ಗಝಲ್

ಗಝಲ್

ಗಝಲ್ ರತ್ನ ರಾಯಮಲ್ಲ . ಬದಲಾಗುವ ಋತುಮಾನಗಳಲ್ಲಿ ನೀನೇ ನನ್ನ ವಸಂತನಿನಗಾಗಿ ಮನೆ-ಮಠಗಳನ್ನು ತೊರೆದ ನಾನೇ ನಿನ್ನ ಸಂತ ಶಶಿಗೂ ಬೆಳದಿಂಗಳನು ನೀಡಿರುವ ಚಂದ್ರಮುಖಿ ನೀನುಹೃದಯದಿ ನಿನಗಾಗಿ ಪಾರಿಜಾತ ಹೂ ನೆಟ್ಟ ಹೃದಯವಂತ ನೀನು ಇಲ್ಲದ ಕತ್ತಲೆ ವೈರಿಯಾಗಿ ಕಾಡುತ್ತಿದೆ ಅನುದಿನವೂನಿನಗಾಗಿ ಪ್ರೇಮದ ಕಂದೀಲು ಹಿಡಿದು ಕುಳಿತಿರುವ ಗುಣವಂತ ವಿರಹವನ್ನೇ ಹಾಸಿ ಹೊದ್ದುಕೊಂಡು ಮಲಗಿರುವೆ ನೆನಪಿನಲ್ಲಿನಿನಗಾಗಿ ಸರಸದ ಪಲ್ಲಂಗ ಹಾಕಿರುವೆನು ಪ್ರೀತಿಯ ಸಿರಿವಂತ ನಿನಗೋಸ್ಕರ ಹಗಲನ್ನು ತಡೆದು ನಿಲ್ಲಿಸುತಿರುವನು ಈ ಮಲ್ಲಿಆಗಸದ ತಾರೆಗಳನ್ನು ನಿನ್ನ ಮುಡಿಗಾಗಿ ಹೆಣೆದ […]

ಗಝಲ್

ಗಝಲ್ ಎ . ಹೇಮಗಂಗಾ ಕಲ್ಲುಮುಳ್ಳುಗಳ ಹಾದಿಯಲ್ಲಿ ನಡೆಯುತ್ತಲೇ ಇದ್ದೇನೆ ನಾನೇಕೆ ಹೀಗೆಕಷ್ಟ ಕಾರ್ಪಣ್ಯಗಳಲ್ಲಿ ಮುಳುಗುತ್ತಲೇ ಇದ್ದೇನೆ ನಾನೇಕೆ ಹೀಗೆ ಮೇಲೇರಬೇಕೆಂದರೂ ಕಾಲು ಹಿಡಿದು ಜಗ್ಗುವವರೇ ಹೆಚ್ಚುನಿತ್ಯ ಬೆನ್ನಿಗೆ ಇರಿಸಿಕೊಳ್ಳುತ್ತಲೇ ಇದ್ದೇನೆ ನಾನೇಕೆ ಹೀಗೆ ಮೋಡಿ ಮಾತುಗಳಿಗೆ ಮರುಳಾದರೂ ಎಚ್ಚೆತ್ತುಕೊಳ್ಳಲಿಲ್ಲಕುಹಕಿಗಳ ನೋಟಕೆ ಗುರಿಯಾಗುತ್ತಲೇ ಇದ್ದೇನೆ ನಾನೇಕೆ ಹೀಗೆ ಬೆಳ್ಳಗಿರುವುದೆಲ್ಲಾ ಹಾಲೆಂಬ ನಂಬಿಕೆ ಹೆಜ್ಜೆಹೆಜ್ಜೆಗೂ ಹುಸಿಯಾಗಿದೆವಂಚನೆಯ ಹಾಲಾಹಲವ ಕುಡಿಯುತ್ತಲೇ ಇದ್ದೇನೆ ನಾನೇಕೆ ಹೀಗೆ ಬೇಲಿಯೇ ಎದ್ದು ಹೊಲ ಮೇಯುವ ಕಾಲ ಇದಲ್ಲವೇ ಹೇಮತಿದ್ದಲಾಗದ ನನ್ನ ನಾನು ಹಳಿಯುತ್ತಲೇ ಇದ್ದೇನೆ […]

ಸಂಗಾತಿಯೊಡನೆ ನನ್ನ ಪಯಣ

ಸಂಗಾತಿಯ ಇಬ್ಬರು ಲೇಖಕರುಬರೆದ ಅನಿಸಿಕೆಗಳು ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಮಹತ್ವ ಪ್ರತ್ಯೇಕವಾಗಿ ಉಲ್ಲೇಖಿಸುವ ಅವಶ್ಯಕತೆಯೇ ಇಲ್ಲ . ಮೊದಲಿನಿಂದ ಪ್ರಸಾರ ಮಾಧ್ಯಮ ಎಂದರೆ ಪತ್ರಿಕೆ ಮತ್ತು ಆಕಾಶವಾಣಿ. ಈಗ ದೂರದರ್ಶನ ಹಾಗೂ ಅಂತರ್ಜಾಲಗಳು ಈ ಪರಿಧಿಗೆ ಸೇರಿವೆ.  ದಿನಪತ್ರಿಕೆ ಓದದೇ ಬೆಳಗು ಆರಂಭವಿಲ್ಲ  ಎಂಬಂಥ ಕಾಲ ಹೋಗಿ ಎಲ್ಲವನ್ನೂ ದೃಶ್ಯ ಮಾಧ್ಯಮಗಳಲ್ಲಿ ಕಂಡುಕೊಳ್ಳುವ ಈ ಯುಗದಲ್ಲಿ ಮುದ್ರಿತ ಓದಿನ ಪತ್ರಿಕೆ, ನಿಯತ ಕಾಲಿಕೆಗಳು ತಮ್ಮ ಮೊದಲಿನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ.  ಈ ಪ್ರಚಲಿತ ವಿದ್ಯಮಾನದಲ್ಲಿ ಸುದ್ದಿ ತಿಳಿಯಲು ದಿನಪತ್ರಿಕೆಯೇ ಬೇಕೆಂದೇನಿಲ್ಲ.  […]

ಅಲಕ್ಷ್ಯಕ್ಕೊಳಗಾಗಿರುವ ಮಕ್ಕಳ ಸಾಹಿತ್ಯ

ಲೇಖನ ಅಲಕ್ಷ್ಯಕ್ಕೊಳಗಾಗಿರುವ ಮಕ್ಕಳ ಸಾಹಿತ್ಯ ವಿಜಯಶ್ರೀ ಹಾಲಾಡಿ ಕರ್ನಾಟಕದ ಸಾಹಿತ್ಯ ಜಗತ್ತಿನಲ್ಲಿ `ಮಕ್ಕಳ ಸಾಹಿತ್ಯ’ ಎಂಬೊಂದು ಪ್ರಕಾರ ಹೇಗಿದೆ ಎನ್ನುವ ಕಡೆಗೆ ಯೋಚನೆ ಹರಿಸಿದರೆ ಬಹಳ ಖೇದವೂ, ಆಶ್ಚರ್ಯವೂ ಉಂಟಾಗುತ್ತದೆ. ಖೇದ ಏಕೆಂದರೆ ಏಕಕಾಲದಲ್ಲಿ ನಮ್ಮ ವರ್ತಮಾನವೂ, ಭವಿಷ್ಯವೂ ಆಗಿರುವ ಮಕ್ಕಳಿಗಾಗಿ ಇರುವ ಸಾಹಿತ್ಯ ಅಲಕ್ಷ್ಯವಾಗಿರುವುದಕ್ಕೆ. ಆಶ್ಚರ್ಯವೇಕೆಂದರೆ ಇಂತಹ ತಿರುಳನ್ನೇ ನಿರ್ಲಕ್ಷಿಸಿ ಇಡೀ ಸಾಹಿತ್ಯಲೋಕ ನಿಶ್ಚಿಂತೆಯಿಂದ ಇದ್ದು ಬಿಟ್ಟಿರುವುದಕ್ಕೆ! ಸಾಹಿತ್ಯ ವಲಯದ ಹಲವರೂ, ಸಂಸ್ಥೆ-ಅಂಗಸಂಸ್ಥೆಗಳೂ, ಸ್ವತಃ ಬರಹಗಾರರೂ, ಓದುಗರು ಎಲ್ಲರೂ ಸೇರಿ ಪಕ್ಕಕ್ಕೆ ಎತ್ತಿಟ್ಟು ಮರೆತುಬಿಟ್ಟ ಒಂದು […]

ಕೊಂಕಣಿ ಕವಿ ಪರಿಚಯ

ಕೊಂಕಣಿ ಕವಿ ಪರಿಚಯ ಫೆಲ್ಸಿ ಲೋಬೊ ಶ್ರೀಮತಿ ಫೆಲ್ಸಿ ಲೋಬೊಶಿಕ್ಷಕಿ, ಸಂತ ಎಲೋಶಿಯಸ್ ಪ್ರೌಢಶಾಲೆ, ಮಂಗಳೂರು.ಹವ್ಯಾಸ: ಕವನ, ಲೇಖನ ಬರಹಕನ್ನಡ, ಕೊಂಕಣಿ, ತುಳು ಭಾಶೆಗಳಲ್ಲಿ.ಕೊಂಕಣಿಯ, ರಾಕ್ಣೊ, ಉಜ್ವಾಡ್, ಸೆವಕ್, ಮುಂತಾದ ಪತ್ರಿಕೆಗಳಲ್ಲಿ, ವೀಜ್ ಪಾಕ್ಶಿಕ ದಲ್ಲಿ, ಕವಿತಾ ಡಾಟ್ ಕಾಮ್ ಗಳಲ್ಲಿ ಬರಹಗಳ ಪ್ರಕಟವಾಗಿದೆ. ಕವಿಗೋಶ್ಟಿಗಳಲ್ಲಿ ಭಾಗವಹಿಸುವಿಕೆ, ವಿವಿಧ ಸಾಹಿತ್ಯ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಲಾಗಿದೆ. ಆಕಾಶವಾಣಿ ಮಂಗಳೂರು ರೇಡಿಯೊ ಹಾಗೂ ಸಾರಂಗ್ ರೇಡಿಯೊ ದಲ್ಲಿ ಕಾರ್ಯಕ್ರಮಗಳು ಪ್ರಸಾರ ಕಂಡಿವೆ. ” ಗರ್ಜೆತೆಕಿದ್ ಗಜಾಲಿ” ಎಂಬ ಚೊಚ್ಚಲ ಲೇಖನ […]

ಗಝಲ್

ಗಝಲ್ ರೇಷ್ಮಾ ಕಂದಕೂರ ಮಾತು ಮೌನಗಳ ನಡುವಿನ ಸಮರಕೆ ಕೊನೆಯಿಲ್ಲಸಹನೆಯ ಹೆಸರಿಗೆ ಕಿಂಚಿತ್ತೂ ಬೆಲೆಯಿಲ್ಲ ರೋಗಗ್ರಸ್ತ ಮನಸಿಗೆ ಉಪಶಮನದ ಅವಶ್ಯಕತೆ ಇದೆಚಿಗುರೊಡೆದೆ ಬಾಂಧವ್ಯಕೆ ಸಹಕಾದರ ಬಳುವಳಿಯಿಲ್ಲ ಜಗದ ಜಂಜಡಕೆ ನಿತ್ಯ ರಂಗುರಂಗಿನ ಆಟಉದ್ವೇಗ ವಿಷಾದದ ನಡುವಿನ ಪ್ರಸ್ತಾವನೆಗೆ ಕೊನೆಯಿಲ್ಲ ಬಡಿವಾರದಿ ಊಹಾಪೋಹಗಳು ತುಂಬಿ ತುಳುಕಿವೆಹಮ್ಮಿನ ಕೋಟೆಯಲಿ ಮೆರೆದವರಿಗೆ ಉಳಿಗಾಲವಿಲ್ಲ ಅಂಗಲಾಚಿ ಬೇಡುತಿದೆ ಭಿನ್ನತೆಗೆ ವಿರಮಿಸೆಂದು ರೇಷಿಮೆ ಮನಒಳಗಣ್ಣು ತೆರೆಯದೆ ನಿರ್ಣಯಿಸಿದರೆ ಕೊಡಲಿ ಏಟಿಗೆ ಕೊನೆಯಿ *****************************

ಹಗಲಲಿ ಅರಳದ ವಿರಹಿಣಿ

ಕವಿತೆ ಹಗಲಲಿ ಅರಳದ ವಿರಹಿಣಿ ಅನಿತಾ ಪಿ. ಪೂಜಾರಿ ತಾಕೋಡೆ ಅಂದು…ಹಿಂದೆಂದೂ ಮೂಡದ ಒಲವೊಂದು ಅನುವಾದಾಗಅವನ ಹಿರಿತನವನು ಮರೆತುನನ್ನ ಮಗುತನವನೇ ಪೊರೆದುಇತಿ ಮಿತಿಯ ರೇಖೆಗಳಿಂದ ಮುಕ್ತವಾಗಿಹಕ್ಕಿಹಾಡನು ಮನಬಿಚ್ಚಿ ಹಾಡಿದಾಗಲೆಲ್ಲಅವನು ಕೇಳುತ್ತಿದ್ದುದೊಂದೇ ನಿತ್ಯ ದಗದಗಿಸುತ್ತಲೇ ಊರೂರು ಸುತ್ತುವಮುಟ್ಟಿದರೆ ಮುನಿದು ಬಿಡುವಕಟು ಮನಸ್ಸಿನ ಸೂರ್ಯ ನಾನುಎಲೇ ಮುದ್ದು ಪಾರಿಜಾತವೇನಾನೆಂದರೆ ನಿನಗ್ಯಾಕೆ ಇಷ್ಟೊಂದು ಪ್ರೀತಿ ಆಗ…ನನ್ನಾಲಯದಲ್ಲಿ ಅವನು ಇನ್ನಷ್ಟು ಪ್ರಕಾಶವಾಗುತ್ತಿದ್ದಬೆಳ್ಳನೆ ಹೊಳಪು ಕೇಸರಿ ಕದಪಿನಲಿ ರಂಗು ಮೂಡಿಅವನಿರುವಿನಲಿ ಇನಿತಿನಿತಾಗಿ ಕರಗುತ್ತಲೇನಾನೆಂದಿಗೂ ನಿನ್ನವಳೆನ್ನುತಿದ್ದೆ ಅವನೂ ಸುಮ್ಮನಿರುತಿರಲಿಲ್ಲನನ್ನ ಇತಿಹಾಸವನೇ ಬಯಲಿಗೆಳೆಯುತಿದ್ದಸುರಭಿ ವಾರಿಣಿಯರ ಸಾಲಿನವಳುಕ್ಷೀರ ಸಮುದ್ರದೊಳವಿರ್ಭವಿಸಿದಪಂಚವೃಕ್ಷಗಳಲಿ […]

ಎಲ್ಲಾ ಹೆಣ್ಣು ಹೆಣ್ಣು ಹೆಣ್ಣು

ಕವಿತೆ ಎಲ್ಲಾ ಹೆಣ್ಣು ಹೆಣ್ಣು ಹೆಣ್ಣು ಸುಧಾ ಹಡಿನಬಾಳ ಹೇ ದುರುಳ ವಿಕೃತ ಕಾಮಿಗಳೆನಿಮ್ಮ ದಾಹ, ಕ್ರೌರ್ಯಕೆ ಕೊನೆಯಿಲ್ಲವೇನು? ನೀವು ಪೂಜಿಸುವ ಜಗನ್ಮಾತೆ ಹೆಣ್ಣುನಿಮ್ಮ ಹೆತ್ತ ಜನ್ಮದಾತೆ ಹೆಣ್ಣುನಿಮ್ಮ ಪೊರೆವ ಭೂಮಿತಾಯಿ ಹೆಣ್ಣುನಿಮ್ಮ ಮನೆ ಬೆಳಗುವ ಮಡದಿ ಹೆಣ್ಣುಮನೆತುಂಬ ಕಿಲ ಕಿಲ ಗೆಜ್ಜೆನಾದ ಹೆಣ್ಣುಎಲ್ಲಾ ಹೆಣ್ಣು ಹೆಣ್ಣು ಹೆಣ್ಣುಆದರೂ ಅನ್ಯ ಹೆಣ್ಣಿನ ಮೇಲೇಕೆ ನಿಮ್ಮ ಕಣ್ಣು? ಒಮ್ಮೆ ಯೋಚಿಸಿ ಕಲ್ಪಿಸಿಕೊಳ್ಳಿನಿಮಗೂ ಒಬ್ಬ ಹೆಣ್ಣು ಮಗಳಿದ್ದುಅವಳ ಮೇಲೂ ಇಂತದೆ ಭಯಾನಕದೌರ್ಜನ್ಯ, ಕ್ರೌರ್ಯ ನಡೆದರೆಸಹಿಸಲಾದೀತೇ ಊಹಿಸಿಕೊಳ್ಳಲಾದೀತೇ? ಎಲ್ಲಾ ಹೆಣ್ಣು ಮನೆಯ […]

ಕಳೆದವರು

ಕವಿತೆ ಕಳೆದವರು ಅಬ್ಳಿ ಹೆಗಡೆ. ಕಳೆದವರು ನಾವುಕಳೆದವರು.ಉಳಿದಿಹ ಗಳಿಕೆಯನಿತ್ಯವೂ ಎಣಿಸುತ್ತಬೆಳೆಸಲಾಗದ್ದಕ್ಕೆಅಳುವವರು.ಘಾಢಕತ್ತಲಿನಲ್ಲಿಕಪ್ಪುಪಟ್ಟಿಯು ಕಣ್ಗೆಎಲ್ಲೆಲ್ಲೊ ಗುದ್ದುತ್ತಒದ್ದಾಡುವವರು.ಚೆಲುವ ನಂದನದಲ್ಲಿಎಂದೆಂದೂ ನಿಂತಿದ್ದುಕಣ್ಣಹಸಿವಿಂಗದಲೆಸಾಯುವವರು.ಪ್ರೀತಿಯಮ್ರತದ ಕಲಶಎದೆ ನೆಲದಿ ಹೂತಿಟ್ಟುಪ್ರೀತಿಯಾ ಬರದಲ್ಲೆಬದುಕಿ ಸತ್ತವರು.ದೀಪವಾರಿದ ಕೋಣೆಕತ್ತಲಲೆ ಕುಳಿತಿದ್ದುಕಪ್ಪು ಶಾಯಲಿ ಬೆಳಕಗೆರೆಯೆಳೆವರು.ನಡೆವ ಹಾದಿಯ ಬದಿಗೆಆಲದ ನೆರಳಿದ್ದೂಬಿಸಿಲಲ್ಲೆ ಮಲಗಿದ್ದುದಣಿವ ಕಳೆವವರು.ತನ್ನೊಳಗೇ ಅನಂತಶಾಂತಿಯ ಕಡಲಿದ್ದುಶಾಂತಿಯ ಹುಡುಕುತ್ತಸಂತೆಯಾದವರು.ಕಳೆದವರು ನಾವುಕಳೆದವರು.ಎಷ್ಟುಕಳೆದರೂ ಸ್ವಲ್ಪಉಳಿದವರು. **********************

ಗಿರಗಿಟ್ಟಿ

ಪುಸ್ತಕ ಪರಿಚಯ ಗಿರಗಿಟ್ಟಿ ಲೇಖಕರು: ತಮ್ಮಣ್ಣ ಬೀಗಾರ. ‌ಪ್ರಕಾಶನ: ಪ್ರೇಮ ಪ್ರಕಾಶನ ಮೈಸೂರು.ಮೊಬೈಲ ನಂ: ೯೮೮೬೦೨೬೦೮೫ಪುಟ: ೧೦೦.ಬೆಲೆ:೯೦ ರೂ.ಪ್ರಕಟಣೆ:೨೦೨೦ ಹಿರಿಯ ಕಿರಿಯರೆಲ್ಲ ಓದಬೇಕಾದ “ ಗಿರಗಿಟ್ಟಿ” ತಮ್ಮಣ್ಣ ಬೀಗಾರ ಅವರು ಮಕ್ಕಳಿಗಾಗಿ ಕತೆ, ಕವಿತೆ, ಪ್ರಬಂಧ, ಕಾದಂಬರಿಗಳನ್ನು ಬರೆಯುವುದರಲ್ಲಿ ತೊಡಗಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಿರಿಯ ಸಾಹಿತಿಗಳು. ಕಿರಿಯರನ್ನೂ ಗೌರವಿಸುವ ಸೌಮ್ಯ ಸ್ವಭಾವದವರು. ಹೀಗೆ “ಪ್ರಾಗಿ” ಕತೆಯ ಸನ್ನಿವೇಶ ಕುರಿತು ಮಾತನಾಡುವಾಗ ‘ಹುಡುಗರು ಕಪ್ಪೆಗೆ ಹಿಂಸೆ ಮಾಡುವುದು ಸಹಜ. ಅದನ್ನು ನೀವೇಕೆ ಬರವಣಿಗೆಯಲ್ಲಿ ಕಾಣಿಸಲಿಲ್ಲ ?’ಎನ್ನುವ […]

Back To Top