ಕಾವ್ಯ ಸಂಗಾತಿ
ರಾಜೇಶ್ವರಿ ಪ್ರಕಾಶ
“ಸಾಧನೆ”



ಚಿಂತನ ಮಂಥನ ಮಾಡು ಮನವೇ
ಅರಿವಿನ ಪೊರೆಯ ಕಿತ್ತೆಸೆದು
ನಾನಾ ವಿಧದ ಅಭಿರುಚಿ ಇರಲು
ರಸಸ್ವಾದನೆ ನಿನಗಿಹುದು
ತಡೆಯುವರಾರು ನೀ ಸಾಗುತಿರಲು
ನಿನ್ನ ಸಾಧನೆ ದೃಢ ವಾಗಿರಲು
ಕಲ್ಲುಮುಳ್ಳಿನ ದಾರಿಯಿದು
ಮೆಟ್ಟಿ ಸಾಗು ನೀ ಛಲವಿರಲು
ದಿಟ್ಟ ಹೆಜ್ಜೆಯನಿಟ್ಟು ಮುನ್ನಡೆ
ಅಟ್ಟ ಬೆಟ್ಟವೂ ಚಿಕ್ಕದೆ
ನಿನ್ನೊಳಗಣ ಬಲವ ಕಾಣು
ನಿನಗೆ ಶಕ್ತಿಸ್ಫೂರ್ತಿಯದೇ
ಒಮ್ಮೆ ಏರಿ ನೋಡು ಗುರಿಶಿಖರ
ಕಷ್ಟ ಕೋಟಲೆಗಳು ಅದೋ ತೃಣ ಸಮಾನ
ಸಾಧನೆಗೈದೆ ಅದೇ ನಿನ್ನ ಅಭಿಮಾನ.
ರಾಜೇಶ್ವರಿ ಪ್ರಕಾಶ.



