ಕಾವ್ಯ ಸಂಗಾತಿ
ಗೊರೂರು ಅನಂತ ರಾಜು
ಹನಿಗವನಗಳು


ಗೊತ್ತೇ..?
ಮಡದಿಯ ಹೆಸರಿನ ಮುಂದೆ
ಗಂಡನ ಹೆಸರು ಏಕಿರುತ್ತದೆ
ಯೋಚಿಸಿ ತುಸು ಹೊತ್ತು
ಮುಂದೆ ಮುಂದೆ ನಡೆಯುತ್ತಾನಲ್ಲ
ಲಗೇಜ್ ಹೊತ್ತು
ಗೊತ್ತಿಲ್ಲ..
ವರಾನ್ವೇಷಣೆಯಲ್ಲಿ ಜೋಡಿ
ಚಪ್ಪಲಿ ಸವೆಸಿದ ಅಪ್ಪನಿಗೆ
ತನ್ನ ಮಗಳ ಹಿಂದೆ ಹುಡುಗರು
ಹನ್ನೆರೆಡು ಚಪ್ಪಲಿ ಸವೆಸಿದ್ದು
ಗೊತ್ತಿಲ್ಲ..
ಗೊತ್ತೇ..?
ದುರಂತ ಕಥೆ ಕಾದಂಬರಿ
ಬರೆದು ಪ್ರಸಿದ್ಧನಾದ
ಕತೆಗಾರನಿಗೆ ಸ್ಫೂರ್ತಿ
ಅವನ ಹೆಂಡತಿ ಎಂಬುದು
ಗೊತ್ತೇ..?
ಗೊತ್ತಿಲ್ಲ..
ಹುಡುಗರು ಚುಡಾಯಿಸ್ತಾರೆ ಅಂತ
ಬಿಡ್ತಾರಾ ಹುಡುಗಿಯರು
ಧರಿಸೋದು ಮಿಡಿ
ಹುಡುಗಿಯರಿಗಾಗಿಯೇ ತಲೆ ಕೆಡಿಸಿಕೊಳ್ಳುವ ಹುಡುಗರು
ಬಿಡ್ತಾರ ಸೇದೋದು ಸಿಗರೇಟು ಬೀಡಿ ಗೊತ್ತಿಲ್ಲ..!
ಗೊರೂರು ಅನಂತರಾಜು



