ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅರವತ್ತೆಪ್ಪತ್ತರ ಅಜ್ಜಿ
ತಲೆಮೇಲೆ ಬಿಳಿ ಹೆರಳು
ಬಾಯಲ್ಲಿ ಹಳದಿ ಹಲ್ಲು
ತುಟಿಯಂಚಿನಿಂದ ಸೋರುವ ಮೆಲ್ಲು
ಈ ಕಿವಿಯಿಂದ ಆ ಕಿವಿಯ ತನಕ ನಗು ನಗುವ  ಸೆಲೆ

ಬಂದ ವಿದೇಶಿ ಯಾತ್ರಿಕನಿಗೆ ಕೇಳುವಳು ಮಾರ್ಗದರ್ಶಿಯಾಗಿ
ಹಲೋ ಸರ್ ಹೌ ಡು ಯು ಡು
ಮತ್ತು ವಾಟ್ ಕ್ಯಾನ್ ಐ ಡು!

ನಗುತ ಹೇಳುವಳು ನಮಗೆ
ಇದು ನನ್ನ ದಿನ ನಿತ್ಯದ ಕಾಯ!
ಯಾವ ಗೀತೆಯೂ ಬೇಡ ನನಗೆ
ಯಾವ ಭೂಲೋಕದೈಸಿರಿಯೂ ಬೇಡ
ದಿನ ಪೂರ್ತಿ ಹೃದಯ ತಣಿಯುವ ಈ ದುಡಿಮೆಯೇ ಸಾಕು

ವಿರಾಮದಲ್ಲಿ ನನ್ನ ಐಚ್ಛಿಕದ ತಿನಿಸು ಬೇಕು
ಕಂಡವರೊಡನೆ ಮನ ಬಿಚ್ಚಿ ಮಾತನಾಡ ಬೇಕು.

ರಾತ್ರಿ ಮಲಗುವ ಸಮಯ
ಮೇಲಕ್ಕೆ ಹೋಗಿರುವ ಗಂಡ
ನೆಲಕ್ಕಿಳಿದು ತನ್ನ
ಮನದಾಳ ತಣಿಸುವ ಸಮಯ.

ದೂರದಲ್ಲಿಯ ಮಕ್ಕಳು
ಜೀವಿಸಲಿ ಅವರದ್ದೇ ಜೀವನ
ಅವರವರಿಗೆ
ನನಗ್ಯಾಕೆ ಅವರ ಚಿಂತೆ.  

ಬಂದಾಗ ಮೊಮ್ಮಕ್ಕಳು ತಾ
ಪ್ರೀತಿ ಹರಿಬಿಡುವ ಸಮಯ
ಬೆಳದಿಂಗಳು ಚೆಲ್ಲಾಡುವ ಸಮಯ
ಪಾಟಿ ಪಾಟಿ ಎಂದು ಮುದ್ದಾಡುವ ಸಮಯ

ಇಂದು ಇಂದಿಗೆ
ನಾಳೆ ನಾಳೆಗೆ
ಕಲಿಯಲಿಕ್ಕೇನಿಲ್ಲ ಈಕೆಗೆ
ಮುದ್ದುಕ್ಕಿ ಬರುವುದು ಈಕೆಯ
ಜೀವನ ಸಂಗೀತಕ್ಕೆ,
ಜೀವನ ಪ್ರೀತಿಗೆ ,
ಈಕೆಯ ಜೀವನ ಛಾತಿಗೆ.  

ಹಾರೈಕೆಯಿಷ್ಟೇ
ಇಂಥ ಆತ್ಮೋನ್ನತಿ ನಮ್ಮೆಲ್ಲರಿಗೂ  ಸಿಗಲೆಂದು ,
ಅವಳ ಹೃದಯ ಪೂರ್ವಕ ನಗು
ನಮಗೂ ಬರಲೆಂದು!!

ಕರುಣಿಸಲಿ ಆತ ಸದ್ಗತಿ ಈಕೆಗೆ
ಅವಳದ್ದೇ ದಿನದಂದು
ಅವಳದ್ದೇ ಬಯಕೆಯಂತೆ


About The Author

1 thought on “ಡಾ ಡೋ ನಾ ವೆಂಕಟೇಶ “ಸಂತೃಪ್ತಿ””

  1. ಮಾರ್ಗದರ್ಶಿಯ ಈ ಮಾತು ಸದಾ ಅರಳುತ್ತಿರಲಿ.
    ಅದ ಕಂಡ ತಮ್ಮ ಭಾವನೆಗಳು ಹರಿಯುತ್ತಿರಲಿ.
    ವೆಂಕಣ್ಣ… ಒಳ್ಳೆಯ ಕವನ. …
    ಡಾ||ಕೆ.ಬಿ. ಸೂರ್ಯ ಕುಮಾರ್ ಮಡಿಕೇರಿ

Leave a Reply

You cannot copy content of this page

Scroll to Top