ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಮುಸ್ಸಂಜೆಗೊಂದು
ಬೆಳಗಿನ ಅವಸರಕ್ಕೊಂದು
ಹೊರಡುವ ಹಕ್ಕಿಗಳ
ಸಾಲೊಂದು ಎಲ್ಲೋ
ಹೊರಟಂತಿದೆ
ಕಾಲದ ಅಳತೆಯೊಳಗೆ
ಕಳೆದ ಸಮಯವ
ಹುಡುಕಿ ಉಸಿರಿನ
ಸಂಭ್ರಮಕ್ಕೆ ಚಿತ್ರ ಬರೆಯಲು
ದಾರಿಯಿರದ ದಾರಿ
ಕಾಣದ ಹೆಜ್ಜೆಯ ಪಯಣ
ನಭಕೆ ನಂಬಿಕೆ ಅಂಟಿಸಿ
ಇಳೆಗೆ ಇಳಿವ ಕಾತರ
ಮತ್ತೆ ಬದುಕಿನ ಸುತ್ತ
ಅವಸರದ ಇಡುಗಂಟು
ಹಸಿವಿಗೆ ಅನ್ನದ ನಗು
ಮಣ್ಣೊಳಗೆ ಬೇರು ಬಿಟ್ಟಿದೆ
ಭತ್ತವಾಗಲು
ಉಸಿರು ಉಳಿಸಲು
ನೆಲದ ಮಾತು
ಹಕ್ಕಿಗೆ ಗೊತ್ತು
ಗೂಡಿನ ಒಳಗೆ
ಸಾಲು ಕಟ್ಟಿದ ಕನಸಿನ
ಮೆರವಣಿಗೆಯ ಯಾನ
ತಲುಪಿದ ಮೇಲೆ
ತಿರುಗುವ ಗಡುವು
ಒಂದು ಪಯಣದ ಬದುಕು
ಸುಪ್ತ ನದಿಯಂತೆ
ಹರಿದಷ್ಟು ಪರಿಶುದ್ಧತೆ
ಮನದ ಬಿಂಬದ ಚಿತ್ರ
ದಾರಿಯ ಹುಡುಕಬೇಕು
ಯಾನ ಹೊರಡಬೇಕು


About The Author

Leave a Reply

You cannot copy content of this page

Scroll to Top