ಅಂಕಣ ಬರಹ ಕತೆಗಾರ್ತಿ ಆಶಾ ಜಗದೀಶ್ಮುಖಾಮುಖಿಯಲ್ಲಿ “ಹೆಣ್ಣು ನನ್ನ ಬರಹದ ಮೂಲ ಕಾಳಜಿ” ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಉತ್ತರ: ಕವಿತೆಯನ್ನು ನಾನು ಬರೆಯುತ್ತೇನೆ ಎನ್ನುವುದು ತಪ್ಪಾಗುತ್ತದೆ. ಕವಿತೆಗಳೇ ನನ್ನಿಂದ ಬರೆಸಿಕೊಳ್ಳುತ್ತವೆ ಎನ್ನುವುದು ಸರಿ. ನನ್ನೊಳಗೆ ಅಂತಹುದೊಂದು ತೀವ್ರತೆಯನ್ನು ಇಟ್ಟುಕೊಳ್ಳದೆ ಬರೆಯುವುದು ನನಗೆ ಕಷ್ಟ. ಕವಿತೆ ಹುಟ್ಟುವ ಕ್ಷಣ ಯಾವುದು ? ಉತ್ತರ: ಯಾವ ಕ್ಷಣವಾದರೂ ಸರಿ ಅದು ನನ್ನನ್ನು ಕಾಡಬೇಕು. ಸತಾಯಿಸಬೇಕು. ಇನ್ನು ಬರೆಯದೆ ಉಳಿಯಲಾರೆ ಅನ್ನಿಸುವಂತೆ ಮಾಡಬೇಕು. ಆಗ ಮಾತ್ರ ಕವಿತೆ ಹುಟ್ಟುತ್ತದೆ. ಹಾಗಾಗಿ […]
ಬರಗೂರರೆಂಬ ಬೆರಗು
ಲೇಖನ ಬರಗೂರರೆಂಬ ಬೆರಗು ಮಮತಾ ಅರಸೀಕೆರೆ ಪ್ರೊ.ಬರಗೂರು ರಾಮಚಂದ್ರಪ್ಪನವರ ಬಗ್ಗೆ ಬರೆಯುವುದೆಂದರೆ ಸಾಗರಕ್ಕೆ ಸೇರುವ ನದಿಗಳನ್ನು ಎಲ್ಲೋ ಕುಳಿತು ಎಣಿಸಿದಂತೆ.ಯಾವುದೇ ಉತ್ಪ್ರೇ ಕ್ಷೆಯಿಲ್ಲದ ಮಾತುಗಳಿವು ಎಂದು ಅವರನ್ನು ಸನಿಹದಿಂದ ಬಲ್ಲವರಿಗೆಲ್ಲಾ ಚಿರಪರಿಚಿತ.ಅವರ ಹತ್ತು ಹಲವು ಮಜಲುಗಳ ವೈವಿಧ್ಯ ಚಟುವಟಿಕೆಗಳನ್ನು ಸಾಮಾನ್ಯವಾಗಿ ಎಲ್ಲರೂ ಬಲ್ಲರು.ನಾನಿಲ್ಲಿ ಬರಗೂರು ಸರ್ ಬಗ್ಗೆ ಅಕಾಡೆಮಿಕ್ ಅಲ್ಲದ ಕೆಲವೇ ಸರಳ ಮಾತುಗಳಲ್ಲಿ ಬರೆಯಲು ಪ್ರಯತ್ನಪಡುವೆ. ಬರಗೂರರನ್ನ ಕಂಡಿದ್ದು ಪತ್ರಿಕೆಗಳಲ್ಲಿ ಅಂಕಣಗಳ ಮೂಲಕ.ಸಾಮಾನ್ಯವಾಗಿ ಆಯ್ದ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಲೇಖನ, ಅಂಕಣಗಳನ್ನು ತಪ್ಪದೇ ಓದುತ್ತಿದ್ದೆ.ಬಿ.ಆರ್.ಬರಹಗಳನ್ನು ಮೆಚ್ಚುತ್ತಿದ್ದೆ.ನಂತರ ಅಲ್ಲಿಲ್ಲಿ […]
ಪ್ರಕೃತಿ
ಕವಿತೆ ಪ್ರಕೃತಿ ಭಾಗ್ಯ ಸಿ ಮನುಜ ಜೀವನದ ಅವಿಭಾಜ್ಯ ಅಂಗ ಪ್ರಕೃತಿಜತನದಲಿ ಕಾಪಾಡಿಕೊಳ್ಳುವುದಾಗಬೇಕು ನಮ್ಮ ಪ್ರವೃತ್ತಿಗಾಳಿ,ಬೆಳಕು,ನೀರು ಎಲ್ಲಾ ಪ್ರಕೃತಿಯ ಒಡಲಲಿ ನಗುತಿರೆಮನುಜನ ಜೀವನವು ವಜ್ರದಂತೆ ಹೊಳೆಯುತ್ತಿರೆ ವಿಪರೀತ ಬಯಕೆಗೆ ಪರಿಸರ ಬಲಿಪ್ರಾಣಿ ಪಕ್ಷಿಗಳ ಆಸರೆಗಿಟ್ಟ ಕೊಡಲಿಸಣ್ಣ ಮಳೆಗೂ ಕುಸಿಯುತ್ತಿದೆ ಬೆಟ್ಟ ಗುಡ್ಡಜಲಪ್ರಳಯ, ಚಂಡಮಾರುತ ಸೀಳಿದೆ ಅಡ್ಡಡ್ಡ ಬಳಲಿಕೆ ನಿವಾರಣೆಗೆ ಬೇಕು ನೀರುಪಂಚಭೂತಗಳ ನಿರ್ವಹಣೆ ಹೊತ್ತವರಾರುಪ್ರಕೃತಿಯ ಒಡಲ ಸೀಳಿ ತಲೆಯೆತ್ತಿವೆ ಕಟ್ಟಡಗಳುಅವೈಜ್ಞಾನದ ಫಲವಾಗಿ ಉರುಳುತ್ತಿವೆ ತಲೆಗಳು ಅಪ್ಪಿಕೋ ಚಳುವಳಿಯ ರೂವಾರಿ ತಾಯಿಹದಿನೇಳನೆ ಶತಮಾನದ ಅಮೃತಾದೇವಿ ಬಿಷ್ಣೋಯಿಅಧಿಕಾರವಲ್ಲ ಅಸ್ತಿತ್ವವಿದೆ ನಮಗೆ […]
ನಕ್ಷತ್ರ ನೆಲಹಾಸು
ಕವಿತೆ ನಕ್ಷತ್ರ ನೆಲಹಾಸು ಸ್ವಭಾವ ಕೋಳಗುಂದ ನಕ್ಷತ್ರಗಳ ಹಾದಿಗುಂಟ ಹಾಸಿಸಿಂಗರಿಸಿ ನಿನ್ನ ಕೊಳಲ ಪಾದನೆನಪಿನೆದೆಯ ತುಳಿಯಲಾಶಿಸಿದೆ ಅರ್ಧ ಕತ್ತಲಲಿ ಎದ್ದು ಹೊರಟುನಿನ್ನ ತಬ್ಬಲಿ ಮಾಡಿನಾ ಬುದ್ಧನಾಗಲಾರೆ ಈ ಹಾದಿಗಳೆಲ್ಲಾಎಷ್ಟೊಂದು ಆಮಿಷ ಒಡ್ಡುತ್ತಿವೆಹೃದಯ ಬಂಧಿಯ ಮುಕ್ತಿಗಾಗಿ ನನ್ನೊಳಗಿನ ಸೀತಾಮೀನ ಮೊಟ್ಟೆಯ ಕಾವಲಲಿಸಾವಿರ ಸಂತತಿಯ ಬೆಳಕು ನನ್ನ ಅಸ್ತಿತ್ವದ ಬಿಂದುವಿಗೆನಿನ್ನೊಲವಿನ ಮೊಲೆಹಾಲ ಸ್ಪುರಣಭರವಸೆಯ ಮುತ್ತ ಮಣಿಹಾರ ಹಿಮ ಮಣಿಯ ಮರಳಿನಮರೀಚಿಕೆಯ ಸಾಗರಪಾರಿಜಾತದ ಪರಿಮಳದ ಸಂದೇಶ ಹನಿ ಬೀಜಕ್ಕೆ ಸಾವಿರ ಸಂತಾನನೆಲದ ನಾಲಗೆಯಲಿಸಾವಿನ ಸಂಚಾರಿ ಹಸಿ ಮಣ್ಣ ಮೈಯೊಳಗೆಕನಸ ಕಲ್ಪನೆಯ ಕೂಸುಬಿತ್ತಿ […]
ಹೀಗೇಕೆ ನನ್ನವ್ವ ?
ಲೇಖನ ಹೀಗೇಕೆ ನನ್ನವ್ವ ? ಸುಮಾ ಆನಂದರಾವ್ ಇಂದೇಕೆ ನನ್ನವ್ವ ಪದೇ ಪದೇ ನೆನಪಾಗುತ್ತಿದ್ದಾಳೆ? ಅವಳೇಕೆ ಹಾಗಿದ್ದಳು? ಜೆರ್ಮನಿಯಲ್ಲಿ ಒಬ್ಬ ವಯೋ ವೃದ್ಧೆಯ ಪರಿಚಯವಾದಂದಿನಿಂದ ಗಮನಿಸುತ್ತಿದ್ದೇನೆ. ಅವಳ ದಿಟ್ಟತನ ಅಚ್ಚರಿ ಉಂಟುಮಾಡುತ್ತಿದೆ. ಅವಳು ತನ್ನೆಲ್ಲಾ ಕರ್ತವ್ಯ ಮುಗಿಸಿದ್ದಳು, ಮಕ್ಕಳನ್ನು ಓದಿಸಿ ಅವರ ಕಾಲಮೇಲೆ ಅವರು ನಿಲ್ಲುವ ಹಾಗೆ ಮಾಡಿದ್ದಾಳೆ. ಆಗಾಗ ಮಕ್ಕಳು ಬಂದು ಹೋಗುತ್ತಿರುತ್ತಾರೆ. ತೊಂಬತ್ತು ವರ್ಷಆದರೂ ತನ್ನ ಕೆಲಸ ತಾನೇ ಮಾಡಿಕೊಳ್ಳುತ್ತಾಳೆ, ಕೈಯಲ್ಲಿ ಕೋಲು ಹಿಡಿದು ಸಣ್ಣ ನೂಕುವ ಗಾಡಿಯಲ್ಲಿ ಅಗತ್ಯ ವಸ್ತುಗಳನ್ನು […]
ಅಂಕಣ ಬರಹ ಅಲೆಯ ಮೊರೆತ ಅಲೆಯ ಮೊರೆತ( ಕಾದಂಬರಿ)ತಮಿಳು ಮೂಲ : ಕಲ್ಕಿಅನುವಾದ : ಶಶಿಕಲಾ ರಾಜಪ್ರ : ಸಾಹಿತ್ಯ ಅಕಾಡೆಮಿಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೪೨೦ಪುಟಗಳು : ೬೯೨ ವಾಸ್ತವವಾದಿ ಶೈಲಿಯಲ್ಲಿರುವ ಈ ಕಾದಂಬರಿಯು ಒಂದು ಕಾಲ್ಪನಿಕ ಕಥೆಯನ್ನು ವಸ್ತುವಾಗಿ ಹೊಂದಿದ್ದರೂ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು ನಡೆದ ಎಲ್ಲ ಸಂಗತಿಗಳನ್ನೂ ಐತಿಹಾಸಿಕ ಸತ್ಯಗಳೊಂದಿಗೆ ಯಥಾವತ್ತಾಗಿ ನಿರೂಪಿಸುತ್ತದೆ. ಪಟ್ಟಾಮಣಿಯಮ್ ಕಿಟ್ಟಾವಯ್ಯರ್, ಸರಸ್ವತಿ ಅಮ್ಮಾಳ್, ಪದ್ಮಾಚಲ ಶಾಸ್ತಿç ಅಯ್ಯರ್, ಕಾಮಾಕ್ಷಿ ಅಮ್ಮಾಳ್, ದೊರೆಸ್ವಾಮಿ […]
ಅಂಕಣ ಬರಹ-14 `ಸಣ್ಣ’ಸಂಗತಿ ನರಸಿಂಹಸ್ವಾಮಿಯವರ ಪುಟ್ಟ ಕವಿತೆಯೊಂದಿದೆ-ಹೆಸರು `ಸಣ್ಣಸಂಗತಿ’. ಅದು ಸಾಹಿತ್ಯ ವಿಮರ್ಶೆಯಲ್ಲಿ ಶ್ರೇಷ್ಠ ಕವನವೆಂದೇನೂ ಚರ್ಚೆಗೊಳಗಾಗಿಲ್ಲ. ಆದರೆ ಮತ್ತೆಮತ್ತೆ ಕಾಡುತ್ತದೆ. ಅದರ ವಸ್ತು ತಾಯೊಬ್ಬಳ ದುಡಿತ. ಅಲ್ಲೊಂದು ಸನ್ನಿವೇಶವಿದೆ: ನಡುರಾತ್ರಿ. ಕುಟುಂಬದ ಸಮಸ್ತ ಸದಸ್ಯರೂ ಗಾಢನಿದ್ದೆಯಲ್ಲಿದ್ದಾರೆ. ಅವರಲ್ಲಿ ಎಳೆಗೂಸಿನ ತಾಯಿಯೂ ಸೇರಿದ್ದಾಳೆ. ಆಕೆಯ ಮಂಚದ ಪಕ್ಕದಲ್ಲಿರುವ ತೊಟ್ಟಿಲಲ್ಲಿ ಕೂಸಿದೆ. ಅದು ಗಾಳಿಯಲ್ಲಿ ಕಾಲು ಅಲುಗಿಸುತ್ತ ಹೊದಿಕೆಯನ್ನು ಕಿತ್ತೆಸೆಯುತ್ತಿದೆ. ಎಲ್ಲರಂತೆ ಆಕೆಯೂ ನಿದ್ದೆಯಲ್ಲಿ ಮುಳುಗಿರುವಳು. ಆದರೆ ಅವಳ ಕೈ ಮಗುವಿನ ಹೊದಿಕೆಯನ್ನು ಸರಿಪಡಿಸುತ್ತಿದೆ. `ನಿದ್ದೆ ಎಚ್ಚರಗಳಲಿ ಪೊರೆವ […]
ಗಝಲ್
ಗಝಲ್ ರತ್ನರಾಯ ಮಲ್ಲ ಅಕ್ಕಸಾಲಿಗನಲ್ಲಿ ಕಾಲ್ಗೆಜ್ಜೆ ತಂದಿರುವೆನು ಪ್ರೀತಿಯಿಂದಬಲಗಾಲು ಮುಂದೆಯಿಡು ತೊಡಿಸುವೆನು ಪ್ರೀತಿಯಿಂದ ಮಯೂರವು ವಿಹರಿಸಿದಂತಾಗುತಿದೆ ಈ ಹೃದಯದಲ್ಲಿಹಂಸದ ನಡಿಗೆಯನು ಪ್ರೀತಿಸುತಿರುವೆನು ಪ್ರೀತಿಯಿಂದ ಹಕ್ಕಿಗಳ ಕಲರವವು ಆಲಂಗಿಸುತಿದೆ ಈ ಮೈ-ಮನಗಳನ್ನುಶಕುಂತಲೆಯ ನಾಟ್ಯದಿ ಮೈ ಮರೆತಿರುವೆನು ಪ್ರೀತಿಯಿಂದ ಗೆಜ್ಜೆ ಎದೆ ಬಡಿತದೊಂದಿಗೆ ಪ್ರೇಮ ರಾಗವ ನುಡಿಸುತಿದೆನಿದ್ದೆ ಮರೆತು ನಿನ್ನನ್ನೆ ಕನವರಿಸುತಿರುವೆನು ಪ್ರೀತಿಯಿಂದ ‘ಮಲ್ಲಿ’ ನಿನ್ನ ಹೆಜ್ಜೆಯಲ್ಲಿ ಗೆಜ್ಜೆಯನು ಹುಡುಕುತಿರುವನುನಿನ್ನ ಪಾದಗಳನ್ನು ಅಲಂಕರಿಸುತಿರುವೆನು ಪ್ರೀತಿಯಿಂದ **********************************
ಬಾಲ್ಯ
ಕವಿತೆ ಬಾಲ್ಯ ತಿಲಕ ನಾಗರಾಜ್ ಹಿರಿಯಡಕ ಅರೆ! ಎಷ್ಟು ಚೆನ್ನಾಗಿತ್ತಲ್ಲ?ಅಲ್ಲಿ ಯಾವ ನೋವಿನಹಂಗಿರಲಿಲ್ಲ….ಚಿಂತೆಗಳ ಬರೆಯಿರಲಿಲ್ಲಮುದವೀಯುತ್ತಿದ್ದವಲ್ಲಕಾಡು ಮೇಡುಗಳ ಅಲೆದಾಟಗದ್ದೆ ಬಯಲುಗಳ ಓಡಾಟ…ಲಗೋರಿ ಕಣ್ಣಾಮುಚ್ಚಾಲೆಚಿನ್ನಿದಾಂಡು ಉಯ್ಯಾಲೆಕ್ರಿಕೇಟು ಕುಂಟೆಬಿಲ್ಲೆಆಟಗಳಾಡಿ ರಾತ್ರಿಯಲ್ಲಿಕಾಲಿಗೆ ಚುಚ್ಚಿದ ಮುಳ್ಳುಗಳನೋವಿನ ಜೊತೆಹಿರಿಯರ ಬೈಗುಳದ ಜೋಗುಳಒಂದಷ್ಟು ಹಾಯಾದ ನಿದ್ದೆಮರವೇರಿ ಕೊಯ್ದಮಾವಿನ ಕಾಯಿಗಳಬಚ್ಚಿಟ್ಟು ಹಣ್ಣಾಗಿಸಿ ತಿಂದಸ್ವಾದ ನಾಲಗೆಯಲ್ಲಿ ಸದಾ ಅಮರಹಚ್ಚಿಟ್ಟ ಚಿಮಣಿ ದೀಪದಆಚೆಗೆ ಬೀಡಿ ಎಲೆಗಳ ಸುರುಳಿಸುತ್ತುತ್ತಿದ್ದ ಅಮ್ಮನ ಬೆರಳುಗಳುಈಚೆಗೆ ಪುಸ್ತಕಗಳ ಮೇಲೆಕಣ್ಣಾಡಿಸುತ್ತಿದ್ದ ನಾವುಗಳುಒಮ್ಮೊಮ್ಮೆ ಬೇಸರೆನಿಸಿದಾಗಪಠ್ಯ ಪುಸ್ತಕಗಳ ನಡುವೆಇರಿಸಿ ಓದುತ್ತಿದ್ದ ಕತೆ ಪುಸ್ತಕಗಳಮುಖಾಂತರ ಕಲ್ಪನಾ ಲೋಕದಲ್ಲಿಒಂದು ಸಣ್ಣ ವಿಹಾರ..ಮರೆಯಲಾಗದ್ದು, ಮರಳಿ ಬಾರದ್ದುಎಷ್ಟು […]
ಪ್ರತಿಮೆಯೂ ಕನ್ನಡಿಯೂ..
ಸ್ವಗತ ಪ್ರತಿಮೆಯೂ ಕನ್ನಡಿಯೂ.. ಚಂದ್ರಪ್ರಭ.ಬಿ. ಪ್ರತಿಮೆಯೂ ಕನ್ನಡಿಯೂ “ತೋರಾ ಮನ ದರಪನ ಕೆಹಲಾಯೆಭಲೆ ಬುರೆ ಸಾರೆ ಕರಮೊಂ ಕೊ ದೇಖೆ ಔರ ದಿಖಾಯೆ..………….. ………… ……….. …………… ………… ಸುಖ ಕಿ ಕಲಿಯಾಂ ದುಃಖ ಕಿ ಕಾಟೇಂ ಮನ ಸಬ್ ಕಾ ಆಧಾರ / ಮನ ಸೆ ಕೋಯಿ ಬಾತ ಛುಪೆ ನಾ ಮನ ಕೆ ನೈನ ಹಜಾರ/ ಜಗ ಸೆ ಚಾಹೆ ಭಾಗ ಲೆ ಕೋಯಿ ಮನ ಸೆ ಭಾಗ ನ ಪಾಯೆ…..” “ಕಾಜಲ್” ಹಿಂದಿ […]