ಕವಿತೆ
ಆತ್ಮಸಾಕ್ಷಿ
ಪಂ. ರವಿಕಿರಣ ಮಣಿಪಾಲ.
ಆತ್ಮಸಾಕ್ಷಿಯ
ಲೇಖನಿಯನ್ನು
ಭೋಗದ ಮಸಿಯಲ್ಲದ್ದಿ
ಇತಿಹಾಸ ಪುಸ್ತಕ
ಬರೆಯುವುದು
ದುಸ್ತರ
ಹಾಗಾಗಿಯೆ
ಇತಿಹಾಸ ಪುಸ್ತಕ
ತುಂಬ
ಕಣ್ಣೀರ ನದಿಗಳು
ರಕ್ತದ ಕಾಲುವೆಗಳು
ನಿಟ್ಟುಸಿರ ಚಂಡಮಾರುತಗಳು
ಬೆಂದೊಡಲ ಹಸಿವಿನ ಜ್ವಾಲಾಮುಖಿಗಳು
ಉರುಳುರುಳಿ ಹೊರಳಿದ
ಕೆಂಪು
ಸಿಂಹಾಸನಗಳು
ಭೂಕಂಪಗಳು
***
One thought on “ಆತ್ಮಸಾಕ್ಷಿ”