ಕೊಂಕಣಿ ಕವಿ ಪರಿಚಯ
ಫೆಲ್ಸಿ ಲೋಬೊ
ಶ್ರೀಮತಿ ಫೆಲ್ಸಿ ಲೋಬೊ
ಶಿಕ್ಷಕಿ, ಸಂತ ಎಲೋಶಿಯಸ್ ಪ್ರೌಢಶಾಲೆ, ಮಂಗಳೂರು.
ಹವ್ಯಾಸ: ಕವನ, ಲೇಖನ ಬರಹ
ಕನ್ನಡ, ಕೊಂಕಣಿ, ತುಳು ಭಾಶೆಗಳಲ್ಲಿ.
ಕೊಂಕಣಿಯ, ರಾಕ್ಣೊ, ಉಜ್ವಾಡ್, ಸೆವಕ್, ಮುಂತಾದ ಪತ್ರಿಕೆಗಳಲ್ಲಿ, ವೀಜ್ ಪಾಕ್ಶಿಕ ದಲ್ಲಿ, ಕವಿತಾ ಡಾಟ್ ಕಾಮ್ ಗಳಲ್ಲಿ ಬರಹಗಳ ಪ್ರಕಟವಾಗಿದೆ.
ಕವಿಗೋಶ್ಟಿಗಳಲ್ಲಿ ಭಾಗವಹಿಸುವಿಕೆ, ವಿವಿಧ ಸಾಹಿತ್ಯ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಲಾಗಿದೆ.
ಆಕಾಶವಾಣಿ ಮಂಗಳೂರು ರೇಡಿಯೊ ಹಾಗೂ ಸಾರಂಗ್ ರೇಡಿಯೊ ದಲ್ಲಿ ಕಾರ್ಯಕ್ರಮಗಳು ಪ್ರಸಾರ ಕಂಡಿವೆ.
” ಗರ್ಜೆತೆಕಿದ್ ಗಜಾಲಿ” ಎಂಬ ಚೊಚ್ಚಲ ಲೇಖನ ಪುಸ್ತಕ ಪ್ರಕಟವಾಗಿದೆ.
ವಿದ್ಯಾರ್ಥಿಗಳನ್ನು ಸಾಹಿತ್ಯಾಸಕ್ತಿ ಬೆಳೆಸಲು ವಿವಿಧ ಸ್ಪರ್ಧೆಗಳಿಗೆ ಪ್ರೋತ್ಸಾಹಿಸಿ ಕಳುಹಿಸಲಾಗಿದೆ. ಸೃಜನಾತ್ಮಕ ಬರಹಗಳಿಗೆ ಪ್ರೋತ್ಸಾಹಿಸಿ, ಚುಟುಕುಗಳ ಸಂಗ್ರಹ
” ಝೇಂಕಾರ” ಪ್ರಕಟಗೊಂಡಿದೆ.
ಜೆಸಿಐ ಮಂಗಳೂರು, ಲಾಲ್ ಭಾಗ್ ರವರು ಶಿಕ್ಷಕರ ದಿನದಂದು, ಬಹುಮುಖ ಪ್ರತಿಭಾ ಶಿಕ್ಷಕಿ ಸನ್ಮಾನ ನೀಡಿ ಗೌರವಿಸಿರುತ್ತಾರೆ.
ಫೆಲ್ಸಿ ಲೋಬೊ ಅವರು ಬರೆದ ಕೊಂಕಣಿ ಮತ್ತು ಕನ್ನಡ ಕವಿತೆಗಳು ನಿಮ್ಮೆಲ್ಲರಿಗಾಗಿ.
ತಾಂಚೆ ಫಾತರ್ ಆನಿ ಹಾಂವ್~~~
ಕೊಣಾಯ್ಚ್ಯಾ ಹೆಳ್ಕೆ ವಿಣೆ
ಕಿರ್ಲೊನ್ ವಾಡ್ಲೆಲ್ಯಾ ದೆಣ್ಯಾಂ
ರುಕಾರ್ ಕಾಳಾ ತೆಕಿದ್
ಕೊಂಬ್ರೆ, ಫಾಂಟೆ ವಿಸ್ತಾರ್ಲೆ
ಸೊಪ್ಣಾಂಚ್ಯಾ ಪಿಶ್ಯಾ ಫುಲಾಂನಿ
ದೆಖ್ತೆಲ್ಯಾಕ್ ಪಿಶ್ಯಾರ್ ಘಾಲೆಂ
ಬರಿಂ ಫುಲಾಂ ಘೊಸ್ ಭಾಂದ್ತಾನಾ
ಫಳಾಂನಿ ಆಸ್ರೊ ಸೊದ್ಲೊ
ಫಳಾ ರುಚಿಂನಿ ಗರ್ಜೊ
ಥಾಂಭಯ್ತಾನಾ, ತಾಣಿಂ
ಫಾತರ್ ವಿಂಚ್ಲೆ
ಸುರ್ವೆರ್ ಹಳ್ತಾಚೆ ಮಾರ್
ವಾಡಾತ್ತ್ ಗೆಲೆ ವರ್ಸಾಂಭರ್
ಮಾರ್ಲೆಲ್ಯಾ ಹರ್ ಫಾತ್ರಾಂಕಿ
ಹಗೂರ್ ವಿಂಚುನ್ ಪೆಳಿ ಭಾಂದ್ಲಿ
ತುಮಿ ಮಾರ್ಲೆಲ್ಯಾ ಹರ್ ಫಾತ್ರಾಂಕಿ
ಮೋಲ್ ಭಾಂದ್ಲಾಂವೆಂ
ಪೆಳಿಯೆರ್ ಬಸೊನ್
ಲಿಖ್ತಾಂ ಆಜ್ ಯಾದಿಂಚ್ಯೊ ವೊಳಿ
ತುಮಿ ಛಾಪ್ಲೆಲ್ಯಾ ಪಯ್ಲ್ಯಾ ಪಾನಾಕ್
ಆಜ್ ಹಾಂವೆ ಲಿಖ್ಚ್ಯಾ ಹರ್ ಪಾನಾಂಕ್
ಫರಕ್ ಇತ್ಲೊಚ್
ಫಾತ್ರಾಂ ಪೆಳಿಯೆ ಥಾವ್ನ್ ಖಾಂತ್ಚ್ಯಾ
ಉತ್ರಾಂ ಪಾಟ್ಲ್ಯಾನ್ ನಾಂವ್ ಆಸಾ
ಅನಾಮಿಕ್ ನೈಂ
ನಿಮ್ಮ ಕಲ್ಲ ಬೆಂಚು
~~~~
ನನಗರಿವಿಲ್ಲದೆಯೆ ಬೆಳೆದು
ಹೆಮ್ಮರವಾದ ಸದ್ಗುಣದ ಮರದ
ಎಳೆ ಚಿಗುರು, ಕೊಂಬೆ
ಬಲಿತ ರೆಂಬೆಗಳೆಡೆಯಲಿ
ಅದಾಗಲೆ ಹುಚ್ಚು ಹೂಗಳ ಸರದಿ
ಹೀಚು ಕಾಯದು ಬೆಳೆದು
ಕಾಯಾಗಿ ಬಲಿತು ಬಲು ರುಚಿ
ಯಿಂದ ನಿಮ್ಮ ಒಲಿದಾಗ
ಕಲ್ಲೆಸೆದು ಕೊಯ್ದವರೆ
ತುಸು ತಾಳಿ
ಎಸೆದ ಒಂದೊಂದು ಕಲ್ಲ
ತಾಳ್ಮೆಯಿಂ ಶೇಖರಿಸಿ ಬೆಂಚೊಂದ
ಕಟ್ಟಿರುವೆನು
ಅಲ್ಲೆ ಕುಳಿತು ತಿರುಚುವ ಒಂದೊಂದು
ಕಾಗುಣಿತಕ್ಕು ಎತ್ತಣಿಂದೆತ್ತ ಸಂಬಂಧ !
ಪ್ರಹಾರಗಳ ನೋವು ಆರಿ
ಕಲ್ಲು ಬೆಂಚು ಬೆಳೆದಿದೆ ಹೆಗಲೇರಿ
ನಿಮ್ಮ ಹಾಳೆಯಂತಲ್ಲ
ಇಲ್ಲಿ ಪೋಣಿಸುವ ಒಂದೊಂದು
ಅಕ್ಷರದ ಹಿಂದೊಂದು ಹೆಸರಿದೆ
ಇದು ಅನಾಮಿಕವಲ್ಲ
ಪ್ರಶಸ್ತಿ ನಾತ್ಲೆಲೆ ಪಾತ್ರ್
#
ಜಿವಿತಾಚ್ಯೆ ರಂಗ್ ಮಾಂಚಿಯೆರ್
ಉಂಚ್ಲೆ ಪಾತ್ರ್ ತುಜೆ
ಪಾಳ್ಣ್ಯಾ ಥಾವುನ್ ಪೆಟೆ ಪರ್ಯಾಂತ್
ವಿಚಾರ್ ಖೂಬ್ ಗರ್ಜೆಚೆ
ರಂಗಾಳ್ ಆಂಗ್ಲಿಂ ನ್ಹೆಸೊನ್
ಆಂಗಣ್ ಭರ್ ಚರ್ಲೆಲಿಂ ಪಾವ್ಲಾಂ
ವಾಡೊನ್ ಎತಾಂ ಭಂವ್ತಿಲ್ಯಾ ದೊಳ್ಯಾಂಚಿ
ಭುಕ್ ಥಾಂಭಂವ್ಚೆಂ ಆಹಾರ್ ಜಾತಾತ್
ಘರ್ಚ್ಯಾ ಚಲಿಯೆ ಖಾತಿರ್
ಸೆಜ್ರಾ ಉಠ್ತಾ ಆಕಾಂತ್
ದೊಳೆಚ್ಚ್ ಕೆಮರಾ ಜಾವುನ್ ಬಾಬಾ
ಚಾರ್ ಕುಶಿಂ ಥಾವುನ್ ರಾಕೊನ್ ಥಕ್ತಾತ್
ಪಾಯ್ಜಾಣಾಂಗೊ ತುಜಿಂ ಆವಾಜಾವಿಣ್
ಝಳ್ಜಳಿತ್ ವಸ್ತ್ರಾಂ ಬಾವ್ಲ್ಯಾಂತ್ ರಂಗ್ ಉಬೊವ್ನ್
ದಿವ್ಳಾ ಭಿತರ್ ವೆಶಿ ದೇವ್ ಕೊಪ್ತಾ ಮಣ್ತಾತ್
ವಚಾನಾ ಜಾಶಿ ಬುರ್ಬುರೆಂ ವೊಡುನ್
ದೆವಾ ಹುಜ್ರಿಂಚ್ ಮಾನ್ ಲುಟ್ತಾತ್
ದೇವಿ ತೂಂ , ನಾ ತುಕಾ ಪೂಜಾ ಸನ್ಮಾನ್
ಉಜ್ವಾಡ್ ತೂಂ , ನಾ ತುಕಾ ಸಂಭ್ರಮ್
ಕಾಂಪಿಣ್ ಮಾರ್ತೆಲ್ಯಾ ಪೂಜಾರಿಕ್ ಯಿ
ಗುಪ್ತಿಂ ಲಿಪ್ತಿಂ ಗರ್ಜ್ ತೂಂ
ಬಗ್ಲೆ ನಿದ್ತೆಲ್ಯಾಚ್ಯಾ ನಿಳ್ಯಾ ಪಿಂತುರಾಂಕ್ ಯಿ
ಸಂಪನ್ಮೂಳ್ ತೂಂ
ಕೆನ್ನಾ ಪಾಪ್ಸುಂಕ್ ತುಕಾ ದಾವ್ಲ್ಯೊ ರಾಕ್ತಾತ್
ಪ್ರತಿಭಾ ಪಿಸ್ಡುಂಕ್ ಸುಣಿಂ ವಾಗ್ಟಾಂ ವಾವುರ್ತಾತ್
ಗುಡ್ಡಾಯ್ತೆಲ್ಯಾಂ ಮಧೆಂ ಮಿಲಾವಾಚಿ ಪುತ್ಳಿ ಜಾ — ರಾವ್ ಉಭೆಂ
ತುಜ್ಯಾ ವೆಕ್ತಿತ್ವಾಚಿ ವಳಕ್ ತರಿ ಜಾಯ್ತ್ ?
ಉಭಾರುನ್ ವರ್ ಪರ್ವತಾಚೆರ್ ತುಜೊ ತಾಳೊ
ಕಿಂಕ್ರಾಟೆಂತ್ ಆಸೊಂ ಜಯ್ತಾಚೊ ವ್ಹಾಳೊ
ಅಬಲ್ ನೈಂ ತುಂ , ಪೌರುಷಾಚ್ಯೆ ನದ್ರೆಂತ್ಲೆಂ
ಅಬಲ್ಪಣಾಚೆಂ ಕೂಸ್ ಹುಮ್ಟಿಲಾಂಯ್ ತೆಂ ಪಾಚಾರ್
ಕುಟ್ಮಾ ಸಂಸಾರ್ ಸೆಜ್ ಸಾಮಾರಾಂತ್
ಖೂಬ್ ಜಾಗ್ ಉಠಯ್ತಾಂ ತುಜಿ ಹಾಜ್ರಿ
ಮೆಲ್ಲ್ಯಾ ಮೊಡ್ಯಾಂಕ್ ಕಳಾತ್ ಕಶಿ ಶಾಥಿ ತುಜಿ?
ಸಾಧನೆಚ್ಯಾ ಧಾಂವ್ಣೆಂತ್ ಥಾಂಭ್ಚಿ ಗರ್ಜ್ ನಾಕಾ
ಆಜಿ , ಆವಯ್ , ಧುವ್ , ಸುನ್ , ಭಯ್ಣ್
ವಿಭಿನ್ನ್ ಪಾತ್ರಾಂನಿ ಭರ್ಪೂರ್ ಜೀವ್ ಭರ್ತಾಯ್
ಆಧಾರ್ ಗರ್ಜ್ ಆಸ್ಚ್ಯಾ ನಾಸ್ಚ್ಯಾಂಕಿ
ತೆಂಕೊ ದಿಲಾಯ್
ಪ್ರಶಸ್ತಿ ನಾಸ್ಲೆಲೆ ಪಾತ್ರ್ ತುಜೆ
ನಿಮ್ಣೆಂ ಪಯ್ಣ್ ಸಂಪ್ತಚ್
ಆವಯ್ ಗರ್ಭಾಂತ್ ಆಸ್ರೊ ಘೆತಾಯ್
ಮಾತಿಯೆ ವಾಸ್ ಚಡಂವ್ಕ್
ಜರೂರ್ ಕಾಡ್ತಾಂ ಯಾದ್ ತುಜಿ
ಪಯ್ಲ್ಯಾ ಪಾವ್ಸಾ ಥೆಂಬ್ಯಾಚ್ಯಾ ಪರ್ಮೊಳಾಂತ್
ಪ್ರಶಸ್ತಿಗಳಿಲ್ಲದ ಪಾತ್ರಗಳು
ಬಾಳ ರಂಗಮಂಚದಲಿ ನಿನ್ನ ಪಾತ್ರ
ಗಳೆಲ್ಲವು ಉನ್ನತವೆ
ತೊಟ್ಟಿಲಿನಿಂದ ಶವದ ಪೆಟ್ಟಿಗೆಯ ತನಕ
ವಿಚಾರಗಳು ಮನಮುಟ್ಟುವಂತವೆ
ಬಣ್ಣದಂಗಿಯ ತೊಟ್ಟು ಅಂಗಳದೆಲ್ಲೆಡೆ
ಓಡಾಡಿದ ಪುಟ್ಟಪಾದಗಳು
ಬೆಳೆದಂತೆಲ್ಲ ಸುತ್ತಲ ಹಸಿದ ಕಂಗಳಿಗೆ
ಆಹಾರವಾಗುವವು ಅರಿಯದೆಯೆ.
ಈ ಮನೆಯ ಮಗಳಿಗಾಗಿ ನೆರೆಮನೆ
ಗಳಲಿ ಯಾತಕೋ ಆತಂಕ!
ತೆರೆದ ಕಣ್ಣೇ ಕ್ಯಾಮೆರಾಗಳಾಗುತ
ನಾಲಕ್ಕು ದಿಕ್ಕುಗಳಲೂ ಕಾವಲು
ಝಣ್ ಗುಡುವ ಗೆಜ್ಜೆಗಿಂದು ವಿಶ್ರಾಂತಿ
ಝಗಮಗಿಸುವ ಉಡುಗೆಗಿಲ್ಲ ಕಳೆ
ಗುಡಿಯೊಳಗ ಹೋದೆಯೆಂದು
ಕೋಪಿಸುವ ಜನ
ಹೋಗದಿರೆ ಧರಧರನೆಳೆದು ನಿನ್ನ
ದೇವನೆದುರೆ ಮಾನಗೆಡಿಸುವರಣ್ಣಾ
ದೇವಿಯಲ್ಲವೆ ನೀ ನಿನಗೇತಕೊ
ಪೂಜೆ ಸನ್ಮಾನ?
ಬೆಳಕಂತೆ ನೀ ಏತಕೋ ಸಂಭ್ರಮವು?
ಗುಡಿಯ ದೇವನ ತೊಳೆತೊಳೆದು
ಪೂಜೆಗೈವ ಪೂಜಾರಿಗೂ
ಗುಟ್ಟಿನಲಿ ಬೇಕಲ್ಲ ನೀನೆ
ನೀಲಿ ಚಿತ್ರಗಳಿಗು ಸಂಪನ್ಮೂಲ?
ಕೆನ್ನಾಲಗೆಯಾಗಿ ಸುಡಲು
ಪ್ರತಿಭೆಗಳ ದಮನಿಸಲು ಕಾದಿವೆ
ನರಿ ತೋಳಗಳ ಹಿಂಡು ಹಸಿದು
ಕಂಚಿನ ಪ್ರತಿಮೆಯಾಗಿ ನಿಂತುಬಿಡು
ಒದ್ದು ತುಳಿವವರ ಮಧ್ಯೆ
ಭವ್ಯ ವ್ಯಕ್ತಿತ್ವದ ಅರಿವಾಗಲವರಿಗೆ !
ಉತ್ತುಂಗಕೇರಿಸು ಪರ್ವತಗಳ ಸೀಳಿ
ಪ್ರತಿಧ್ವನಿಸಲಿ ನಿನ್ನುಲಿಯು
ಪ್ರತಿ ಚೀರಾಟದಲೂ ಬೆಸೆದಿರಲಿ
ಜಯದ ಹರಿವು
ಅಬಲೆಯಲ್ಲ ನೀನು ಪೌರುಷದ ದಿಟ್ಟಿ
ಯಲ್ಲಡಗಿದ ಅಪನಂಬಿಕೆಯ ಬೇರ
ಕಿತ್ತು ಜಗಕೆ ಸಾರು
ಕುಟುಂಬ ನೆರೆಯ ವಠಾರದಿ ಬೀರುವ
ಸಾಂತ್ವನದ ಎಚ್ಚರದ ಹಾಜರಿಯಲಿ
ನಿನ್ನಿರುವ ಲಕ್ಷಣದ ಅರಿವಾದರು
ಎಲ್ಲಿಹುದು ಸತ್ತ ಹೆಣಗಳಿಗೆ?
ಸಾಧನೆಯ ಹಾದಿಯಲಿ ಹಿಂದೆ
ನೋಡದಿರು, ತಂಗದಿರು
ಅಜ್ಜಿ, ತಾಯಿ, ಮಗಳು
ಸೊಸೆ, ತಂಗಿಯಂದದಿ ವಿಭಿನ್ನ
ಪಾತ್ರಗಳ ಜೀವವಾಗಿ
ಬೇಡಿದ, ಬೇಡದವಗೂ ಆಸರೆಯ
ನೀಡಿದ ನಿನ್ನೆಲ್ಲ ಪಾತ್ರಗಳಿಗೆ
ಪ್ರಶಸ್ತಿಗಳಿಲ್ಲ ಕಾಣು !
ಬಾಳಪಯಣವು ಅಂತ್ಯವಾದಂತೆ
ಭುವಿಯ ಗರ್ಭದೊಳು ಲೀನವಾಗಿರುವ
ನಿನ್ನ ಸ್ಮರಣೆಯೆ ಪುನರಪಿ ಎನಗೆ
ಮೊದಲ ಹೂಮಳೆಯು ಸೂಸ್ವ ಕಂಪಿಗೆ
ಊರೆಲ್ಲ ಪಸರಿಸುವ ತಂಪಿಗೆ.
***************************************
ಶೀಲಾ ಭಂಡಾರ್ಕರ್