ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಬೆಳಕಿನ ಹಾದಿಯಲಿ
ನೀ ಜೊತೆಯಾಗಿ ನಡೆವೆ,
ಕತ್ತಲೆಯ ಕೋಣೆಯಲಿ
ಮೌನವಾಗಿ ಅಡಗುವೆ.
ಸುಖದ ದಿನಗಳಲಿ
ನೀಳವಾಗಿ ಬೆಳೆಯುವೆ,
ಕಷ್ಟದ ದಿನಗಳಲಿ
ನಿನ್ನೊಳಗೆ ಕರಗುವೆ.
ಮೌನಕ್ಕೆ ಜಾರುವೆ

ನಾ ನಕ್ಕರೆ ನೀ ನಗುವೆ ,
ನಾ ಅತ್ತರೆ ನೀ ಮರುಗುವೆ .
ನನ್ನ ಹೆಜ್ಜೆಗೆ ನಿನ್ನ ಹೆಜ್ಜೆ ,
ಸಾಗುವೆ ನೀನು ನನ್ನ
ಒಲವಿನ ದನಿ.
ಬಿಸಿಲಿಗೆ ಬೆಂದು
ಮಳೆಗೆ ನೆನೆದು
ಚಳಿಯಲ್ಲಿ ಕೊರಗುವೆ
ಒಳಗೆ ನೊಂದು

ಜಗದ ಜನ ಕೈಬಿಟ್ಟರೂ ,
ನೀನು ಜೊತೆ ಇದ್ದೆ
ಪ್ರತಿ ಘಳಿಗೆ.
ನನ್ನದೇ ಪ್ರತಿಬಿಂಬ,
ನನ್ನದೇ ಒಡನಾಡಿ,
ನೀನೇ ನನ್ನ ಪ್ರಾಣ
ಸಾರ್ವಕಾಲಿಕ ಗೆಳೆಯ,
ನಿತ್ಯ ಹಿಂಬಾಲಿಸುವ
ಓ ನನ್ನ ನೆರಳು!


About The Author

2 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ “ನನ್ನ ನೆರಳು””

  1. “ನನ್ನ ನೆರಳು “ತುಂಬಾ ಅರ್ಥಪೂರ್ಣವಾದ ಕವನ .ಧನ್ಯವಾದಗಳು ಸರ್.

Leave a Reply

You cannot copy content of this page

Scroll to Top