ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನಾನು ಹುಟ್ಟಿದ್ದು ದೇವಸ್ಥಾನ ದ
ಪಕ್ಕದಲ್ಲಿಯೇ ಆದ್ದರಿಂದ ಗಂಟೆಗಳ ಶಬ್ದವೇ
ಜೋಗುಳವಾದವು
ಅಜಾನಗಳೇ ಸುಪ್ರಭಾತ ಗಳಾದವು

ಜೀವನದ ಭಾಗವಾಗಿ  ಜೀವಕ್ಕೆ ತಣು ವಾಗಿ
ಯಾರು ಹಾಡಿದರು ಯಾರು ಬರೆದವರು
ಎಂಬೆಲ್ಲ ಪ್ರಶೆಗಳಿಗೆ ಉತ್ತರವೇ ಬೇಕಿರಲಿಲ್ಲ

ನೆಮ್ಮದಿಯಾಗಿದ್ದ ನೆಮ್ಮದಿ ಹಾಳಾಯಿತೇಕಿಂದು
ಗಂಟೆ  ಪ್ರಾರ್ಥನೆ ಗಳೇ ಕತ್ತು ಹಿಸುಕುತಿವೆಯಿಂದು
ಜನಮನದ ಭಾವನೆಯ ಕೊಲ್ಲುತಿವೆ ಇಂದು

ಗೊಂದಲದ ಗೂಡಾಗಿಡೆ  ನನ್ನೀ ಮನವು
ಆ ಬಹುರೂಪಿ ಪರಮಾತ್ಮನ  ಕಂಡು
ಅಯ್ಯೋ ಏನಿತು ರೂಪ ಏನು ವೇಷ

ಸುಂದರವಾಗಿಹೆ ವೇಷಭೂಷದಲಿ
ಇಂಪಾಗಿರುವೆ ವೇದ ಪದಗಳಲಿ
ನೋಡಲು ಕೇಳಲು ಚಂದವೋ ಚಂದ

ಹೇ ದೇವನೇ ನಂಗೊತ್ತು ನೀನಲ್ಲಿಲ್ಲ
ಪದ ರೂಪವ ಮೀರಿಹೆ ನೀನು
ಅಯ್ಯೋ ಎಂದು ಕಾಣಬಲ್ಲೆ ನಿಜ ದೈವವನು.


About The Author

Leave a Reply

You cannot copy content of this page

Scroll to Top