ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಮನಸ್ಸೆಂಬ ಬೆಳಕಿಂಡಿಯ ಮುಚ್ಚಳವ
ತೆರೆದು ನೋಡು ಇಡೀ ಬ್ರಹ್ಮಾಂಡವ
ಪರಮ ಗೂಡು ನಿನ್ನೊಳಗೆ…. !!೧!!

ಇಡಿ ಭೂಲೋಕ ಹುದುಗಿ ಇರುತಿರೆ ನಿನ್ನೊಳು
ನೀನೇ ದಾರಿ ದೀಪ ಕತ್ತಲೆಯ ಅಲೆಯೊಳು
ಹತ್ತಿದ ಉರಿಗೆ ತಣ್ಣೇ ಎಳಲು ನೀನು !!೨!!

ಒಂದೆಡೆ ನಗಿಸುವ ಮತ್ತೆ ಅಳಿಸುವ
ಕುಣಿಸುವ ಮೆರೆಸುವ ಮರಗಿಸುವ
ಸೂತ್ರಧಾರಿ ತುಂಟ ನಡೆಯುವ ನಿನ್ನದು!!೩!!

ಮನಸೆಂಬ ದೀಪದೊಲವಿನಲ್ಲಿ
ಹೊಸ ಹೊಸ ಕನಸಿನಾಗರದಲ್ಲಿ
ನೂರೊಂದು ಕಥೆಗಳ ಸರಣಿ ಕಂತು.. !!೪!!

ಅರಿಯದ ಕಾರ್ಪಣ್ಯ ಸಂಕಟಗಳ ದಾಳಿ
ಬೀಸಲಿ ,ಆರದು ನಿನ್ನೊಳಗಿನ -ಗಾಳಿ
ನಂದಿಸದು ಸ್ತ್ರೈರ್ಯವನು …!!೫!!

ನಿಟ್ಟುಸಿರಿನ ಕ್ಷಣದಲೂ ಧೈರ್ಯದ
ಬೆಳಕಿನ ಹಂದರದ ಹಚ್ಚಡ ಹಾಸಿದ
ನೀನೇ ಸಮಾಧಾನದ ಅದಿರು ….!!೬!!

ದಣಿದ ನನ್ನ ಉಸಿರಿಗೆ- ನಿನ್ನ ಮೃದು
ತಡಕಾಟ ಶಾಂತವಾಗಿಸುವದು
ನನ್ನ ಮುಂದಲ ಹೃದಯ ತಂತಿ ಮಿಟಿ!!೭!!

 ನನಗರಿವಿಲ್ಲದೆ ತಿಳಿದು ತಿಳಿಯದೇ
ಸರಿ ಹೊಂದಿಸಿ ಹೃದಯ ರಾಗ ತಾಳ
ಮೇಳಯಿಸುವೆ ನಿನ್ನ ಬೆಳಕಿನೊಳು!!೮!!

ಮನದಾಳದಲ್ಲಿ ಉಕ್ಕುತ್ತಿರುವ ಭಾವಗಳ
ಉದ್ವೇಗಕ್ಕೆ ನೀನಾಗುವೆ ಬೆಳಕಿಂಡಿ
ಅಳಿವು  ಅಳಿಸಿ ಶಾಂತಿ ಅಜರಾಮರ.,!!೯!!
 
 ಅಮರ ಜ್ಯೋತಿ ಮನಸ್ಸೇ ಪರಮ ಜ್ಯೋತಿ ಬೆಳಗುವ ಬೆಳಕಂಡಿ…. ನೀನೇ..!!!!


About The Author

Leave a Reply

You cannot copy content of this page

Scroll to Top