ಕಾವ್ಯ ಸಂಗಾತಿ
ಭಾಗ್ಯ ಸಂ ಕೋಟಿ
“ಮೌನದೊಳಗೆ ಏನೆಲ್ಲಾ”


ಮೌನವೆಂದರೆ ಶೂನ್ಯವಲ್ಲ
ಮನದ ಬೆಳಕು
ಹೇಳದ ನಿಶಬ್ದ ನಾದ
ಹೇಳಲಾಗದ ಆಳವಾದ ಹಾಡು
ಗದ್ದಲದಲ್ಲಿ ಕಳೆದುಹೋದ ಸತ್ಯ
ನಿಶ್ಚಲದಲ್ಲಿ ಕಾಣುವ ನಿತ್ಯ
ಕಣ್ಣೀರಲ್ಲಿ ಮರೆಯಾದ ಕಥೆ
ನಗುಮುಖದ ಹಿಂದಿನ ವ್ಯಥೆ
ಮೌನವು ಸಹನೆಯ ಸುಹಾಸನೆ
ಸಮಾಧಾನದ ಪ್ರೇರಣೆ
ಹ್ರದಯದ ಹಂಬಲ
ಆತ್ಮದೊಳಗಿನ ನಂಬಲ
ಅಹಂಕಾರ ಶಮನವಾದಾಗ
ಆಂತರಿಕ ಶಾಂತಿ ಅರಳುವಾಗ
ಮಾತು ಮೀರಿದ ಭಾಷೆ
ಮಾನವೀಯತೆ ಉಳಿಸುವ ಆಶೆ
ಮೌನ ಅರಿತ ಮನದೊಳಗೆ
ಜೀವನವೇ ಕಾವ್ಯವಾಯಿತು
ಮೌನವೆಂದರೆ ಖಾಲಿತನವಲ್ಲ
ಮನದ ಆಳದ ಅಲೆ
ಮೌನದಲ್ಲಿಯೇ ಸಾಧನೆ
ಮೌನದಲ್ಲಿಯೇ ಶಿಖಿರ
ಭಾಗ್ಯ ಸಂ ಕೋಟಿ
ಜಮಖಂಡಿ



