ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇಲ್ಲಿ ಮನುಷ್ಯತ್ವವನ್ನೂ ಮಣ್ಣು ಮಾಡಲಾಗಿದೆ ಮರುಳೇ
ಕರುಣೆ ಕನಿಕರಾದಿಗಳನು ದೂರ ದೂಡಲಾಗಿದೆ ಮರುಳೇ

ರಾತ್ರಿಗೆ ಸಿಮೀತವಾದ ಹೇಯಕೃತ್ಯಗಳೀಗ ಹಗಲಿಗಿಳಿದಿವೆ
ಬದುಕಿದ್ದಾಗಲೇ ಚರಮಗೀತೆಯ ಹಾಡಲಾಗಿದೆ ಮರುಳೇ

ಬಹುತೇಕರು ಹಡೆದವರ ಕಡೆಗಣಿಸಿ ಬದುಕುವವರೇ ಇಲ್ಲಿ
ಸಂಬಂಧಗಳಿಗೆ ತಣ್ಣಗಿದ್ದೇ ತರ್ಪಣ ಬಿಡಲಾಗಿದೆ ಮರುಳೇ

ಒಳಿತಿಗಿಂತ ಕೆಡುಕೇ ಕಿವಿಗೆ ಬೀಳುತಿಹ ಜಾಯಮಾನವಿದು
ಶಕುನಿಯನ್ನೇ ಮೀರಿಸುವ ದಾಳವ ಹೂಡಲಾಗಿದೆ ಮರುಳೇ

ಮಾನವ ಧರ್ಮ ಊನಗೊಂಡ ಶ್ವಾನದಂತೆ ಬೊಗಳುತಿದೆ
ಕಾಲನ ಬೇತಾಳ ಕುಂಬಾರನ ಹೆಗಲ ಏರಲಾಗಿದೆ ಮರುಳೇ


About The Author

Leave a Reply

You cannot copy content of this page

Scroll to Top