ಗಝಲ್
ಎ . ಹೇಮಗಂಗಾ
ಕಲ್ಲುಮುಳ್ಳುಗಳ ಹಾದಿಯಲ್ಲಿ ನಡೆಯುತ್ತಲೇ ಇದ್ದೇನೆ ನಾನೇಕೆ ಹೀಗೆ
ಕಷ್ಟ ಕಾರ್ಪಣ್ಯಗಳಲ್ಲಿ ಮುಳುಗುತ್ತಲೇ ಇದ್ದೇನೆ ನಾನೇಕೆ ಹೀಗೆ
ಮೇಲೇರಬೇಕೆಂದರೂ ಕಾಲು ಹಿಡಿದು ಜಗ್ಗುವವರೇ ಹೆಚ್ಚು
ನಿತ್ಯ ಬೆನ್ನಿಗೆ ಇರಿಸಿಕೊಳ್ಳುತ್ತಲೇ ಇದ್ದೇನೆ ನಾನೇಕೆ ಹೀಗೆ
ಮೋಡಿ ಮಾತುಗಳಿಗೆ ಮರುಳಾದರೂ ಎಚ್ಚೆತ್ತುಕೊಳ್ಳಲಿಲ್ಲ
ಕುಹಕಿಗಳ ನೋಟಕೆ ಗುರಿಯಾಗುತ್ತಲೇ ಇದ್ದೇನೆ ನಾನೇಕೆ ಹೀಗೆ
ಬೆಳ್ಳಗಿರುವುದೆಲ್ಲಾ ಹಾಲೆಂಬ ನಂಬಿಕೆ ಹೆಜ್ಜೆಹೆಜ್ಜೆಗೂ ಹುಸಿಯಾಗಿದೆ
ವಂಚನೆಯ ಹಾಲಾಹಲವ ಕುಡಿಯುತ್ತಲೇ ಇದ್ದೇನೆ ನಾನೇಕೆ ಹೀಗೆ
ಬೇಲಿಯೇ ಎದ್ದು ಹೊಲ ಮೇಯುವ ಕಾಲ ಇದಲ್ಲವೇ ಹೇಮ
ತಿದ್ದಲಾಗದ ನನ್ನ ನಾನು ಹಳಿಯುತ್ತಲೇ ಇದ್ದೇನೆ ನಾನೇಕೆ ಹೀಗೆ
************************
Very nice madam
ಸುಂದರವಾದ ಗಜಲ್ ಹೆಣೆದಿದ್ದೀರಿ ಮೇಡಂ ಜಿ.