ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು.
ಕಂಗಳ ಕಾಟ


ಗೆಳತಿ……
ಕಥೆಯ ನೂರು
ಬಯಕೆಗಳ ಬೇಡಲು ಸಾವಿರ
ಅದೇನೊ ಕಾಡಿತು ಸವಿಯ ಸಾರ
ಹೊಳೆವ ನಿನ್ನಯ ಕಂಗಳ ಕಾಟದಲಿ
ಸೋತು ಬೆರಗಿದೆನು, ನಿನ್ನ ದರ್ಶನಕ್ಕೆ,!
ಗೆಳತಿ…
ವ್ಯಥೆಯು ನೂರು
ಕಥೆಯ ಕವನ ಬರೆಯಲು
ಪ್ರಣಯದಾಟ ಪ್ರೀತಿ ಬೆಸೆದು
ಕಪ್ಪು ಪರದೆಯೊಳಗೆ ಮಿಟುಕಿದ
ಕಂಗಳ ನೋಟವು ನನ್ನ ಸೆಳೆಯಿತು.!!
ಹಮೀದ್ ಹಸನ್ ಮಾಡೂರು.



