ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬೆನ್ನ ಹಿಂದೆ ಬೆಟ್ಟದಂತೆ ನಿಂತಿದ್ದೆ
,ಕಣ್ಣ ಮುಂದೆ ದಾರಿದೀಪವಾಗಿದ್ದೆ
.ನಿನ್ನ ಕೈ ಹಿಡಿದು ನಡೆದ ಹಾದಿ
ಇಂದಿಗೂ ನನ್ನ ಬಾಳ ಹಸಿರು,
ಇಂದು ನೀನಿಲ್ಲದೆ ಬದುಕು
ಬರೀ ಬಳಲಿಕೆಯ ಉಸಿರು.

ನನ್ನ ಸಣ್ಣ ತಪ್ಪುಗಳ ತಿದ್ದಿ ಬುದ್ದಿ ಹೇಳುತ್ತಿದ್ದೆ,
ಕಷ್ಟ ಬಂದಾಗ ಧೈರ್ಯ ತುಂಬಿ
ನಗು ಬೀರುತ್ತಿದ್ದೆ.
ನೀನು ಹಾಕಿಕೊಟ್ಟ ಹಾದಿಯೇ ನನ್ನಾಸ್ತಿ
ನಿನ್ನ ನೆನಪುಗಳೇ ನನ್ನ ಜೀವನದ ಬುತ್ತಿ.

ಅಪ್ಪ ಅಂದರೆ ಕೇವಲ ಎರಡಕ್ಷರವಲ್ಲ,
ಒಂದು ದೊಡ್ಡ ಆಲದ ಮರ,
ನೀನಿಲ್ಲದ ಈ ಬಾಳು ಈಗ ಮರುಭೂಮಿ
ಮರೆಯಾದರೂ ನೀನು ನನ್ನ
ಎದೆಯ ಗೂಡಿನಲ್ಲಿರುವೆ
,ನನ್ನ ಪ್ರತಿ ಯಶಸ್ಸಿನಲ್ಲೂ ನಿನ್ನ ದಿವ್ಯ ಚೇತನ

ನೀನು ಮರೆಯಾಗಿ ಹೋಗಿಲ್ಲ
ಇಲ್ಲಿಯೇ ಭೂಮಿ ಬೆಳೆ ಮಳೆಯಲ್ಲಿರುವೆ
ಆಗಾಗ ನಿನ್ನ ತುಂತರ ಹನಿ
ನನ್ನ ಕಣ್ಣೀರು ಮರೆಸುವವು ಅಪ್ಪ
ಅಪ್ಪ ಮತ್ತೊಮ್ಮೆ ಬಂದು ಪ್ರೀತಿ ತೋರು


About The Author

2 thoughts on “ಬನಶ್ರೀ ಹತ್ತಿ ವಿಜಯಪುರ ಅವರ ಕವಿತೆ “ಮರೆಯಾದ ನನ್ನಪ್ಪ””

  1. ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

    ಅತ್ಯುತ್ತಮ ಕವನ

Leave a Reply

You cannot copy content of this page

Scroll to Top