ಮೂಚಿಮ್ಮ ಕಥಾ ಸಂಕಲನ”


ಪ್ರಪಂಚದ ಯಾವುದೇ ಮೂಲೆಯಿಂದ ಕನ್ನಡ ಪುಸ್ತಕಗಳನ್ನು ತಮ್ಮ ಮೊಬೈಲಿನಲ್ಲಿ ಓದುವ, ಕೇಳುವ ಆಯ್ಕೆ ಕಲ್ಪಿಸಿರುವ ಮೈಲ್ಯಾಂಗ್ ಬುಕ್ಸ್ ತನ್ನ ಪ್ರಕಾಶನ ಸಂಸ್ಥೆಯ ಅಡಿಯಲ್ಲಿ ಹೊರ ತರುತ್ತಿರುವ ನಾಲ್ಕನೆಯ ಪುಸ್ತಕ “ಮೂಚಿಮ್ಮ ಕಥಾ ಸಂಕಲನ”ದ ಬಿಡುಗಡೆಯನ್ನು ಇದೇ ಜನವರಿ 22, ಶುಕ್ರವಾರ ಬೆಳಿಗ್ಗೆ ಹನ್ನೊಂದು ಗಂಟೆಗೆ ಮೈಲ್ಯಾಂಗ್ ಫೇಸ್ ಬುಕ್ ಪುಟದಲ್ಲಿ ನಡೆಯುವ ಲೈವ್ ಮೂಲಕ ಹಮ್ಮಿಕೊಂಡಿದೆ.
ವೃತ್ತಿಯಿಂದ ವೈದ್ಯರಾಗಿರುವ ಡಾ.ಅಜಿತ್ ಹರೀಶಿ ಅವರು ಬರೆದಿರುವ ಮೂಚಿಮ್ಮ ಕಥಾ ಸಂಕಲನ ಇಬುಕ್, ಆಡಿಯೋಬುಕ್ ಹಾಗೂ ಪ್ರಿಂಟ್ ಮೂರೂ ಆವೃತ್ತಿಯಲ್ಲಿ ಬಿಡುಗಡೆಯಾಗುತ್ತಿದೆ. ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಜಾವಾಣಿ ಪತ್ರಿಕೆಯ ಸಂಪಾದಕರಾದ ಶ್ರೀ ರವೀಂದ್ರ ಭಟ್ಟರು, ಖ್ಯಾತ ಪತ್ರಕರ್ತ ಹಾಗೂ ಸಾಹಿತಿ ಶ್ರೀ ಜೋಗಿಯವರು, ಮೈಲ್ಯಾಂಗ್ ಸಂಸ್ಥೆಯ ಮುಖ್ಯಸ್ಥರಾದ ಪವಮಾನ್ ಹಾಗೂ ಲೇಖಕರಾದ ಶ್ರೀ ಡಾ.ಅಜಿತ್ ಹರೀಶಿ ಅವರು ಪಾಲ್ಗೊಳ್ಳಲಿದ್ದಾರೆ.
**************************************
Congratulations
ಅಭಿನಂದನೆಗಳು