ಕಾವ್ಯ ಸಂಗಾತಿ
ಪರಿಮಳ ಐವರ್ನಾಡು ಸುಳ್ಯ
“ಕಾಡುತಿದೆ ಪ್ರಶ್ನೆಯೊಂದು”


ಕಾಡುತಿದೆ ಪ್ರಶ್ನೆಯೊಂದು
ಉಸಿರೇ ನಿನ್ನಲಿ
ಪ್ರೀತಿ ಉಕ್ಕಿದರೂ
ಉಸಿರೆತ್ತಲಿಲ್ಲವೇಕೆ ನನ್ನಲಿ
ನೋಡುತ್ತಲೇ ಇದ್ದೆ ನಿನ್ನನು
ನಗುವಿನ ತೀರದಲಿ
ಮುಳುಗಿತ್ತು ಪುಟ್ಟ ಹೃದಯ
ನಿನ್ನ ಪ್ರೀತಿಯ ಆಳದಲಿ
ಹೇಳದೆ ಉಳಿದ ಮಾತುಗಳು
ತುಟಿಯಂಚಲೇ ನಿಂತಿತ್ತು
ನೀ ಕೇಳುವೆಯಾ ಎಂದು
ಕನಸುಗಳು ಕಾದಿತ್ತು
ಉಸಿರೇ ನನ್ನುಸಿರೇ
ಬದುಕಿಗೆ ಅರ್ಥವಾಗಿದ್ದೆ
ನಿನ್ನೊಂದು ನೋಟಕ್ಕಾಗಿ
ನಾನೇ ಕವಿತೆಯಾದೆ
ಹೃದಯ ತುಂಬಿದ ಪ್ರೀತಿಯನು
ಹುದುಗಿಸಿಟ್ಟೆಯಾ ನಿನ್ನೆದೆಯಲಿ
ಹೇಳಬಾರದಿತ್ತೇ ಒಮ್ಮೆ ನನ್ನಲಿ
ನಾನು ನಿನ್ನವನೇ ಎನ್ನುತಲಿ
ಬಚ್ಚಿಟ್ಟ ಪ್ರೇಮಕೀಗ ಬೆಳ್ಳಿಹಬ್ಬ
ವರುಷಗಳೇ ಸಂದರೂ ನೆನಪುಗಳ ಹಬ್ಬ
ಭಿನ್ನ ಹಾದಿಯಲಿ ಜೀವನ ಯಾನ
ಮರೆಯಲಾಗದ ಮೌನ ಗಾನ
ಕಾಡುತಿದೆ ಪ್ರಶ್ನೆಯೊಂದು
ಉಸಿರೇ ನಿನ್ನಲಿ
ಪ್ರೀತಿ ಉಕ್ಕಿದರೂ
ಉಸಿರೆತ್ತಲಿಲ್ಲವೇಕೆ ನನ್ನಲಿ
ಪರಿಮಳ ಐವರ್ನಾಡು ಸುಳ್ಯ



