ಗಝಲ್
ರತ್ನ ರಾಯಮಲ್ಲ
.
ಬದಲಾಗುವ ಋತುಮಾನಗಳಲ್ಲಿ ನೀನೇ ನನ್ನ ವಸಂತ
ನಿನಗಾಗಿ ಮನೆ-ಮಠಗಳನ್ನು ತೊರೆದ ನಾನೇ ನಿನ್ನ ಸಂತ
ಶಶಿಗೂ ಬೆಳದಿಂಗಳನು ನೀಡಿರುವ ಚಂದ್ರಮುಖಿ ನೀನು
ಹೃದಯದಿ ನಿನಗಾಗಿ ಪಾರಿಜಾತ ಹೂ ನೆಟ್ಟ ಹೃದಯವಂತ
ನೀನು ಇಲ್ಲದ ಕತ್ತಲೆ ವೈರಿಯಾಗಿ ಕಾಡುತ್ತಿದೆ ಅನುದಿನವೂ
ನಿನಗಾಗಿ ಪ್ರೇಮದ ಕಂದೀಲು ಹಿಡಿದು ಕುಳಿತಿರುವ ಗುಣವಂತ
ವಿರಹವನ್ನೇ ಹಾಸಿ ಹೊದ್ದುಕೊಂಡು ಮಲಗಿರುವೆ ನೆನಪಿನಲ್ಲಿ
ನಿನಗಾಗಿ ಸರಸದ ಪಲ್ಲಂಗ ಹಾಕಿರುವೆನು ಪ್ರೀತಿಯ ಸಿರಿವಂತ
ನಿನಗೋಸ್ಕರ ಹಗಲನ್ನು ತಡೆದು ನಿಲ್ಲಿಸುತಿರುವನು ಈ ಮಲ್ಲಿ
ಆಗಸದ ತಾರೆಗಳನ್ನು ನಿನ್ನ ಮುಡಿಗಾಗಿ ಹೆಣೆದ ಕಲಾವಂತ
****************************
ಚಂದದ ಭಾವ
ಹ್ಮ್…..ಇನ್ನೊಂದಿಷ್ಟು ನವಿರಾಗಬೇಕು