ಪ್ರಕೃತಿ

ಕವಿತೆ

ಪ್ರಕೃತಿ

When Amrita Devi and 362 Bishnois sacrificed their lives for the Khejri  tree | Sahapedia

ಭಾಗ್ಯ ಸಿ

ಮನುಜ ಜೀವನದ ಅವಿಭಾಜ್ಯ ಅಂಗ ಪ್ರಕೃತಿ
ಜತನದಲಿ ಕಾಪಾಡಿಕೊಳ್ಳುವುದಾಗಬೇಕು ನಮ್ಮ ಪ್ರವೃತ್ತಿ
ಗಾಳಿ,ಬೆಳಕು,ನೀರು ಎಲ್ಲಾ ಪ್ರಕೃತಿಯ ಒಡಲಲಿ ನಗುತಿರೆ
ಮನುಜನ ಜೀವನವು ವಜ್ರದಂತೆ ಹೊಳೆಯುತ್ತಿರೆ

ವಿಪರೀತ ಬಯಕೆಗೆ ಪರಿಸರ ಬಲಿ
ಪ್ರಾಣಿ ಪಕ್ಷಿಗಳ ಆಸರೆಗಿಟ್ಟ ಕೊಡಲಿ
ಸಣ್ಣ ಮಳೆಗೂ ಕುಸಿಯುತ್ತಿದೆ ಬೆಟ್ಟ ಗುಡ್ಡ
ಜಲಪ್ರಳಯ, ಚಂಡಮಾರುತ ಸೀಳಿದೆ ಅಡ್ಡಡ್ಡ

ಬಳಲಿಕೆ ನಿವಾರಣೆಗೆ ಬೇಕು ನೀರು
ಪಂಚಭೂತಗಳ ನಿರ್ವಹಣೆ ಹೊತ್ತವರಾರು
ಪ್ರಕೃತಿಯ ಒಡಲ ಸೀಳಿ ತಲೆಯೆತ್ತಿವೆ ಕಟ್ಟಡಗಳು
ಅವೈಜ್ಞಾನದ ಫಲವಾಗಿ ಉರುಳುತ್ತಿವೆ ತಲೆಗಳು

ಅಪ್ಪಿಕೋ ಚಳುವಳಿಯ ರೂವಾರಿ ತಾಯಿ
ಹದಿನೇಳನೆ ಶತಮಾನದ ಅಮೃತಾದೇವಿ ಬಿಷ್ಣೋಯಿ
ಅಧಿಕಾರವಲ್ಲ ಅಸ್ತಿತ್ವವಿದೆ ನಮಗೆ ಪ್ರಕೃತಿಯೊಂದಿಗೆ
ಸಂದೇಶ ಬಿಟ್ಟಿದ್ದಾರೆ ಪ್ರಾಣ ತ್ಯಾಗದೊಂದಿಗೆ

ಅರಿಯಬೇಕಿದೆ ಜೋಧಪುರದ ಹೆಣ್ಣು ಮಗಳ ಕಾಳಜಿಯನ್ನು
ವ್ಯರ್ಥವಾಗಲು ಬಿಡಬಾರದು ಬಿಷ್ಣೋಯಿ ಜನರ ತ್ಯಾಗವನ್ನು
ಓ ವಿಶ್ವ ಮಾನವರೆ ಸಿದ್ದರಾಗಿ ಪೋಷಿಸಲು ನೀವಿನ್ನು
ಸೃಷ್ಠಿಯ ವಿಶೇಷವಾದ ಚರಾಚರ ಚೈತನ್ಯವನ್ನು

**********************************************************

4 thoughts on “ಪ್ರಕೃತಿ

  1. ಕವಿತೆಯ ಸಾಲುಗಳು ಪ್ರಕೃತಿಯ ಮಹತ್ವವನ್ನು ಹೇಳುತ್ತಿದೆ. ನಾವು ಪ್ರಕೃತಿಯ ಉಳಿವಿಗಾಗಿ ಹೆಚ್ಚಿನ ಗಮನ ನೀಡುವುದು ಅನಿವಾರ್ಯವಾಗಿದೆ.

  2. ಪ್ರಕೃತಿಗೆ ಮನುಷ್ಯನ ಅವಶ್ಯಕತೆ ಇಲ್ಲ, ಮನುಷ್ಯನಿಗೆ ಪ್ರಕೃತಿಯು ಅವಶ್ಯಕ. ಪ್ರಕೃತಿ ಕಾಳಜಿಯ ಕವಿತೆ ಚೆನ್ನಾಗಿ ಮೂಡಿಬಂದಿದೆ.

Leave a Reply

Back To Top