ಕಾವ್ಯ ಸಂಗಾತಿ
ಅಶ್ಫಾಕ್ ಪೀರಜಾದೆ
ಗಜಲ್


ಕಲರವರದ ನಂತರ ಕಲಹ ಮತ್ತೆ ಕಾಡಿದೆ
ಎದೆಯ ಒಳಗಿನ ಗಾಯ ಮತ್ತೆ ಚಿಗುರಿದೆ
ನೋವ ತರೆತರೆಯಾಗಿ ಸಾಗರ ಸೇರುತಿರೆ
ನೀರಿನಲಿ ಮೀನ ಹೆಜ್ಜೆ ಮತ್ತೆ ಮೂಡಿದೆ
ತಾವರೆಗಳು ಅಪರಾತ್ರಿ ಬಿಕ್ಕಳಿಸುತಿವೆ
ತಂಗಾಳಿ ನಿಂತು ಬೆಂಕಿ ಮತ್ತೆ ಸುರಿದಿದೆ
ಬರೆದುಕೊಂಡ ಬಂದ ಹಣೆಬರ ಇದು
ತಪ್ಪಿಸಬೇಕೆಂದ್ರೂ ತಪ್ಪದೆ ಮತ್ತೆ ಬರುತಿದೆ
ದೂರದಿ ಶಾಂತವಾಗಿ ಕಾಣುವ ಸಮುದ್ರ
ಕುದಿಯುವ ಲಾವಾರಸ ಮತ್ತೆ ತುಂಬಿದೆ
ಕಲ್ಲಿಗೆ ಹೃದಯವಲ್ಲ ಕಣ್ಣು ಬಂದರೆ ಸಾಕು
ಅಪೀಯ ಪಾಡು ಹಾಡಾಗಿ ಮತ್ತೆ ಬಂದಿದೆ
ಅಶ್ಫಾಕ್ ಪೀರಜಾದೆ.



