ಕಾವ್ಯ ಸಂಗಾತಿ
ರಾಜೇಶ್ವರಿ ಪ್ರಕಾಶ
“ನಿಜ ದೈವ”


ನಾನು ಹುಟ್ಟಿದ್ದು ದೇವಸ್ಥಾನ ದ
ಪಕ್ಕದಲ್ಲಿಯೇ ಆದ್ದರಿಂದ ಗಂಟೆಗಳ ಶಬ್ದವೇ
ಜೋಗುಳವಾದವು
ಅಜಾನಗಳೇ ಸುಪ್ರಭಾತ ಗಳಾದವು
ಜೀವನದ ಭಾಗವಾಗಿ ಜೀವಕ್ಕೆ ತಣು ವಾಗಿ
ಯಾರು ಹಾಡಿದರು ಯಾರು ಬರೆದವರು
ಎಂಬೆಲ್ಲ ಪ್ರಶೆಗಳಿಗೆ ಉತ್ತರವೇ ಬೇಕಿರಲಿಲ್ಲ
ನೆಮ್ಮದಿಯಾಗಿದ್ದ ನೆಮ್ಮದಿ ಹಾಳಾಯಿತೇಕಿಂದು
ಗಂಟೆ ಪ್ರಾರ್ಥನೆ ಗಳೇ ಕತ್ತು ಹಿಸುಕುತಿವೆಯಿಂದು
ಜನಮನದ ಭಾವನೆಯ ಕೊಲ್ಲುತಿವೆ ಇಂದು
ಗೊಂದಲದ ಗೂಡಾಗಿಡೆ ನನ್ನೀ ಮನವು
ಆ ಬಹುರೂಪಿ ಪರಮಾತ್ಮನ ಕಂಡು
ಅಯ್ಯೋ ಏನಿತು ರೂಪ ಏನು ವೇಷ
ಸುಂದರವಾಗಿಹೆ ವೇಷಭೂಷದಲಿ
ಇಂಪಾಗಿರುವೆ ವೇದ ಪದಗಳಲಿ
ನೋಡಲು ಕೇಳಲು ಚಂದವೋ ಚಂದ
ಹೇ ದೇವನೇ ನಂಗೊತ್ತು ನೀನಲ್ಲಿಲ್ಲ
ಪದ ರೂಪವ ಮೀರಿಹೆ ನೀನು
ಅಯ್ಯೋ ಎಂದು ಕಾಣಬಲ್ಲೆ ನಿಜ ದೈವವನು.
ರಾಜೇಶ್ವರಿ ಪ್ರಕಾಶ



