ಕವಿತೆ
ಎಲ್ಲಾ ಹೆಣ್ಣು ಹೆಣ್ಣು ಹೆಣ್ಣು
ಸುಧಾ ಹಡಿನಬಾಳ
ಹೇ ದುರುಳ ವಿಕೃತ ಕಾಮಿಗಳೆ
ನಿಮ್ಮ ದಾಹ, ಕ್ರೌರ್ಯಕೆ ಕೊನೆಯಿಲ್ಲವೇನು?
ನೀವು ಪೂಜಿಸುವ ಜಗನ್ಮಾತೆ ಹೆಣ್ಣು
ನಿಮ್ಮ ಹೆತ್ತ ಜನ್ಮದಾತೆ ಹೆಣ್ಣು
ನಿಮ್ಮ ಪೊರೆವ ಭೂಮಿತಾಯಿ ಹೆಣ್ಣು
ನಿಮ್ಮ ಮನೆ ಬೆಳಗುವ ಮಡದಿ ಹೆಣ್ಣು
ಮನೆತುಂಬ ಕಿಲ ಕಿಲ ಗೆಜ್ಜೆನಾದ ಹೆಣ್ಣು
ಎಲ್ಲಾ ಹೆಣ್ಣು ಹೆಣ್ಣು ಹೆಣ್ಣು
ಆದರೂ ಅನ್ಯ ಹೆಣ್ಣಿನ ಮೇಲೇಕೆ ನಿಮ್ಮ ಕಣ್ಣು?
ಒಮ್ಮೆ ಯೋಚಿಸಿ ಕಲ್ಪಿಸಿಕೊಳ್ಳಿ
ನಿಮಗೂ ಒಬ್ಬ ಹೆಣ್ಣು ಮಗಳಿದ್ದು
ಅವಳ ಮೇಲೂ ಇಂತದೆ ಭಯಾನಕ
ದೌರ್ಜನ್ಯ, ಕ್ರೌರ್ಯ ನಡೆದರೆ
ಸಹಿಸಲಾದೀತೇ ಊಹಿಸಿಕೊಳ್ಳಲಾದೀತೇ?
ಎಲ್ಲಾ ಹೆಣ್ಣು ಮನೆಯ ಮಕ್ಕಳಂತಲ್ಲವೆ?
ಸಾಕು ನಿಲಿಸಿ ನಿಮ್ಮ ವಿಲಾಸೀ ಪೌರುಷವ
ತಣಿಸಿಕೊಳ್ಳಿ ಮಡದಿಯಿಂದಲೇ ನಿಮ್ಮ ದಾಹವ
ಬದುಕಲು ಬಿಡಿ ಹೆಣ್ಣು ಸಂಕುಲವ
ಉಳಿಸಿ ಗೌರವಿಸಿ ಅವರ ಸ್ವಾತಂತ್ರ್ಯವ
*****************************
ತುಂಬಾ ಸಕಾಲಿಕ ಮನಮುಟ್ಟುವ , ಕಣ್ತೆರೆಸುವ ಕವನ. ಅಭಿನಂದನೆ
ಕವಿತೆ ಚೆನ್ನಾಗಿದೆ ನೀಚ ಕಾಮುಕ ದುರುಳರಿಗೆ ಉಗ್ರ ಶಿಕ್ಷೆಯಾಗಬೇಕು