ನಕ್ಷತ್ರ ನೆಲಹಾಸು

ಕವಿತೆ

ನಕ್ಷತ್ರ ನೆಲಹಾಸು

Spring flowers of blue crocuses in drops of water on the background of tracks of rain drops.  stock photography

SWABHAVA

ಸ್ವಭಾವ ಕೋಳಗುಂದ

ನಕ್ಷತ್ರಗಳ ಹಾದಿಗುಂಟ ಹಾಸಿ
ಸಿಂಗರಿಸಿ ನಿನ್ನ ಕೊಳಲ ಪಾದ
ನೆನಪಿನೆದೆಯ ತುಳಿಯಲಾಶಿಸಿದೆ

ಅರ್ಧ ಕತ್ತಲಲಿ ಎದ್ದು ಹೊರಟು
ನಿನ್ನ ತಬ್ಬಲಿ ಮಾಡಿ
ನಾ ಬುದ್ಧನಾಗಲಾರೆ

ಈ ಹಾದಿಗಳೆಲ್ಲಾ
ಎಷ್ಟೊಂದು ಆಮಿಷ ಒಡ್ಡುತ್ತಿವೆ
ಹೃದಯ ಬಂಧಿಯ ಮುಕ್ತಿಗಾಗಿ

ನನ್ನೊಳಗಿನ ಸೀತಾ
ಮೀನ ಮೊಟ್ಟೆಯ ಕಾವಲಲಿ
ಸಾವಿರ ಸಂತತಿಯ ಬೆಳಕು

ನನ್ನ ಅಸ್ತಿತ್ವದ ಬಿಂದುವಿಗೆ
ನಿನ್ನೊಲವಿನ ಮೊಲೆಹಾಲ ಸ್ಪುರಣ
ಭರವಸೆಯ ಮುತ್ತ ಮಣಿಹಾರ

ಹಿಮ ಮಣಿಯ ಮರಳಿನ
ಮರೀಚಿಕೆಯ ಸಾಗರ
ಪಾರಿಜಾತದ ಪರಿಮಳದ ಸಂದೇಶ

ಹನಿ ಬೀಜಕ್ಕೆ ಸಾವಿರ ಸಂತಾನ
ನೆಲದ ನಾಲಗೆಯಲಿ
ಸಾವಿನ ಸಂಚಾರಿ

ಹಸಿ ಮಣ್ಣ ಮೈಯೊಳಗೆ
ಕನಸ ಕಲ್ಪನೆಯ ಕೂಸು
ಬಿತ್ತಿ ನಡೆದು ಬಿಡು ನಕ್ಷತ್ರದ ನೆಲಹಾಸು

*********************

Leave a Reply

Back To Top