ಅನುವಾದ ಸಂಗಾತಿ
“ಮೇಣದ ಬತ್ತಿಯಂತೆ ಕರಗಬಲ್ಲೆ, ಬೆಳಗಬಲ್ಲೆ!”
ತೆಲುಗು ಮೂಲ: ಆಶಾರಾಜು,
ಕನ್ನಡಕ್ಕೆ: ಕೋಡೀಹಳ್ಳಿ ಮುರಳೀ ಮೋಹನ್



ಇಲ್ಲಿ ನಗುವುದೇ ನಿಷಿದ್ಧ,
ನನಗೆ ನಗುವುದು ಗೊತ್ತು.
ಇಲ್ಲಿ ಶಬ್ದವೇ ನಿಷಿದ್ಧ,
ನನಗೆ ಮಾತಾಡುವುದು ಗೊತ್ತು.
ಇಲ್ಲಿ ಪ್ರಶ್ನೆಗಳೇ ನಿಷಿದ್ಧ,
ನನಗೆ ಕಾರಣಗಳನ್ನು ಹುಡುಕುವುದು ಗೊತ್ತು.
ನಾನು ಮೇಣದ ದೀಪ.
ಸುಡುತ್ತಾ ಕರಗಿಹೋಗುವುದು ಗೊತ್ತು;
ಬೆಳಗಾಗುವವರೆಗೂ ಹೊಳೆಯುವುದೂ ಗೊತ್ತು.
ಕಣ್ಣೀರು ವಿಚಿತ್ರವಾದ ಇತಿಹಾಸ ಹೊಂದಿವೆ.
ಕೋಪದಂತೆ ಉರಿಯಾಗಿ ಬರುತ್ತವೆ,
ಶಾಂತಿಯಂತೆ ತಂಪಾಗಿ ಇಳಿಯುತ್ತವೆ.
ಸೋತಾಗ ಉಕ್ಕಿ ಹರಿಯುತ್ತವೆ,
ಗೆದ್ದಾಗಲೂ ಮಿನುಗುತ್ತವೆ.
ವೀರರು ಇದನ್ನೇ ಧೈರ್ಯ ಎನ್ನುತ್ತಾರೆ,
ಕವಿಗಳು ಇದನ್ನೇ ಅಲುಗದ, ಬೆದರದ ಬದುಕು ಎನ್ನುತ್ತಾರೆ!
ತೆಲುಗು ಮೂಲ: ಆಶಾರಾಜು
ಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್



