ಗಜಲ್
ಗಜಲ್ ಸಿದ್ಧರಾಮ ಕೂಡ್ಲಿಗಿ ಎದೆಯೊಳಗೆ ನೂರು ಮುಳ್ಳುಗಳಿದ್ದರು ಮೊಗದಲ್ಲಿ ನಗೆಹೂ ಸುರಿದವಳು ನೀನಲ್ಲವೆ ಮನದೊಳಗೆ ನೂರು ಕಂಬನಿಗಳಿದ್ದರೂ ಕಣ್ಣಲ್ಲಿ ಬೆಳದಿಂಗಳ ಚೆಲ್ಲಿದವಳು ನೀನಲ್ಲವೆ ಏನೊಂದನೂ ಬಯಸದೆ ಬಂಡೆಗಲ್ಲಿನಲೂ ಬದುಕುವ ಛಲ ಹೊತ್ತು ಹಬ್ಬುತ್ತ ನಡೆದೆ ನಿಂತ ನೆಲದೊಳಗೆ ಬೇರಿಳಿಸುತ್ತಲೇ ಬೆಳಕಿನ ಪಥದಲ್ಲಿ ಹೆಜ್ಜೆ ಊರಿದವಳು ನೀನಲ್ಲವೆ ಸಾಗರದಷ್ಟು ಪ್ರೀತಿಯಿದ್ದರೂ ಭೋರ್ಗರೆಯುವುದನೇ ಮರೆತು ಹೊಯ್ದಾಡುತಲಿದ್ದೆ ಮುತ್ತು ರತ್ನ ಹವಳಗಳ ಒಡಲಲಿ ಹೊತ್ತು ಜಲಧಿಯ ಮುಸುಕ ಹೊದ್ದವಳು ನೀನಲ್ಲವೆ ಸುಂದರತೆ ಎಂಬುದೂ ಸೋತು ನಿನ್ನೆದುರು ಮಂಡಿಯೂರಿ ತನ್ನಸ್ತಿತ್ವಕೇ ನರಳಾಡಿತು ಆಗಸದಷ್ಟು […]
ಯಾವುದೀ ನಕ್ಷತ್ರ?
ಕವಿತೆ ಯಾವುದೀ ನಕ್ಷತ್ರ? ಮಾಲತಿ ಶಶಿಧರ್ ಕವಿಗೆ ಏಕಾಂತ ಸಿಕ್ಕರೆ ಸಾಕುಚಂದ್ರ ನೇರವಾಗಿ ಎದೆಗೆನೆಗೆದುಬಿಡುವನುನನ್ನ ಏಕಾಂತದ ಅಂಗಳಕೆನಕ್ಷತ್ರವೊಂದು ಜಾರಿಬಿದ್ದಿದೆಇಂದ್ರಲೋಕದ ಸ್ವತ್ತೋಇಲ್ಲ ಚಂದ್ರನ ಅಣುಕಿಸಲು ಬಂತೋ?? ದಾಹದಾಳವ ಅರಿತುಎದೆಯ ಬಗೆದು ನೀರು ತೆಗೆದುತಣಿಸುತ್ತದೆಮುತ್ತು ರತ್ನಗಳ ಕಣ್ಣಂಚಲ್ಲೆಸುರಿಸುತ್ತದೆಈ ನಕ್ಷತ್ರದ್ದು ಇಲ್ಲೇ ಬಿಡಾರಬಿಡುವ ಹುನ್ನಾರೋ ಇಲ್ಲನನ್ನೇ ಎಳೆದೊಯ್ಯುವತಕರಾರೋ ಕಾಣೆ ಈ ನಕ್ಷತ್ರ ಅವರಿಬ್ಬರಂತಲ್ಲಒಬ್ಬ ತಿಂಗಳಿಗೊಮ್ಮೆ ಬಂದರೆಇನ್ನೊಬ್ಬ ತಾಸುಗಟ್ಟಲೆ ಹರಟಿಅಲ್ಲೆಲ್ಲೋ ಪಶ್ಚಿಮ ದಿಕ್ಕಿನಗುಡ್ಡದಡಿ ತಲೆ ಮರೆಸಿಕೊಳ್ಳುವ ನೆಟ್ಟಗೆ ಎದೆಗೆಹೂಡಿದ ಬಾಣಈ ನಕ್ಷತ್ರಜಲದವಶೇಷಗಳಚಿಲುಮೆ ಜಿನುಗುತ್ತದೆ ಜನ್ಮಾಂತರದ ವಿರಹ, ಕಾತರಕಾದ ವೇದನೆ ಯಾತನೆಕತ್ತಲರೆಕ್ಷಣದಲ್ಲಿ ಓಡಿಸಲುಬಂತೇನೋ ಈ […]
ಆತ್ಮಸಾಕ್ಷಿ
ಕವಿತೆ ಆತ್ಮಸಾಕ್ಷಿ ಪಂ. ರವಿಕಿರಣ ಮಣಿಪಾಲ. ಆತ್ಮಸಾಕ್ಷಿಯಲೇಖನಿಯನ್ನುಭೋಗದ ಮಸಿಯಲ್ಲದ್ದಿಇತಿಹಾಸ ಪುಸ್ತಕಬರೆಯುವುದುದುಸ್ತರ ಹಾಗಾಗಿಯೆಇತಿಹಾಸ ಪುಸ್ತಕತುಂಬಕಣ್ಣೀರ ನದಿಗಳುರಕ್ತದ ಕಾಲುವೆಗಳುನಿಟ್ಟುಸಿರ ಚಂಡಮಾರುತಗಳುಬೆಂದೊಡಲ ಹಸಿವಿನ ಜ್ವಾಲಾಮುಖಿಗಳುಉರುಳುರುಳಿ ಹೊರಳಿದಕೆಂಪುಸಿಂಹಾಸನಗಳುಭೂಕಂಪಗಳು ***
ಬಂದು ಹೋಗುವ ಮಳೆಯಲ್ಲಿ
ಕಥೆ ಬಂದು ಹೋಗುವ ಮಳೆಯಲ್ಲಿ ತೆಲುಗಿನಲ್ಲಿ: ಅಫ್ಸರ್ ಕನ್ನಡಕ್ಕೆ : ಚಂದಕಚರ್ಲ ರಮೇಶ ಬಾಬು “ಈ ಶಿಥಿಲಗಳ ಬಣ್ಣಗಳು ನಿನ್ನ ಹಿಡಿತಕ್ಕೆ ತುಂಬಾ ಚೆನ್ನಾಗಿ ಬಂದಿವೆ. ಈ ಬಣ್ಣಾನ್ನ ಅಷ್ಟು ಖಚಿತವಾಗಿ ನಿನ್ನ ಕಾನ್ವಾಸ್ ಮೇಲೆ ಅದ್ಹೇಗೆ ತರ್ತೀಯೋ ಮಾರಾಯಾ ! ಏನ್ ಮಿಕ್ಸ್ ಮಾಡ್ತಿಯೋ ಗೊತ್ತಿಲ್ಲಾಗ್ಲೀ ! ಪ್ರತಿ ಚಿತ್ರದಲ್ಲೂ ಅವಕ್ಕೆ ಭಿನ್ನವಾದ ಮೈ ಬಣ್ಣ ಹೊಂದಿರುವ ಹೆಣ್ಣುಗಳು…. ಒಂದು ಮೋಡ…. ನನಗೆ ಗೊತ್ತಿದ್ದ ಹಾಗೆ ಹತ್ತು ವರ್ಷದಿಂದ ಇದೇ ಅಲ್ವಾ ನಿನ್ನ ಕಾನ್ವಾಸ್…..!” ಕಾನ್ವಾಸಿನ […]
ಶಾವಾತ್ಮ ಪದಗಳು
ಕವಿತೆ ಮಡಿಕೆಯಡಿಯ ಬೆಳಕು ಶಾಂತಿವಾಸು ಮಡಚಿಡು ಮಡಿಕೆಯಾಗಿ…ಅಣುವು ಕೂಡಾ ಅನುವಾಗೆರಗಿದ ಅನುಭವವ ನಾಳೆಗಾಗಿ…. ಮಡಚಿಡು ಸಂತಸದಿಂದ…ಕದಡಿದ ನಿನ್ನ ಮನದ ಕತ್ತಲೆಯೊಳು, ರವಿ ಸಂಚಯಿಸಿದ್ದನ್ನು ಜತನದಿಂದ…. ಮಡಚಿಡು ಇಂದಿನ ನಿರಾಶೆಯ…ಇರಲದರಲಿ, ದುಃಖ ಅಲ್ಪಾಯುವೆಂದು ಸಾರುವ ಸಂದೇಶದ ಸದಾಶಯ… ಮಡಚಿಡು ಸೋಲುಗಳ ಸರಮಾಲೆ…ತೆರೆದು ನೋಡಲದುವೇ ಏಣಿ ಗೆಲುವಿಗೆ, ಗಟ್ಟಿಹೆಜ್ಜೆ ಇಟ್ಟು ಏರಲು ಮೇಲೆ ಮೇಲೆ… ಮಡಚಿಡು ಈಜಿ ಗೆದ್ದ ಜಯವನ್ನು …ವಿಧಿಯಾಟದ ದಾಳವಾಗುರುಳುವಾಗ ನೀನೇ ಅರಿಯಲು ನಿನ್ನಿರಿಮೆಯನ್ನು.. ಮಡಚಿಡು ಅಡಿಯಲ್ಲಿ ಸೋಲುಗಳ, ಸದಾ ಸುಳಿದಾಡಿ ಸೊಲ್ಲೆತ್ತದಂತೆ…ಎಲ್ಲಕ್ಕಿಂತ ಮೇಲೆ ಮಡಚಿಡು, ಸೋಲನ್ನು […]
ಅಂಕಣ ಬರಹ ಮರಿಕಪ್ಪೆ ಹಾರಿತು ಬಾವಿಯ ಹೊರಗೆ ಚಾವಣಿಯ ಹೊರೆ ಕಳೆದು ಶಿಥಿಲವಾದರೂ ನಿಂತೇ ಇದ್ದ ಗೋಡೆಯದು. ಆ ಮೋಟುಗೋಡೆಯ ಮಗ್ಗುಲಲ್ಲಿ ಕಪ್ಪೆಯಂತೆ ಹಾರಿ ಆ ಬದಿಯ ಕಿಟಕಿಯ ಚೌಕಟ್ಟಿಗೆ ಒಂದು ಕಾಲುಕೊಟ್ಟು ಬಲಗೈಯಿಂದ ಕಿಟಕಿಯ ಸರಳು ಹಿಡಿದು ಮೇಲೇರಿ ಎಡಗಾಲು ಎತ್ತಿ ಆ ಅರ್ಧಗೋಡೆಯ ಮೇಲೆ ಇಟ್ಟು ದೇಹವನ್ನು ನಿಯಂತ್ರಣಕ್ಕೆ ತಂದುಕೊಳ್ಳುತ್ತ ಕೈಗಳನ್ನೂ ಗೋಡೆಯ ಬೋಳುತಲೆ ಮೇಲೆ ಊರಿ ಪುಟ್ಟ ಲಗಾಟೆ ಹೊಡೆದು ಗೋಡೆ ಏರಿ ಕುಳಿತುಕೊಳ್ಳುತ್ತಿದ್ದೆವು. ನಮ್ಮ ಸಿಂಹಾಸನವದು. ಏರಿ ಕೂತವಳು ಮಹಾರಾಣಿ. ಉಳಿದವರು […]
ಕತ್ತಲೆ,ಬೆಳಕಿನೊಂದಿಗೆ
ಆಸ್ವಾದಿಸುವಾಸೆ ಇತ್ತೀಚೆಗೆ ಯಾಕೋ…
ಒಳ ಗೋಡೌನಿನಲಿ ಹೆಚ್ಚೆಚ್ಚು ಕತ್ತಲ
ದಾಸ್ತಾನು ಮಾಡುವಾಸೆ….
ಪುಸ್ತಕ ಬಿಡುಗಡೆ
ಪುಸ್ತಕ ಬಿಡುಗಡೆಗೆ ಬನ್ನಿ
ಗಜಲ್
ಅವನೊಲವೇ ಉಚ್ಛ್ವಾಸ ನಿಶ್ವಾಸಕೆ ಪ್ರಾಣವಾಯುವಾಗಿತ್ತು
ಪ್ರಶ್ನೆಗಳ ಬಲೆಯಲ್ಲಿ ಉಸಿರುಗಟ್ಟಿಸಿದ ಕಾರಣ ತಿಳಿಯಲಿಲ್ಲ
ಕಾನೂನು, ಮಹಿಳೆ ಮತ್ತು ಅರಿವು
ಅಂಜಲಿ ರಾಮಣ್ಣ ಬರೆಯುತ್ತಾರೆ
ಇದು ನನಗೆ ಕಲಿಸಿದ್ದು ಎರಡು ಪಾಠ. ಒಂದು ಹೆಂಗಸು ಮನಸ್ಸು ಮಾಡಿದರೆ, ಬುದ್ಧಿಯ ಮೂಲಕ ಗಳಿಸಿಕೊಂಡ ಆತ್ಮವಿಶ್ವಾಸ ಇದ್ದರೆ ಯಾರದ್ದೇ ಆಗಿರಲಿ, ಯಾವುದೇ ರೀತಿಯ ಮುಜುಗರವನ್ನು ಹೋಗಲಾಡಿಸಬಲ್ಲಳು