ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಹಸಿರ ಹುಲ್ಲಿನ ಮೇಲೆ ನವಿರು ಬೆಳಕು ಬೀರುತಿದೆ 
ಉಸಿರಲಿ ಬೆರೆದ ಜೋಡಿಗೆ ಪವನ ಹರಸಿದಂತೆ ತೋರುತಿದೆ.

ದೂರದಲಿ ಹೆಂಚಿನ ಮನೆ ಇದ್ದರೆ ಅದೆಷ್ಟು ಚೆಂದವಲ್ಲವೇ 
ಕರಗಳ ಚಾಚಿ ಮಲಗಿದ ದೃಶ್ಯ ಮೋಜು ತರುತಿದೆ.

ಎತ್ತರದ ಮರಗಳು ಸೂರ್ಯನ ಕಿರಣಗಳ ಬಾಚಿ ತಬ್ಬಿಕೊಂಡಿವೆ.
ಉತ್ತರದ ದಿಕ್ಕಿನಲಿ ಉದ್ದಕ್ಕೆ ದಾರಿ ಸ್ವಾಗತ ಕೋರುತಿದೆ.

ಮಂಗಳದ ಕೋಮಲೆಗೆ ಸುಖದ ದಾಂಪತ್ಯ ನಾಂದಿ ಹಾಡಿದೆ
ಅಂಗಳದ ರಾತ್ರಿರಾಣಿ ಮದಿರೆಯಲಿ  ಕನಸು ಕರಗಿ ಸೋರುತಿದೆ.

ಜೀವನದ ಸಿಹಿಕಹಿಗಳ ಅರಿವು ಜಯದ ಸೋಪಾನ ತೂಗುವುದು 
ಪಾವನದ ಬದುಕು ದಾಂಪತ್ಯಕ್ಕೆ ಅಡಿಯಿಟ್ಟು ಸಂಭ್ರಮ ಏರುತಿದೆ.
ಶ್ರೀಜಯ.ಭ.ಭಂಡಾರಿ.

About The Author

Leave a Reply

You cannot copy content of this page

Scroll to Top