ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸದಾ ಸಣ್ಣೂರ
ಗಲ್ಲಿಯಾಚಿನ
ಹಸಿರೂರ ಪಥದಲಿ
ಅದೇ ಹೊಳಪಿನ ಅವಳು,
ಕಣ್ಣೋಟಕ್ಕೆ
ಸಿಕ್ಕ ಅಪರೂಪದ
ಕೆಂಪು ಸೌಂದರ್ಯದ  ಸುಂದರಿ,
ಜಗಕ್ಕೆ ನಾಚಿದ ನಿತ್ಯಾಂಬರಿ
ಜಗವನ್ನೇ ನಾಚಿಸಿದ
 ಕೆಂಪುರಂಗಿನ
ಪ್ರೇಮಸುಂದರಿ.

ಅಣಕಿಸುವ,ತವಕಿಸುವ,
ಕರುಣಿಸುವ, ಹಿಗ್ಗಿಸುವ
ಕುಗ್ಗಿಸುವ,ಪ್ರೇಮಿಸುವ  
 ಕುಕ್ಕುಕಣ್ಣಿನ  ವಾರೇ
ನೋಟದ ಒಲವಿಗೆ
ಸಿಕ್ಕ ಅವನು
ಸದಾ ಪ್ರೇಮಬಂಧಿ..
ಸವಿಮಾತಿನ ಸಖನೇ
ಸಂಬಂಧ ಬೆಸೆಯುವ
 ಭಾವಸಂಬಂಧಿ..
ಅವಳೊರಗಿನ
 ಅವಳಿಗೆ ಪ್ರೀತಿಯ ಕೊಟ್ಟರೆ
ಪ್ರೇಮದ ಮಳೆ ಸುರಿಸುವ
ಋತುಬಂಧಿ..ಅವಳು..

ಮಳೆ ಮೋಡಗಳು
ಕಂಗೆಟ್ಟು ದಿಕ್ಕೆಟ್ಟು  
ಓಡಾಡುವಾಗ,
ಗುಡುಗು, ಸಿಡಿಲ್
 ಆರ್ಭಟಿಸಿ,
 ಬೆಳಕಿನ ಮಿಂಚಿನ
ಸಮಯದಲ್ಲಿ,
 ಕೋಲ್ಮಿಂಚಿನ
ಕೆಂಡಕುಂಡದ ಗುಲಾಬಿಯ
 ಗುಂಗಿನ ವಿರಾಗಿಣಿಯಾಗಿ
ಸ್ತಬ್ಧ ವಿಹಾರದ
 ನಡುನಡುವೆ, ದಿವ್ಯವೇದನೆಯ,
ನವ್ಯ ನಿವೇದನೆಯೊಂದಿಗೆ
ಕೈ ಬೀಸಿ, ಕೈ ಚಾಚಿ
ಮಧುರ ವರ್ಣವ ರಾಚಿ
ಕರೆಯೋಲೆ ಕಳಿಸುವ
ಆದರದ ಅಂಬರಿಯಿವಳು.
ಕೆಂಪುಮೊಗದ ಗಿಳಿನಾಸಿಕದ
ಗರಿಗರಿ ನಗೆಯ,
ಫಳಫಳ ಕಣ್ಬೆಳಕಿನ
ಬೀಸುವ ಗಾಳಿಗೆ
ಜೋ ಜೋ ಲಾಲಿಯಾಡುವ
 ಶುಭ್ರಜ್ಯೋತ್ಸ್ನೆಯಿವಳು.
ಅಮರ ಮಧುರದ
ಪ್ರೇಮಗೀತೆಯಾಡುವ
ಸ್ವಪ್ನ ಸುಂದರಿ ಇವಳು.
ಸಂಭ್ರಮದ ಎಲ್ಲೆ ಮೀರಿದಾಗ
ಸಂತಸದ ಸರಸತೆಯ  
ಸೋಬಾನೆಯಾಡುವ
ವೈಶಾಖದ ಪ್ರೇಮದ
ಮೊಹರಿನ
ಇವಳೇ ಸುಗ್ಗಿಯ ಸಗ್ಗದ
ಪ್ರೇಮಾಂಬರಿಯಾದ
ಕೆಂಪು ಸೊಂಪಿನ
ಮುಂಗಾರಿಗೆ ಮುತ್ತಿನ
ಮುದ್ರೆಯನ್ನೊತ್ತಿದ
 *ಗುಲ್ ಮೊಹರ್*  ಇವಳು.


About The Author

19 thoughts on “ತಾತಪ್ಪ ಕೆ ಉತ್ತಂಗಿ ಅವರಕವಿತೆ “ಪ್ರೇಮದಮೊಹರು””

  1. ನಿಮ್ಮ ಮಾತುಗಳು ಕೇಳಲು ಚಂದ
    ನಿಮ್ಮ ಕಾವ್ಯ ಸೃಷ್ಟಿ ಓದಲು ಚಂದ

  2. ಅವಳಿಗೆ ಪ್ರೀತಿಯ ಕೊಟ್ಟರೆ
    ಪ್ರೇಮದ ಮಳೆ ಸುರಿಸುವ
    ಋತುಬಂಧಿ ಅವಳು….. Super line sir♥️

    ಗುರುಗಳೇ ನಿಮ್ಮ ಪದಗಳ ಜೋಡಣೆ
    ಹಾಗು ನಿಮ್ಮ ಕಾವ್ಯ ಸಂಗಾತಿ.. ಸಾಲುಗಳು ತುಂಬಾ ಅದ್ಬುತವಾಗಿದೆ ಸರ್

  3. ನಿಮ್ಮ ಪ್ರೇಮ ಕವಿತೆಯ ಸಾಲುಗಳು ನನ್ನ ಕಣ್ಣ ಮುಂದೆ ರೂಪಸಿಯ ತಂದು ನಿಲ್ಲಿಸಿದವು ಗುರುಗಳೇ,,❤️

  4. ನಿಮ್ಮ ಸಾಹಿತ್ಯ ಅಭಿರುಚಿಗೆ ಅಭಿನಂದನೆಗಳು ಸರ್ ತುಂಬಾ ಚನ್ನಾಗಿದೆ ಕವಿತೆ

  5. ನಿಮ್ಮ ಉತ್ತಮ ಮನಸ್ಸಿನಿಂದ ಬಂದಿರುವ ಅದ್ಭುತ ಸಾಲುಗಳು ಸರ್
    Very interesting sir

  6. ನಿಮ್ಮ ಕವಿತೆ ತುಂಬಾ ಚೆನ್ನಾಗಿ ಇದೆ ಗುರುಗಳೇ ❤️

  7. ನಿಮ್ಮ ಪ್ರೇಮ ಸುಂದರಿಯ ಕುರಿತ ನಿಮ್ಮಯ “ಗುಲ್ ಮೋಹರ್ “ಕವನ ಸುಮಧುರ, ಸುಲಲಿತ, ಸುಶ್ರಾವ್ಯಭರಿತ, ಸುಂದರ ಸಾಲುಗಳು ಪ್ರೇಮದ ಮಳೆ ಸುರಿಸುವ ಸಂಭ್ರಮದ ಸಿಂಚನದಂತಿದೆ ಸರ್

  8. ನೀವೂ ಚಂದ, ನಿಮ್ಮ ಕವಿತೆಯ ವರ್ಣನೆಯೂ ಚಂದ,
    ಸಾಲುಗಳೂ ಚಂದ, ಸಾಲಿನಲ್ಲಿರುವ ಪ್ರೇಮವು ಚಂದ, ಇದೆಲ್ಲದರ ಮುಂದೆ, ನೀವು ನಮ್ಮೊಟ್ಟಿಗೆ ಕಳೆದ ಆ ಸುಂದರವಾದ ಕ್ಷಣ ದಿನಗಳೇ ಚಂದ…. ❤️ ಇಂತಿ ನಿಮ್ಮಯ ಶಿಷ್ಯ….

  9. ನಿಮ್ಮ ಸಾಹಿತ್ಯ ಅಭಿರುಚಿಗೆ ಅಭಿನಂದನೆಗಳು ಸರ್ ತುಂಬಾ ಚನ್ನಾಗಿದೆ ಕವಿತೆ….❤️ ಇಂತಿ ನಿಮ್ಮಯ ಶಿಷ್ಯ….

Leave a Reply

You cannot copy content of this page

Scroll to Top