
ಕವಿತೆ
ಯಾವುದೀ ನಕ್ಷತ್ರ?
ಮಾಲತಿ ಶಶಿಧರ್

ಕವಿಗೆ ಏಕಾಂತ ಸಿಕ್ಕರೆ ಸಾಕು
ಚಂದ್ರ ನೇರವಾಗಿ ಎದೆಗೆ
ನೆಗೆದುಬಿಡುವನು
ನನ್ನ ಏಕಾಂತದ ಅಂಗಳಕೆ
ನಕ್ಷತ್ರವೊಂದು ಜಾರಿ
ಬಿದ್ದಿದೆ
ಇಂದ್ರಲೋಕದ ಸ್ವತ್ತೋ
ಇಲ್ಲ ಚಂದ್ರನ ಅಣುಕಿಸಲು ಬಂತೋ??
ದಾಹದಾಳವ ಅರಿತು
ಎದೆಯ ಬಗೆದು ನೀರು ತೆಗೆದು
ತಣಿಸುತ್ತದೆ
ಮುತ್ತು ರತ್ನಗಳ ಕಣ್ಣಂಚಲ್ಲೆ
ಸುರಿಸುತ್ತದೆ
ಈ ನಕ್ಷತ್ರದ್ದು ಇಲ್ಲೇ ಬಿಡಾರ
ಬಿಡುವ ಹುನ್ನಾರೋ ಇಲ್ಲ
ನನ್ನೇ ಎಳೆದೊಯ್ಯುವ
ತಕರಾರೋ ಕಾಣೆ
ಈ ನಕ್ಷತ್ರ ಅವರಿಬ್ಬರಂತಲ್ಲ
ಒಬ್ಬ ತಿಂಗಳಿಗೊಮ್ಮೆ ಬಂದರೆ
ಇನ್ನೊಬ್ಬ ತಾಸುಗಟ್ಟಲೆ ಹರಟಿ
ಅಲ್ಲೆಲ್ಲೋ ಪಶ್ಚಿಮ ದಿಕ್ಕಿನ
ಗುಡ್ಡದಡಿ ತಲೆ ಮರೆಸಿಕೊಳ್ಳುವ
ನೆಟ್ಟಗೆ ಎದೆಗೆ
ಹೂಡಿದ ಬಾಣ
ಈ ನಕ್ಷತ್ರ
ಜಲದವಶೇಷಗಳ
ಚಿಲುಮೆ ಜಿನುಗುತ್ತದೆ
ಜನ್ಮಾಂತರದ ವಿರಹ, ಕಾತರ
ಕಾದ ವೇದನೆ ಯಾತನೆ
ಕತ್ತಲರೆಕ್ಷಣದಲ್ಲಿ ಓಡಿಸಲು
ಬಂತೇನೋ ಈ ಗಂಡು ನಕ್ಷತ್ರ..
***************************
ಕವಿಯೆ ಅಗಮ್ಯವಾಗಿ ಸಾಗಿ ಬಂದಿದೆ.ಕೊನೆಗೆ ಗಂಡು ನಕ್ಷತ್ರ ಎಂದು ಹೇಳಬೇಕಿರಲಿಲ್ಲ.ಇಡೀ ಕವಿತೆಯ ಗುಟ್ಟುನ್ನು ಕೊನೆಗೆ ಬಯಲು ಮಾಡಬೇಕೆಂದಿರಲಿಲ್ಲ. ಕವಿತೆ ಪಯಣದಲ್ಲಿ ಅದು ಚೆಂದ ನಡಿಗೆಯಾಗಿ ಬಂದಿತ್ತು.
ಕವಿತೆ ಚೆಂದವಿದೆ..
Thanks a lot sir. I will consider your opinion sir..
ನಕ್ಷತ್ರ ಎಂಬೋ ಗಂಡು
ಕವನ ಎಂಬ ಹೆಣ್ಣು
ಇದು ಕಾವ್ಯ ಜಗತ್ತಿನ
ನಿತ್ಯ ನೂತನ ಸಂಬಂಧ. ಕವಯಿತ್ರಿ ಇದನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ಸೂಪರ್
Thank u so much sir
Fantastic




Thank u so much
Nice expression of feelings by connecting beautiful words
Thanks paddu
ಚೆನ್ನಾಗಿದೆ
ಧನ್ಯವಾದಗಳು
Congratulations
Thanks a lot sir
ತುಂಬಾ ಚೆನ್ನಾಗಿದೆ
Thank u so much
ತುಂಬಾ ಅದ್ಭುತವಾಗಿದೆ ಮೇಡಂ ನಿಮ್ಮಲ್ಲಿ ಒಬ್ಬ ಕವಿಯತ್ರಿ ಇದ್ದಾರೆ ಎಂಬುದು ಎದ್ದು ಕಾಣಿಸುತ್ತದೆ ಪ್ರಯತ್ನವನ್ನು ಸದಾ ಹೀಗೆ ಮುಂದುವರಿಸಿ.
Thank u so much pradeep sir
ಕವಿತೆ ಚೆನ್ನಾಗಿದೆ. ಕೊನೆಯಲ್ಲಿ ವಾಚ್ಯ ವಾಗಿದೆ ಎನ್ನುವ ಕೊರತೆ ಇದೆ.
Thanks for ur comment