“ಮಧ್ಯಘಟ್ಟವೆಂಬ ಒಂದು ಮೈಲಿಗಲ್ಲು”
ಪುಸ್ತಕ ಸಂಗಾತಿ “ಮಧ್ಯಘಟ್ಟವೆಂಬ ಒಂದು ಮೈಲಿಗಲ್ಲು” ಊರೂರು ಅಲೆಯುತ್ತಲೆ ಬದುಕು ಕಟ್ಟಿಕೊಳ್ಳುವುದನ್ನು ಕಲಿತ ಮನುಷ್ಯನಿಗೆ ವಲಸೆ ಎನ್ನುವುದು ಅವನ ಬದುಕಿನ ಅವಿಭಾಜ್ಯ ಅಂಗ. ತನ್ನ ಅಸ್ತಿತ್ವದ ಸಲುವಾಗಿ, ಹೊಟ್ಟೆ ಪಾಡಿನ ಸಲುವಾಗಿ ಆತ ಸೂಕ್ತ ಸ್ಥಳವೊಂದರ ಆಯ್ಕೆಗೆ ತೊಡಗುತ್ತಾನೆ. ಇದು ಮನುಷ್ಯ ಸಹಜ ಪ್ರಕ್ರಿಯೆ ಅವನ ಈ ಕ್ರಮದಿಂದಾಗಿಯೇ ರಾಜ್ಯ ಸಾಮ್ರಾಜ್ಯಗಳು ಹುಟ್ಟಿಕೊಳ್ಳುತ್ತವೆ ಅಳಿಸಿಹೋಗುತ್ತವೆ. ಕೆಲವೊಂದು ಚರಿತ್ರೆಯಲ್ಲಿ ದಾಖಲಾಗುತ್ತವೆ ಮತ್ತೆ ಮುಖ್ಯವಲ್ಲದ್ದು ಎಲ್ಲಿಯೋ ಕಣ್ಮರೆಯಾಗಿ ಬಿಡುತ್ತವೆ. ಅಂತಹ ಒಂದು ಕಾಲಘಟ್ಟದ ಎಳೆಯನ್ನು ಹಿಡಿದು ಒಂದು ಶತಮಾನದ ಕತೆಯನ್ನು […]
ಕ್ರಿಸ್ತನಿಗೆ ಒಂದು ಪ್ರಶ್ನೆ
ಕ್ರಿಸ್ತನಿಗೆ ಒಂದು ಪ್ರಶ್ನೆ ಅಕ್ಷತಾ ರಾಜ್ ನೀನಂದು ನೋಡಿದೆಯೆಂದರು….ಯಾವ ಹೊಸರೂಪವಿತ್ತು ಬಾನಿನಲ್ಲಿ?ಹೊಳೆವ ನಕ್ಷತ್ರವೇ! ಅಥವಾ ಕಾರ್ಮುಗಿಲೇ!ಇದ್ಯಾವುದೂ ಅಲ್ಲವೆಂದರೆ ಉಲ್ಕೆ ಪ್ರವಾಹವೇ?ಯಾವುದೂ ಅರ್ಥವಾಗದಿದ್ದಾಗ ನಿನ್ನ ಹುಟ್ಟೆಂದರುಹೌದೇ ! ನಿನ್ನ ಹುಟ್ಟಷ್ಟು ಅಪರೂಪವೇ ಬಿಸಿಲು ಬೆಳ್ದಿಂಗಳಂತೆ? ನೀನಂದು ಅತ್ತೆಯೆಂದರು….ಯಾವ ತಾಪದ ಹನಿ ತೋಯ್ದಿತ್ತು ನೆಲ ?ಚುಚ್ಚಿದ ಮೊಳೆಯದ್ದೇ ! ಅಥವಾ ಹೊತ್ತ ಶಿಲುಬೆಯದ್ದೇ!ಇದಾವುದೂ ಅಲ್ಲವೆಂದರೆ ಮುಳ್ಳುಕೀರೀಟದ ಭಾರವೇ?ಯಾವುದೂ ಅರ್ಥವಾಗದಿದ್ದಾಗ ತನುವಿನ ನೋವೆಂದರುಹೌದೇ ! ನಿನ್ನ ಕಂಬನಿಯಷ್ಟು ದುರ್ಬಲವೇ ಮಂಜಿನಂತೆ ? ನೀನಂದು ನಕ್ಕೆಯೆಂದರುಮತ್ತೆ ಮೂರು ದಿನದೊಳಗೆ ಎದ್ದು ಬಂದಾಗಯಾವ ಸಂತಸಕ್ಕಾಗಿ […]
ಮುಗುಳು
ಮುಗುಳು ವೀಣಾ ರಮೇಶ್ ಇರುಳ ಸೆರಗೊಳಗೆತಿಳಿಮೌನ ಸುರಿದುಬಿಗುಮಾನ ಕಳೆದುಬೆರೆತು ಗಂಧದೊಳಗೆಈ ಮನವದು ಬಿರಿದುನಿನ್ನ ಸನಿಹದಲಿಮೌನವದು ಘಾಸಿ ಬಯಲು ಅಲಯದಲಿಹಕ್ಕಿ ಹಾರುತಿದೆನಿನ್ನನೆನಪುಗಳ ರೆಕ್ಕೆಕಟ್ಟಿ, ಪ್ರತಿದಿನವೂ ಸೋತಿದೆಹಾರಿ ಬರಲೇನು ಈಹೃದಯ ತಟ್ಟಿ ಮುಸುಕು ಬೀರಿದ ಮುಗುಳುಲಜ್ಜೆಯೊಳಗೆ ಅದೇ ನೀನುಸಜೆಯಾಗಿದೆ ಪ್ರೀತಿಯಸರಳೊಳಗೆ ನಾನು ಎಳೆದು ಬಿಡು ಮುಸುಕುಬೀರಿ ಮಲಗಿದ,ಮೌನದ ಪರದೆನಿನಗಲ್ಲವದು ಶೋಭೆನಿನ್ನ ಮುಗುಳುನಗುವದು ಹೊತ್ತು ತರದೆಮೌನ ಕೋಟೆಗೆ ಪ್ರಭೆ **************************
ಹಾಯ್ಕು
ಹಾಯ್ಚಳಿ! ಶಾಲಿನಿ ಆರ್. ೧)ಚಳಿ ಸುಳಿಗೆ ಶಿಲೆಯಾದಳವಳು ಕರಗದಂತೆ ೨)ಬೆಚ್ಚಿಸದಿರು ಬೆಚ್ಚಗಿಡು ನೆನಪಾ ಕೊನೆ ಚಳಿಗೆ ೩)ಮಂಜಿನ ಹನಿ ಕರಗಲರಿಯದು ಬೆಚ್ಚಗಾದರೂ, ೪)ಬಿರಿದ ತುಟಿ ನೆನಪಿಸುತಿದೆಯೋ, ವಸಂತ ಋತು, ೫)ಬಿಸಿ ಬಿಸಿ ಚಾ ಮುಂಜಾನೆಯ ಚಳಿಗೆ ನೀ ನೆನಪಾದೆ, ೬)ಹಗಲು ಮಾಯ ಇರುಳ ಹಾಸಿನ ಮೇಲೆ ಚಳಿ ಗಾಳಿಗೆ ೭)ನಮ್ಮೀ ಪ್ರೀತಿಗೆ ಮರೆಯಾಯಿತೇನು ಹಗಲು ನಾಚಿ, ೮)ತೇವಗೊಂಡಿದೆ ಮತ್ತೆ ಆರುವ ಮುನ್ನ ಹೇಮಂತ ಋತು, ೯)ಮುಗಿಯದಿದು ಮಾಗಿ ಮುಗಿವ ಮುನ್ನ ಮಬ್ಬಿನ್ಹಗಲು ೧೦)ಹಗಲು ನುಂಗಿ ಬಿಗಿಯಾದವು ಇರುಳು […]
ಯುಗ ಯುಗದ ಸೀತೆಯರು
ಯುಗ ಯುಗದ ಸೀತೆಯರು ರೇಶ್ಮಾಗುಳೇದಗುಡ್ಡಾಕರ್ ಇದು ಚರಿತ್ರೆಯ ಅವತಾರವಲ್ಲನಿತ್ಯವು ಉದ್ಭವಿಸುವಉದ್ವೇಗಗಳಿಗೆ ಇತಿಹಾಸಮರುಕಳಿಸುತ್ತಲೇತನ್ನ ಇರವ ಸಾಧಿಸುತ್ತದೆಯಲ್ಲ … ರಾಮನಿಲ್ಲದ ಸೀತೆಯರಿಗೆಕಮ್ಮಿ ಇಲ್ಲ ಈ ಜಗದಲ್ಲಿಒಡಲ ಕುಡಿಗಾಗಿ ಬದುಕಸವೆಸುವಳು ಕಂಡವರಸೆರಗಲ್ಲಿ ಗಂಡ ಬಿದ್ದರು ತನ್ನಬೆವರ ಹನಿಯ ದೀಪವಾಗಿಸಿಮನೆಯ ಬೆಳಗುವಳು …. ನೊರೆಂಟು ಮಾತುಗಳುಹಾದಿ – ಬೀದಿಯ ರಂಪಗಳುಎಷ್ಟಿದ್ದರು ಮನವದು ಗಟ್ಟಿಯಾಗುತ್ತಲೆಸಾಗುವದು ಕಲ್ಲು ಬಂಡೆಯನ್ನು ಮೀರಿಸಿಬದುಕಿನ ದಾರಿಯ ಹಿಡಿಯುವುದು ಸಮಯದೊಂದಿಗೆ ಓಡಿತಿಂಗಳ ಪಗಾರವನು ಕಾಪಿಟ್ಟುಪುಟ್ಟ ಪುಟ್ಟ ಕನಸ ನೇರವೇರಿಸಿತನ್ನ ಒಡಲ ಸಿರಿಗಾಗಿ ನಗುವ ಕಾಣುವಳುಎಲ್ಲ ನೋವ ಮರೆತು ….. ತ್ರೇತಾಯುಗದ ಸೀತೆಗೆ […]
ಗಜಲ್
ಗಜಲ್ ಮರುಳಸಿದ್ದಪ್ಪ ದೊಡ್ಡಮನಿ ಹಸಿದ ಕೂಸಿಗೆ ಹಾಲಿಲ್ಲದೆ ಅಳುತಿದೆ ಸಖಿಸೊಸಿದ ಹಾಲಿಗೆ ವಿಷವು ಬೆರೆತಿದೆ ಸಖಿ ದುಡಿವ ಕೈಗೆ ಕೆಲಸವಿಲ್ಲದೆ ನೊಂದಿದೆ ಬದುಕುಗಗನಕ್ಕೆರಿದ ಬೆಲೆ ಕಂಡು ಮನ ಒದ್ದಾಡುತಿದೆ ಸಖಿ ಉಳ್ಳವರ ಉಡಿ ತುಂಬಿ ತುಳುಕ್ಯಾಡಿ ಹೋಗಿವೆಬಡವರ ಮನೆ ದೀಪಕೆ ಎಣ್ಣೆಇಲ್ಲದೆ ಆರುತಿದೆ ಸಖಿ ಎಲ್ಲಿಯ ತನಕ ಹುಚ್ಚಾಟ ಕಚ್ಚಾಟ ತಿಳಿಯದುಮನು ಕುಲಕೆ ಹೊಸೆದು ಬತ್ತಿ ಇಡುತಿದೆ ಸಖಿ ಮರುಳ ನಮ್ಮನಾಳುವ ದೊರೆಗೆ ಸಿರಿವಂತರ ಚಿಂತಿನಾಡು ಹಾಳಾಗುತ ನಾಳೆ ಹತ್ತಿರ ಬರುತಿದೆ ಸಖಿ ******************************************
ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….5 ಅಪ್ಪ ಅವ್ವನ ಅದ್ಧೂರಿ ಮದುವೆ ಜೋಯ್ಡಾದಲ್ಲಿ ಶಾನುಭೋಗಿಕೆಯ ಕೆಲಸ ತುಂಬಾ ಅನುಕೂಲಕರವಾಗಿತ್ತು. ತಿಂಗಳ ಸಂಬಳದಲ್ಲಿ ಒಂದು ಪೈಸೆಯನ್ನೂ ಖರ್ಚುಮಾಡಗೊಡದೆ ಹಳ್ಳಿಯ ರೈತಾಪಿ ಜನ ದವಸ-ಧಾನ್ಯ ತರಕಾರಿಗಳನ್ನೆಲ್ಲ ತಂದುಕೊಟ್ಟು ಸಹಕರಿಸುತ್ತಿದ್ದರಂತೆ. ಚಾವಡಿಯ ಒಂದು ಮೂಲೆಯಲ್ಲಿಯೇ ವಾಸ್ತವ್ಯಕ್ಕೆ ಅವಕಾಶವೂ ಇತ್ತು. ಬೆಟ್ಟದ ಹಳ್ಳಿಗಾಡಿನ ಹಳೆಯ ಕಟ್ಟಡವಾದ್ದರಿಂದ ಸಹಜವಾಗಿಯೇ ಕೋಣೆ ತುಂಬಾ ಬಿಲಗಳಿದ್ದವು. ಆ ಬಿಲಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಇಲಿ ಹೆಗ್ಗಣ ಮತ್ತು ಅವುಗಳ ವಾಸನೆ ಹಿಡಿದು ಅಲ್ಲಿಗೆ […]
ಮದರಂಗಿ (ಮೆಹೆಂದಿ)
ಮದರಂಗಿ (ಮೆಹೆಂದಿ) ಮದರಂಗಿಯಲ್ಲಿ ಮನಸ್ಸಿನ ರಂಗು ಮೂಡಿದೆ. ಆಶಾ ಸಿದ್ದಲಿಂಗಯ್ಯ ಮದುವೆಯ ಸಂದರ್ಭದಲ್ಲಿ ಮದುಮಗ ಅಥವಾ ಮದುಮಗಳಿಗೆ ಕೈಗೆ ಹಚ್ಚುವ ಪ್ರಾಕೃತಿಕ ಬಣ್ಣ. ಎಂದರೆ ಇದೊಂದು ಎಲ್ಲರಿಗೂ ಇಷ್ಟವಾಗುವ ನಿಸರ್ಗದ ಒಂದು ಗಿಡವಾಗಿದೆ. ಔಷಧೀಯ ಗುಣವುಳ್ಳ ಗಿಡವಾಗಿದ್ದು, ಇದರ ಸೊಪ್ಪನ್ನು ಔಷಧಕ್ಕೆ ಬಳಸುತ್ತಾರೆ. ಭಾರತೀಯ ಸಂಪ್ರದಾಯದಲ್ಲಿ ಕೈಗಳಿಗೆ ಬಣ್ಣವನ್ನು ಹಚ್ಚಿಕೊಳ್ಳುವ ರೂಢಿ ಇದೆ. ಮದರಂಗಿ ತಯಾರಿಕೆ ಮದರಂಗಿಯನ್ನು ಕೈಗಳಿಗೆ ಹಚ್ಚಿಕೊಳ್ಳುವುದಾದರೆ, ಮದರಂಗಿಯ ಸೊಪ್ಪು, ನಿಂಬೆಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಅರೆದು, ಕೈಗಳಿಗೆ ಹಚ್ಚಬೇಕು. ವಿಜ್ಞಾನ ಮುಂದುವರಿದ ಹಾಗೆ […]
ಚಂದಿರನ ಬೆಳದಿಂಗಳಲ್ಲಿ
ಭಾವಲಹರಿ… ಭಾವಲಹರಿ… ರಶ್ಮಿ.ಎಸ್. ಒಬ್ಬಂಟಿಯೆನಿಸಿದಾಗಲೆಲ್ಲ ಬಾಲ್ಕನಿಗೆ ಬಂದು ನಿಲ್ತೇನಿ. ಅದೆಷ್ಟು ದೂರದ ಗೊತ್ತಿಲ್ಲ.. ಅಷ್ಟೂ ದೂರದಿಂದ ನಕ್ಷತ್ರವೊಂದು ಮಿಣಮಿಣ ಅಂತ ಮಿಣುಕ್ತದ. ಕಣ್ಣುಪಿಳುಕಿಸಿ, ಕಣ್ಣಾಗ ನಗ್ತದ. ನನ್ನ ಮನಿ ಮುಂದಿನ ಬೇವಿನ ಮರದ ಎಲೆಗಳು ತಣ್ಣಗ ಗಾಳಿ ಸೂಸ್ತದ. ಅದರೊಳಗೊಂದು ಕಹಿಯ ಕಂಪೂ ಇರ್ತದ. ಇರುಳಿನ ತಂಪೂ ಇರ್ತದ. ಅಪಾರ್ಟ್‌ಮೆಂಟಿನಾಗ ಸಾಕಿದ್ದ ನಾಯಿ ಚೂರಿ ಬಂದು ಬೊಗಳ್ತದ. ‘ಚೂರಿ ಮಲಗೂದು ಬ್ಯಾಡೇನು.. ಅಂದ್ರ ಸಾಕು..’ ಪಾಪ ತನಗೆ ಅನ್ಕೊಂಡು ಸುಮ್ನಾಗಿ ಒಳಗ ಹೋಗ್ತದ. ಮತ್ತದೆ ರಾತ್ರಿ, ಮತ್ತದೆ […]
ಗಝಲ್
ಗಝಲ್ ನೂರುಲ್ಲಾ ತ್ಯಾಮಗೊಂಡ್ಲು ನಿನ್ನ ಶಹರಿನಲಿ ಬೆಳಕಿಗೆ ಕಾಲು ಮೂಡಿದಾಗ ನೀನಿದ್ದೆಆ ಬೃಂದಾವನದಲಿ ದುಂಬಿ ಮಕರಂದ ಹುಡುಕುವಾಗ ನೀನಿದ್ದೆ ಕಣ್ಣ ಕೊಂಬೆಯ ಮೇಲೆ ನಕ್ಷತ್ರ ಮಿನುಗುವ ಹೊತ್ತುಭರವಸೆಯ ಕಿರಣವೊಂದು ರೆಪ್ಪೆ ಮೇಲೆ ಹರಿದಾಗ ನೀನಿದ್ದೆ ಯಾವುದೊ ವಿಳಾಸವಿಲ್ಲದ ದಾರಿಯಲಿ ಕಾಲುಗಳು ಎಡವಿದವು ನಿಜಆದರೆ ನೀ ಹೊರಳಿ ಹೋಗಿದ್ದ ದಾರಿಯಲಿ ಅತ್ತರು ಘಮಿಸಿದಾಗ ನೀನಿದ್ದೆ ಯಾವುದದು ಮರೆಮಾಚುವ ವಚನ ಕಾಡಿತ್ತೊ ಅರಿಯೆಆದರೂ ನಿನ್ನ ಆ ಮರೆಮಾಚಿಕೆ ವಿಫಲವಾದಾಗ ನೀನಿದ್ದೆ ಗೊತ್ತು ನಿರೀಕ್ಷೆಗಳೆಲ್ಲ ಹುಸಿಯಾಗದು ಎಂದೂ ‘ಸಾಘರ್’ಕಾಡುವಿಕೆಗೂ ಒಂದು ಮಿತಿಯಿದೆ […]