ಕಾವ್ಯ ಸಂಗಾತಿ
ಉಷಾರಾಣಿ ಗುರುಪ್ರಸಾದ್ ಕೊಡಗು
“ಹಾರಿತು ವಿಮಾನ“


ನೆಲದಿಂದ ಮೇಲಕ್ಕೆ
ಹಾರಿತು ವಿಮಾನ,
ಹಕ್ಕಿಯಂತೆ ನಲಿದಿದೆ
ನನ್ನಯ ಮನ.
ಮೋಡಗಳ ನಡುವೆ
ಸಾಗುವ ಈ ಪಯಣ,
ಕಾಣದ ಲೋಕದ
ಒಡನಾಟದ ನಯನ.
ಕೆಳಗೆ ನೋಡಿದರೆ
ಕಾಣದು ಗಡಿಗಳು,
ಚಿಕ್ಕದಾಗಿ ಕಾಣುವವು
ದೊಡ್ಡ ನದಿಗಳು.
ಮನುಷ್ಯರ ಸೃಷ್ಟಿಯ ಈ
ಅದ್ಭುತ ಯಾನ,
ಬಾನಿನಂಚಿಗೆ ಮುಟ್ಟುವ
ಸುಂದರ ಪಯಣ.
ಬಿಳಿ ಮೋಡಗಳ ಹಾಸಿಗೆ
ಮೈಯನ್ನು ತುಂಬಿ,
ಕನಸಿನ ಲೋಕಕ್ಕೆ
ಕರೆದೊಯ್ಯುವ ಹಾದಿ.
ಗಾಳಿಯ ರಭಸದಲಿ
ತೇಲುತ್ತಾ ಮುಂದೆ,
ಮರೆಯಾಯಿತು ಎಲ್ಲ
ಚಿಂತೆಯೂ ಒಂದೊಂದೇ
ಉಷಾರಾಣಿ ಗುರುಪ್ರಸಾದ್ ಕೊಡಗು



