು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ನೆಲೆಸಲು ಸಾಧ್ಯ. ಶರಣಪ್ಪ ತಳ್ಳಿ ಕುಪ್ಪಿಗುಡ್ಡ

“ಆಕಾಶ ಬೀಳುವಾಗ ಎಲ್ಲರ ತಲೆ ಒಂದೇ” ಶರಣಪ್ಪ ತಳ್ಳಿ ಕುಪ್ಪಿಗುಡ್ಡ Read Post »

ಕಾವ್ಯಯಾನ, ಗಝಲ್

ಡಾ. ಭಾಗ್ಯವತಿ ಅಮರೇಶ್ವರ ಅವರ ಗಜಲ್

ಕಾವ್ಯ ಸಂಗಾತಿ ಡಾ. ಭಾಗ್ಯವತಿ ಅಮರೇಶ್ವರ ಗಜಲ್ ನಿನ್ನ ಮೌನ ಸಹವಾಸ ಬೇಡ ಅನ್ನುವಂತಿದೆ ಮಾತಾಡು ಸಖಿನಿನ್ನ ಇಣುಕು ನೋಟ ಕಾಡುವಂತಿದೆ ಮಾತಾಡು ಸಖಿ ದಿನ ದಿನವೂ ನನ್ನ ಸುತ್ತ ಸುಳಿಯುತ್ತಿದ್ದವಳು ನೀನುನಿನ್ನ ಕಣ್ಣು ಮುಚ್ಚಾಲೆ ಕೊಲ್ಲುವಂತಿದೆ ಮಾತಾಡು ಸಖಿ ನೀ ಬರೆದ ಓಲೆಯ ಪದಗಳು  ನನ್ನ ಮನ ತುಂಬಿ ನಲಿದಾಡುತ್ತಿದ್ದವುನಿನ್ನ ಸಂದೇಶ ಬರದೆ ಮನ ಮೂಕವಾದಂತಿದೆ ಮಾತಾಡು ಸಖಿ ನಡೆವ ಹೆಜ್ಜೆಗೆ ಅಡಿಗಡಿಗೆ ದಾರಿ ತೋರಿಸಿದವಳು ನೀನುನಿನ್ನ ಬೆಳಕಿಲ್ಲದೆ ಕಣ್ಣು ಕುರುಡಾದಂತಿದೆ ಮಾತಾಡು ಸಖಿ ನೀನಿಲ್ಲದೆ ಬದುಕ ಬಲ್ಲೆನಾದರೂ ಸಗ್ಗವಿಲ್ಲ ಆ ಬಾಳಲ್ಲಿಭಾಗ್ಯದ ನಿನ್ನ ನುಡಿಯಿಲ್ಲದೆ ಮೌನ ನರಕದಂತಿದೆ ಮಾತಾಡು ಸಖಿ. ಡಾ. ಭಾಗ್ಯವತಿ ಅಮರೇಶ್ವರ

ಡಾ. ಭಾಗ್ಯವತಿ ಅಮರೇಶ್ವರ ಅವರ ಗಜಲ್ Read Post »

ಕಾವ್ಯಯಾನ

ಡಾ. ದಾನಮ್ಮ ಝಳಕಿ ಅವರ ಕವಿತೆ ” ಒಳ ಸುಳಿವು”

ಕಾವ್ಯ ಸಂಗಾತಿ ಡಾ. ದಾನಮ್ಮ ಝಳಕಿ ” ಒಳ ಸುಳಿವು” ಮೌನಮರೆಯಲಿ ಮಾತೊಂದು ಮೊಳಗುವುದುಮನದಾಳದ ನೋವು ಕಣ್ಣಲಿ ಕರಗುವುದು;ನಗುವಿನ ಹಿಂದೆ ಅಡಗಿದ ಕಣ್ಣೀರ ಹನಿಯೇ,ಬದುಕಿನ ಸತ್ಯಕ್ಕೆ ನೀಡುವ ಒಳ ಸುಳಿವೇ. ಹೊರಗಿನ ಬೆಳಕಿಗೆ ನೆರಳೊಂದು ಜೊತೆಯಲಿ,ಒಳಗಿನ ಕತ್ತಲೆಗೆ ದೀಪವೊಂದು ಹೃದಯದಲಿ;ಕಳೆದುಹೋದ ದಾರಿಯ ಹೆಜ್ಜೆ ಗುರುತಿನಲಿ,ನಾಳೆಯ ಪಯಣದ ಸುಳಿವಿದೆ ಆತ್ಮದಲಿ. ಕಾಣದ ಕನಸೊಂದು ಕಣ್ಣೊಳಗೆ ನಿಲ್ಲುವುದುಹೇಳದ ಭಾವ ಉಸಿರಾಗಿ ಹರಿಯುವುದುಪದಗಳಿಗಿಂತ ಮೌನವೇ ಸತ್ಯ ಹೇಳುವಾಗಮನವೇ ಮನಸ್ಸಿಗೆ ಕನ್ನಡಿ ಹಿಡಿಯುವಾಗ ಜಗವನು ಅರಿಯಲು ಮೊದಲು ನಿನ್ನನು ಅರಿತು ಒಳಗಿನ ಧ್ವನಿಯನು ಕೇಳು ಕ್ಷಣವೊಂದು ನಿಂತು ಹೊರಗೆ ಹುಡುಕಿದ ಸತ್ಯ ಒಳಗೇ ಹೊಳೆಯುವುದು ನೀನೇ ನಿನ್ನ ದಾರಿ ಎಂದು ಒಳ ಸುಳಿವು ನೀಡುವುದು. ಡಾ. ದಾನಮ್ಮ ಝಳಕಿ

ಡಾ. ದಾನಮ್ಮ ಝಳಕಿ ಅವರ ಕವಿತೆ ” ಒಳ ಸುಳಿವು” Read Post »

You cannot copy content of this page

Scroll to Top