ಗಜಲ್ ಪ್ರತಿಮಾ ಕೋಮಾರ ವೈಷಮ್ಯದ ಮನಸುಗಳ ಪ್ರೀತಿಯ ಮಾತಿನಿಂದ ಸೆಳೆಯಬೇಕು ನಾವುಒಡೆದ ಕನಸುಗಳ ಬೆಳಕಿನ ದೀಪವಿಟ್ಟು ಹೊಸೆಯಬೇಕು ನಾವು ತಾಳ್ಮೆಯಿಲ್ಲದ ಬದುಕು ಸರಿಯ ದಡ ಸೇರುವುದೇ?ವೃಕ್ಷದ ಫಲ ಹಣ್ಣಾಗಿ ಮಾಗುವವರೆಗೆ ಕಾಯಬೇಕು ನಾವು ಸುಖ ದುಃಖಗಳು ಎಲ್ಲರ ಜೀವನದ ಇಬ್ಬದಿಗಳುನೋವ ಕಂಗಳ ಸಾಂತ್ವನದ ಹಾಡಿನಿಂದ ನಗಿಸಬೇಕು ನಾವು ಸಾಧನೆಯ ಹಾದಿಯಲಿ ಮಲ್ಲಿಗೆಯ ಹಾಸಿರದು ಎಂದಿಗೂಎಡರು ತೊಡರುಗಳನ್ನು ಹಠದಿಂದ ಮೀರಿ ಜಯಿಸಬೇಕು ನಾವು ಹುಟ್ಟಿದ ಎಲ್ಲಾ ಜೀವಿಗಳು ಬಾಳ ಸವೆಸಿ ಹೋಗುವುವುಬಾಡಿದ “ಪ್ರತಿ “ಬದುಕ ಮಾಣಿಕ್ಯವಾಗಿಸಲು ಪ್ರಯತ್ನಿಸಬೇಕು ನಾವು […]
ಗಜಲ್ ಸ್ಮಿತಾ ಭಟ್ ಎದೆಯ ಮಾತುಗಳು ಮೊರೆಯುತ್ತಿದೆ ನನಗೂ ನಿನಗೂ/ಅಂತರಂಗದ ಆಹ್ವಾನ ಹಿತನೀಡುತ್ತಿದೆ ನನಗೂ ನಿನಗೂ/ ಕಣ್ಣ ಗೊಳದಲಿ ನೂರಾರು ಕನಸುಗಳ ಚಲನವಲನನಭವ ತೋರಿಸಿ ಹಗುರಾಗಬೇಕಿದೆ ನನಗೂ ನಿನಗೂ/ ಆತುಕೊಂಡೇ ಬದುಕುವ ಹಂಬಲ ಕೆರಳುತ್ತದೆ ಕೆಲವೊಮ್ಮೆಸಾಕೆಂದು ಸರಿಸದೆ ಒಳಗೊಳ್ಳುವುದಿದೆ ನನಗೂ ನಿನಗೂ/ ಮೋಹದ ಸೆಳೆತಕೆ ಮನಸೋತ ವಾಂಛೆಯಲ್ಲವಿದು ಗೆಳೆಯಾಈಗಷ್ಟೇ ಹನಿಯಾಗಿದ್ದೇನೆ ಕಡಲಾಗುವುದಿದೆ ನನಗೂ ನಿನಗೂ/ ಪಯಣದ ತಿರುವುಗಳಿಗೆ ಹೆಸರಲಿಗೆಯ ಹಂಗೇಕೆ ದೊರೆಯೇಮರೆಯದೇ ಸರಿ ದಾರಿಯಲಿ ಕೂಡುವುದಿದೆ ನನಗೂ ನಿನಗೂ/ ಮೌನವಾಗಿದ್ದೇ ಮುನ್ನುಡಿ ಬರೆದಾಗಿದೆ ಬದುಕಿಗೆ ಓದಿ ಬಿಡುಇಲ್ಲಬಿಡು […]
ಗಜಲ್ ಪ್ರಭಾವತಿ ಎಸ್ ದೇಸಾಯಿ ವಿರಹದುರಿಗೆ ಜೀವವು ಪತಂಗದಂತೆ ಸುಟ್ಟು ಶವವಾಗಲಿ ರಾತ್ರಿಕಂಡ ಕನಸ ಹೂ ದಳಗಳು ಉದುರಿ ಉಸಿರು ಸಮಾಧಿಯಾಗಲಿ ರಾತ್ರಿ ಎದೆಭಾರವಾಗಿದೆ ನೆನಪಿನ ಗಂಟು ಹೊತ್ತು ಬಂಡಿ ಸಾಗಲಿ ರಾತ್ರಿಬದುಕು ಹಗುರಾಗಲು ಬೆಂದು ಉರಿವ ದೇಹಕೆ ತಂಬೆಳಕಾಗಲಿ ರಾತ್ರಿ ದಣಿದ ಕಣ್ಣ ರೆಪ್ಪೆಗಳು ನಿಂತು ನಿದ್ದೆಗೆ ಬೇಲಿಯಾಗಲಿ ರಾತ್ರಿಮಧುರ ಗಳಿಗೆಗಳ ಕಾಯುವ ಹೃದಯಗಳು ಒಲಿದು ಒಂದಾಗಲಿ ರಾತ್ರಿ ಮನದಾಳದಲ್ಲಿ ಎದ್ದ ಪ್ರಶ್ನೆಗಳಿಗೆ ಉತ್ತರವಾಗಲಿ ರಾತ್ರಿನೊಂದ ಜೀವಿಗಳಿಗೆ ಜಗದ ಎಲ್ಲ ಸುಖವು ಅನುಭವವಾಗಲಿ ರಾತ್ರಿ ಅಗಲಿಕೆ […]
ಗಜಲ್ ಮದುಶಾಲೆಯ ಹೊಸ್ತಿಲಲ್ಲಿ…
ವಿಶೇಷ ಲೇಖನ ಗಜಲ್ ಮದುಶಾಲೆಯ ಹೊಸ್ತಿಲಲ್ಲಿ… ಡಾ. ಮಲ್ಲಿನಾಥ ಎಸ್. ತಳವಾರ ಪ್ರೀತಿಯೇ ಈ ಜಗದ ಸುಂದರ ಬುನಾದಿ. ಎಲ್ಲ ಚಟುವಟಿಕೆಗಳಿಗೆ ಹೃದಯ ಬಡಿತದ ಪಿಸುಮಾತೆ ಕಾರಣ. ಸ್ಪರ್ಶಕ್ಕೂ ಎಟುಕದ ಅನುಭವಗಳೆಲ್ಲವನ್ನು ಕಟ್ಟಿಕೊಡುವುದೆ ಸಾಹಿತ್ಯ. ಆ ಸಾಹಿತ್ಯದ ಸಸಿಗೆ ನಮ್ಮ ಭಾವನೆಗಳೆ ವರ್ಷಧಾರೆ..!! ಭಾವಗಳ ಸಂಗಮವೇ ಆ ಅಕ್ಷರ ಅಕ್ಷಯ ಪಾತ್ರೆ. ಸುಂದರ ಸಮಾಜದ ಪ್ರತಿಬಿಂಬವನ್ನು ಪ್ರತಿನಿಧಿಸುವ ದರ್ಪಣವೇ ಈ ಅಕ್ಷರ ಲೋಕ..!! ಇದೊಂದು ಭಾವನೆಗಳ ಕಲ್ಪನಾತ್ಮಕ ಪರಪಂಚ. ಇದು ಕ್ರಿಯಾಶೀಲತೆ, ಭಾಷೆ, ವರ್ಣಗಳು ಮತ್ತು […]
ಬದುಕು ಎಷ್ಟೊಂದು ಸುಂದರ
ಲೇಖನ ಚಿಕ್ಕ ಪುಟ್ಟ ಸಂಗತಿಗಳಲ್ಲೇ ಸಂತೃಪ್ತಿ ಕಾಣುತ್ತಿರಿ ಆಗ ಬದುಕು ಎಷ್ಟೊಂದು ಸುಂದರ. ಪಲ್ಲವಿ ಪ್ರಸನ್ನ ಬೆಳಗಾಗಲೆoದೆ ಕತ್ತಲು ,ಗೆಲ್ಲಲೆoದೆ ಸೋಲು,ನಗುವಿನ ಜೊತೆ ದುಃಖ ಇದ್ದೇ ಇರುತ್ತದೆ ,ಅದರೂ ಚಿಕ್ಕ ಪುಟ್ಟ ಸಂಗತಿಗಳಲ್ಲೇ ನಾವು ಆನಂದ ಅನುಭವಿಸುತ್ತೇವಲ್ಲ ಅದು ನಮಗೆ ಅಪ್ಪಟ ಆರೋಗ್ಯ ,ಉಲ್ಲಾಸಿತರಾಗಿಡಲು ಸಹಾಯಮಾಡುತ್ತದೆ. ತಲೆ ಬಾಚಿಕೊಳ್ಳುವಾಗ ಉದುರಿದ ಕೂದಲ ಬಗ್ಗೆ ಕೊರಗದೇ ಇದ್ದ ಕೂದಲನ್ನು ನೇವರಿಸುತ್ತ ಅದರ ಆರೈಕೆಯಲಿ ಮಗ್ನವಾಗಿ ಖುಷಿ ಅನುಭವಿಸಬೇಕು. ಒಂದು ಒಳ್ಳೆ ಪುಸ್ತಕವನ್ನು ಓದುವಾಗ ಅದರ ಇಂಚಿಂಚೂ ,ಪ್ರತೀ ಸಾಲನ್ನೂ […]
ಗಜಲ್
ಗಜಲ್ ಶೈಲಜಾ.ವಿ.ಕೋಲಾರ ಊರಿಗೆ ಊರೇ ಬೆಂಕಿಯಲ್ಲಿ ಬೇಯುತ್ತಿದೆ ಕಾಯುವರಾರಿಲ್ಲಿಜಾತಿಗೆ ಜಾತಿ ಜಿದ್ದಾಜಿದ್ದಿ ಶಾಂತಿ ಸೊರಗುತ್ತಿದೆ ಕಾಯುವರಾರಿಲ್ಲಿ ಕಳೆ ಬೆಳೆದ ಹೊಲದಲ್ಲಿ ಬೆಳೆ ಬೆಳೆಯಲು ಜಾಗವುಂಟೇಕೂಳಿಲ್ಲದ ಹಸುಳೆಯ ಕೂಗು ಒಣಗುತ್ತಿದೆ ಕಾಯುವರಾರಿಲ್ಲಿ ಸ್ವಸ್ಥ ಸಂದೇಶ ಹೊತ್ತುಬಂದ ಬಿಳಿ ಪಾರಿವಾಳ ಕೆಂಪಾಗಿ ಹಾರುತ್ತಿದೆಗಾಯ ಒಸರುವ ರಕ್ತಕೆ ಗಾಳಿ ಗೋಳಾಡುತ್ತಿದೆ ಕಾಯುವರಾರಿಲ್ಲಿ ಮೇಲು ಕೀಳೆಂಬ ಬೇರು ಬಲವಾಗಿ ಮತ ಧರ್ಮ ಸಿಟಿಲೊಡೆದಿದೆಊರ ಕೆರೆ ಜಾಲಿ ಮರದ ಮುಳ್ಳು ನಂಜೇರುತ್ತಿದೆ ಕಾಯುವರಾರಿಲ್ಲಿ ಹಲವು ಹೂಗಳು ಒಂದೇ ಮಾಲೆಯಲಿ ನೋಟ ಸೆಳೆದಿವೆಕುರಬುವ ಕೈಗೆ ಮಾತಿಲ್ಲದ […]
ಪವರ್ ಲೂಮ್…!
ಪವರ್ ಲೂಮ್…!(ನೇಕಾರನ ಸ್ವಗತ) ಡಾ. ಅರಕಲಗೂಡು ನೀಲಕಂಠ ಮೂರ್ತಿ ಹೊತ್ತು ಕೂಡ ಮೂಡದ ಹೊತ್ತಿಗೆಈಜುಗಾರ ತುಂಬು ಹೊಳೆ ಧುಮಿಕಿದ ಹಾಗೆ,ಮೈಮುರಿವ ಆಯಾಸದಲುಒಂದು ದಿನ ತಪ್ಪದ ಹಾಗೆಗುಂಡಿಯೊಳು ಇಳಿದರಾಯ್ತು – ಕಾಲೊದರಿ…‘ತನ್ನ ಪುಟ್ಟ ಎಳೆಯ ಹಾಸುಹೊಕ್ಕಲಿನೂಲಿಗೇ ಅರಿವೆ ನೇಯುವ ಸಿರಿಲಾಳಿಗೋ ಮುಗಿಲಂತೆ ಗುಡುಗಿಹರಿದೋಡುವ ತವಕ!’ ನೇಯುವುದುನಮಗೆ ಅಂತರಂಗದಲಿ ಒಪ್ಪಿಅಪ್ಪಿದ ಕಸುಬುಹಗಲಿರಲಿ ಇರುಳಿರಲಿಅಥವ ನಡುರಾತ್ರಿಯೇ ಇರಲಿಬೆತ್ತಲೆ ಬೆಚ್ಚಗೆ ಮುಚ್ಚುವ ಬದುಕಲಿಮನೆಯ ಒಬ್ಬೊಬ್ಬರಿಗೂ ಕೈತುಂಬ ಕೆಲಸ!ಇಷ್ಟಾದರೂ ಒಂದೆರಡು ನವೆದ ಅಂಗಿತೇಪೆಯಾದ ಪಂಚೆ ನಮ್ಮೊಡಲ ಮುಚ್ಚಲುಒಳಗಿರದು ಒಂದು ಕಾಚ ಎಂದೂ! ದಢಕ್ಕನೆ-ನಮ್ಮ ತುತ್ತಿನ […]
ಬೀದಿಯ ಪ್ರಪಂಚ….
ಲಲಿತ ಪ್ರಬಂಧ ಬೀದಿಯ ಪ್ರಪಂಚ…. ಟಿ.ಎಸ್.ಶ್ರವಣಕುಮಾರಿ ಹಾದಿ ಬೀದಿಗಳಿಗೆ ತನ್ನದೇ ಒಂದು ಆಕರ್ಷಣೆಯಿದೆ. ಅದರದ್ದೇ ಒಂದು ಪ್ರಪಂಚ. ಎಂಥ ಅಳುತ್ತಿರುವ ಪುಟ್ಟ ಮಕ್ಕಳನ್ನೂ ಎತ್ತಿಕೊಂಡು ಬೀದಿಗೆ ಕರೆದುಕೊಂಡು ಬಂದರೆ ಕೆಲವೇ ಕ್ಷಣಗಳಲ್ಲಿ ಅವುಗಳ ಅಳು ಮಾಯ. ಅವುಗಳಿಗೆ ತೋರಿಸುವುದಕ್ಕೆ ಇಡಿಯ ಪ್ರಪಂಚವೇ ಅಲ್ಲಿದೆ. “ಪುಟ್ಟೂ ಅಲ್ನೋಡು ಕಾರು.. ಬಂತು ಬಂತು ಬಂತು…. ಈಗ ಸ್ಕೂಟರ್ ನೋಡೋಣ.. ಮಾಮಾ ಬಂದ್ಮೇಲೆ ಸ್ಕೂಟರ್‌ನಲ್ಲಿ ರೌಂಡ್ ಹೋಗ್ತೀಯಾ… ಇದೇನಿದು..? ಸ್ಕೂಲು ವ್ಯಾನು.. ಮುಂದಿನ್ವರ್ಷದಿಂದ ನೀನೂ ಸ್ಕೂಲಿಗೆ ಹೋಗ್ತೀಯಾ ಅಣ್ಣಾ ತರ…. ಇಲ್ನೋಡು […]
ಸಮಾಜ ಕಟ್ಟುವಲ್ಲಿ ಸಾಹಿತ್ಯದ ಪಾತ್ರ
ಲೇಖನ ಸಮಾಜ ಕಟ್ಟುವಲ್ಲಿ ಸಾಹಿತ್ಯದ ಪಾತ್ರ ಶಿವರಾಜ್ ಮೋತಿ ಸಮಾಜವೆಂದರೆ ಜನ,ಗುಂಪು ಎಂದರ್ಥವಾಗುತ್ತದೆ. ವಿಧವಿಧವಾದ ಜನ,ಅನೇಕ ಗುಂಪುಗಳು ಇರುತ್ತವೆ. ಆದರೆ ಇಂದಿನ ಸಮಾಜ ಮೂಲಭೂತವಾದಿ,ಡೊಂಗಿ ರಾಜಕಾರಣಿಗಳ ಕೈಗೆ ಸಿಕ್ಕು ವಿಲ-ವಿಲವಾಗಿ ಬಿದ್ದು ನರಳಾಡುತ್ತಿದೆ. ಸಮಾಜದಲ್ಲಿದ್ದ ನೂನ್ಯತೆಗಳನ್ನು ಸರಿಪಡಿಸಲು,ಸಮ ಸಮಾಜದ ಕನಸನ್ನು ಕಟ್ಟಲು ಹಲವಾರು ಮಾರ್ಗಗಳಿವೆ. ಅದರಲ್ಲೂ ವಿಶೇಷವಾಗಿ ಸಾಹಿತ್ಯವೂ ಒಂದು.ಸಾಹಿತ್ಯದಲ್ಲಿ ಹಲವಾರು ಪ್ರಕಾರಗಳು ಜನಪದ, ಜಾನಪದ,ಪುರಾಣ,ನಾಟಕ,ಕಲೆ, ಸಂಗೀತ ಮುಂತಾದವೆಲ್ಲವೂ ಒಂದಕ್ಕೊಂದು ಸಂಬಂಧವಿದ್ದೆ ಇದೆ. ಸಾಹಿತ್ಯದ ಮೂಲಕ ಸಮಾಜವನ್ನು ಕಟ್ಟಲು ಅನೇಕ ಮಹನೀಯರು,ಶ್ರಮಿಸಿದ್ದಾರೆ,ಶ್ರಮಿಸುತ್ತಿದ್ದಾರೆ ಕೂಡ ಹೌದು.ಸಾಹಿತ್ಯವು ಒಡೆದ ಮನಸ್ಸುಗಳನ್ನು […]
ಅಂಕಣ ಬರಹ ಎಲ್ಲಾ ಒಳ್ಳೆಯದೇ ಆಗುತ್ತೆ… ಈ ಥರದ ಮಾತುಗಳನ್ನ ನಾವು ಬಹಳಷ್ಟು ಸಾರಿ ಕೇಳಿರ್ತೇವೆ. “ಒಳ್ಳೇವ್ರಿಗೆ ಒಳ್ಳೆಯದೇ ಆಗುತ್ತೆ”, “ನಾವು ಒಬ್ರಿಗೆ ಒಳ್ಳೇದು ಮಾಡಿದ್ರೆ ದೇವರು ನಮಗೆ ಒಳ್ಳೇದು ಮಾಡ್ತಾನೆ”, “ತಾತ ಮಾಡಿದ ಪಾಪ ಮೊಮ್ನೊಗನಿಗೆ”… ಹೀಗೆ ಹಲವಾರು ಮಾತುಗಳು… ಇವೆಲ್ಲ ಬರಿಯ ಮಾತುಗಳಲ್ಲ, ಅದೊಂದು ದೈತ್ಯ ಶಕ್ತಿಯ ನಂಬಿಕೆ, ನಮ್ಮ ಬದುಕನ್ನು ಮುನ್ನಡೆಸುವ ಶಕ್ತಿ. ನನ್ನ ತಂದೆ ಒಬ್ಬ ಪ್ರಾಮಾಣಿಕ ಹೈಸ್ಕೂಲ್ ಗಣಿತದ ಮೇಷ್ಟ್ರು. ತಮ್ಮ ವಿದ್ಯಾರ್ಥಿಗಳಿಗೆ ಸ್ವಂತ ಮಕ್ಕಳ ರೀತಿಯಲ್ಲೇ ಭಾವಿಸಿ ಪಾಠ […]