ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಒಡಲ ಈ ಉಸಿರಿನ ಒಲುಮೆ ನನ್ನದೆಂದು ಹೇಗೆ ಹೇಳಲಿ
ಉದಿಸಿದ ಪ್ರೀತಿಯ ಬಲುಮೆ ನನ್ನದೆಂದು ಹೇಗೆ ಹೇಳಲಿ

ಮಣ್ಣ ಒಳಗಿನ ಬೇರು ನೀನು ಹೂ ಕಾಣದೇ ಹೋದೆ
ಅಮೃತ ನಿನ್ನೊಲವ ಚಿಲುಮೆ ನನ್ನದೆಂದು ಹೇಗೆ ಹೇಳಲಿ

ಹೊರಡುವಾಗ ಒಂದು ಮಾತು ಹೇಳದಾದೆ ಒಲವೇ
ಎದೆಯ ಗಾಯದ ನಲುಮೆ ನನ್ನದೆಂದು ಹೇಗೆ ಹೇಳಲಿ

ಎಲ್ಲ ಮರೆತು ನಟಿಸಿ ನಕ್ಕು ಬಿಡಬಹುದು ಸುಮ್ಮನೆ
ನೀನಿರದ ಭಾವದ ಗರಿಮೆ ನನ್ನದೆಂದು ಹೇಗೆ ಹೇಳಲಿ

ದೇವರಿತ್ತ ಪ್ರಸಾದ ಎಂದೇ ಒಲವ ಕಣ್ಣಿಗೊತ್ತಿಕೊಂಡೆ ನಾನು
ವಿರಹದುರಿ ಚಿಮ್ಮಿಸುವ ಕುಲುಮೆ  ನನ್ನದೆಂದು ಹೇಗೆ ಹೇಳಲಿ

ಕಳೆದ ರಸಗಳಿಗೆಗೆ ಕೆರೆ ಕಟ್ಟೆ ಮರದ ಎಲೆಗಳು ಸಾಕ್ಷಿ ಸಖಿ
ಪ್ರೇಮಿಗಳಿಗಿದು ಶಾಪ ಈ ಹಿರಿಮೆ ನನ್ನದೆಂದು ಹೇಗೆ ಹೇಳಲಿ

ಬೆರಳ ಬಿಡಿಸಿಕೊಂಡು ಎದ್ದು ಹೋದೆ ಶೂನ್ಯದೆಡೆಗೆ ನೀನು
ಫೈಜ್ ಬದುಕಿದ್ದಾನೆ ಈ ಮಹಿಮೆ ನನ್ನದೆಂದು ಹೇಗೆ ಹೇಳಲಿ


About The Author

4 thoughts on “ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಗಜಲ್”

  1. ವಿರಹದುರಿಯ ಪರಿ ಪರಿಯಾಗಿ ಬಣ್ಣಿಸಿರುವ ಬಗೆ ವೈವಿಧ್ಯ. ಒಲವಿಗೆ ಬಲತ್ಕಾರ ಸಲ್ಲದು. ಒಲವಿಗೆ ಒಲವೇ ಸಾಟಿ. ಒಲವಿದ್ದರೆ ಬೆಸುಗೆ.ಒಲವಿರದಿರೆ ಬಿಸಿ ಬುಗ್ಗೆ.

Leave a Reply

You cannot copy content of this page

Scroll to Top