ಕವಿತೆ
ಬಾಲ್ಯ
ತಿಲಕ ನಾಗರಾಜ್ ಹಿರಿಯಡಕ


ಅರೆ! ಎಷ್ಟು ಚೆನ್ನಾಗಿತ್ತಲ್ಲ?
ಅಲ್ಲಿ ಯಾವ ನೋವಿನ
ಹಂಗಿರಲಿಲ್ಲ….
ಚಿಂತೆಗಳ ಬರೆಯಿರಲಿಲ್ಲ
ಮುದವೀಯುತ್ತಿದ್ದವಲ್ಲ
ಕಾಡು ಮೇಡುಗಳ ಅಲೆದಾಟ
ಗದ್ದೆ ಬಯಲುಗಳ ಓಡಾಟ…
ಲಗೋರಿ ಕಣ್ಣಾಮುಚ್ಚಾಲೆ
ಚಿನ್ನಿದಾಂಡು ಉಯ್ಯಾಲೆ
ಕ್ರಿಕೇಟು ಕುಂಟೆಬಿಲ್ಲೆ
ಆಟಗಳಾಡಿ ರಾತ್ರಿಯಲ್ಲಿ
ಕಾಲಿಗೆ ಚುಚ್ಚಿದ ಮುಳ್ಳುಗಳ
ನೋವಿನ ಜೊತೆ
ಹಿರಿಯರ ಬೈಗುಳದ ಜೋಗುಳ
ಒಂದಷ್ಟು ಹಾಯಾದ ನಿದ್ದೆ
ಮರವೇರಿ ಕೊಯ್ದ
ಮಾವಿನ ಕಾಯಿಗಳ
ಬಚ್ಚಿಟ್ಟು ಹಣ್ಣಾಗಿಸಿ ತಿಂದ
ಸ್ವಾದ ನಾಲಗೆಯಲ್ಲಿ ಸದಾ ಅಮರ
ಹಚ್ಚಿಟ್ಟ ಚಿಮಣಿ ದೀಪದ
ಆಚೆಗೆ ಬೀಡಿ ಎಲೆಗಳ ಸುರುಳಿ
ಸುತ್ತುತ್ತಿದ್ದ ಅಮ್ಮನ ಬೆರಳುಗಳು
ಈಚೆಗೆ ಪುಸ್ತಕಗಳ ಮೇಲೆ
ಕಣ್ಣಾಡಿಸುತ್ತಿದ್ದ ನಾವುಗಳು
ಒಮ್ಮೊಮ್ಮೆ ಬೇಸರೆನಿಸಿದಾಗ
ಪಠ್ಯ ಪುಸ್ತಕಗಳ ನಡುವೆ
ಇರಿಸಿ ಓದುತ್ತಿದ್ದ ಕತೆ ಪುಸ್ತಕಗಳ
ಮುಖಾಂತರ ಕಲ್ಪನಾ ಲೋಕದಲ್ಲಿ
ಒಂದು ಸಣ್ಣ ವಿಹಾರ..
ಮರೆಯಲಾಗದ್ದು, ಮರಳಿ ಬಾರದ್ದು
ಎಷ್ಟು ಚೆನ್ನಾಗಿತ್ತಲ್ಲ ಬಾಲ್ಯ?
***********************
Exactly , Very very nice
Thank you
Very nice super
Really , eega nenapugalaste, aadaru adannu nenedu londaga ondastu kushi siguthe
Baalyadha nenapaitu. Awesome Tilaka
Thank you
Super mam