ಗಝಲ್
ಗಝಲ್ ತೇಜಾವತಿ ಹೆಚ್.ಡಿ. ಮತ್ಲಾಸಾನಿ /ಹುಸ್ನೆಮತ್ಲಾ ಗಜಲ್ ಕಂಡ ಕನಸೆಲ್ಲವೂ ಗುರಿಯ ಮುಟ್ಟವು ಕೇಳುನಡೆದ ಘಟನೆಯೆಲ್ಲವೂ ನನಸಾಗವು ಕೇಳು ವನದ ಸುಮವೆಲ್ಲವೂ ಗುಡಿಯ ಸೇರವು ಕೇಳುಬೀರಿದ ಕಂಪೆಲ್ಲವೂ ಸುಗಂಧ ದ್ರವ್ಯವಾಗವು ಕೇಳು ಅವನಿಯೆದೆಯ ಗೂಡ ಸ್ಪರ್ಶಿಸುವುದು ವರ್ಷಧಾರೆಬಿದ್ದ ಹನಿಗಳೆಲ್ಲವೂ ಸ್ವಾತಿಯ ಮುತ್ತಾಗವು ಕೇಳು ಬಯಲ ಭೂಮಿಯನ್ನೆಲ್ಲ ಹಸನು ಮಾಡಿ ಉಳಬಹುದುಬಿತ್ತಿದ ಬೆಳೆಗಳೆಲ್ಲವೂ ಫಲವ ನೀಡವು ಕೇಳು ಭವದ ಸಾಗರವು ವಿಸ್ತಾರವಾಗಿರುವುದು ಈ ಜಗದಲ್ಲಿಹೊರಟ ನಾವೆಗಳೆಲ್ಲವೂ ದಡವ ಸೇರವು ಕೇಳು ಸಪ್ತ ವರ್ಣಗಳ ಮೂಲವು ಶ್ವೇತವೇ ಆಗಿರುವುದುನೋಡಿದ ಬಿಳುಪೆಲ್ಲವೂ […]
ಅಂತರಂಗದ ಆಲಾಪ ಕವಿತೆಗಳು
ಪುಸ್ತಕ ಪರಿಚಯ ಅಂತರಂಗದ ಆಲಾಪ ಕವಿತೆಗಳು ಅಂತರಂಗದ ಆಲಾಪ ಕವಿತೆಗಳು ಸುಜಾತಾ ಎನ್ ” ಬೆಚ್ಚನೆಯ ಕೌದಿಯ ತುಂಡುಗಳು” ಸುಜಾತಾ ಎನ್ ಮೈಸೂರಿನವರು. ಭಾರತೀಯ ಜೀವವಿಮಾ ನಿಗಮದ ಉದ್ಯೋಗಿ. ಕಾಲೇಜು ದಿನಗಳಲಿ ಬರವಣಿಗೆ ಇದ್ದರೂ ಎಲ್ಲವನೂ ಬಿಟ್ಟು ನೌಕರಿ, ಸಂಸಾರದಲ್ಲಿ ನೆಲೆನಿಂತು ವಾತಾವರಣಕ್ಕೆ ತಕ್ಕಂತೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಮತ್ತೆ ಬರವಣಿಗೆಯಲಿ ನಿರತರಾಗಿರುವರು. ಕಥೆ,ಕವಿತೆ, ವಿಮರ್ಶೆ ,ಲೇಖನಹೀಗೆ ಎಲ್ಲ ಪುಟಗಳನ್ನೂ ತಿರುವಿ ನೋಡಿದವರೇ. ಫೇಸ್ಬುಕ್ , ವಾಟ್ಸಪ್ ಗುಂಪುಗಳ ಮೂಲಕ ತಮ್ಮದೇ ಆದ ವಿಶಿಷ್ಟ […]
ಅವರೆಲ್ಲ ಎಲ್ಲಿ ಹೋದರು?
ಕವಿತೆ ಅವರೆಲ್ಲ ಎಲ್ಲಿ ಹೋದರು? ಜಯಶ್ರೀ ಭ.ಭಂಡಾರಿ. ಹದಿಹರೆಯದ ದಿನಗಳಲ್ಲಿನಮಲೆನಾಡಿನ ಮೂಲೆಯಅಜ್ಜಿಯ ನೆನಪುಸೌದೆ ಒಲೆ ಮೇಲೆಕಾದ ಹಂಡೆ ನೀರುತಲೆಗೆ ಮೈಗೆಎಣ್ಣೆ ಪೂಸಿಆರೈಕೆ ಬೆರೆತ ಅಭ್ಯಂಜನರುಚಿ ರುಚಿ ಊಟಬೆಳಕಿಲ್ಲದ ಕೋಣೆಯಲ್ಲಿಕುಲಾಯಿ ಕಟ್ಟಿಕೊಂಡುಹಾಯಾಗಿ ನಿದ್ರಿಸುವ ಸುಖಪ್ರಕೃತಿ ಹಸಿರು ಸುವ್ವಲಾಲಿಹಾಡಿ ಮಲಗಿಸುತ್ತಿತ್ತುಬಸಿರು ಬಾಣಂತನದಲ್ಲಿ ತಿಂಗಳುಗಟ್ಟಲೆಉಪಚರಿಸುತ್ತಿದ್ದ ತಾಯಿಅಕ್ಕ ಭಾವನ ಸದಾ ಎದಿರುನೋಡುತ್ತಿದ್ದ ಒಲವಿನ ಸಹೋದರಿಯರುಮದುವೆಯಾಗಿ ತಂಗಿ ತವರನಿಂದದೂರಾಗ್ತಾಳೆ ಅಂತ ಕೊರಗುತ್ತಿದ್ದ ಅಣ್ಣಇವರೆಲ್ಲ ಈಗೆಲ್ಲಿ ಹೋದರು? ತಂಗೀನ ಕರೆಯದೆ ಜಾತ್ರೆ ಮಾಡುವ ಅಣ್ಣಅಕ್ಕನ ಕರಿದರೆ ಕಿರಿಕಿರಿ ಎನ್ನುವ ತಮ್ಮಸತಿಮಣಿಯೇ ರ‍್ವಸ್ವ ಎನ್ನುವರಲ್ಲವೃದ್ಧಾಪ್ಯದಲ್ಲಿ ತಂದೆ ತಾಯಿಗಳು […]
ಬುಡಬುಡಿಕೆ’ ಮಕ್ಕಳ ಕವನ ಸಂಕಲನ
ಪುಸ್ತಕ ಪರಿಚಯ ಬುಡಬುಡಿಕೆ’ ಮಕ್ಕಳ ಕವನ ಸಂಕಲನ `ಬುಡಬುಡಿಕೆ’ ಮಕ್ಕಳ ಕವನ ಸಂಕಲನ. ಈ ಕೃತಿಯ ಲೇಖಕರು ಅಕ್ಕಿಮಂಗಲ ಮಂಜುನಾಥ. ನುಡಿ ಪುಸ್ತಕ ಪ್ರಕಾಶನ ಶ್ರೀ ಅಕ್ಕಿಮಂಗಲ ಮಂಜುನಾಥ ಅವರು ಕೃಷಿಕರಾಗಿದ್ದು ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನ ಅಕ್ಕಿಮಂಗಲ ಎನ್ನುವ ಚಿಕ್ಕ ಹಳ್ಳಿಯವರು. ಕೃಷಿ ಸೇವೆಯನ್ನು ಮಾಡುತ್ತಲೇ ಸಾಹಿತ್ಯದ ಒಲವನ್ನು ಬಿಡದೆ ಹಲವಾರು ಕವನ ಸಂಕಲನಗಳನ್ನು ಹೊರ ತಂದಿದ್ದಾರೆ. ರವಿಕಾಣದ್ದನ್ನು ಕವಿಕಂಡ ಎಂಬAತೆ ಲೇಖಕರು ತಮ್ಮ ವೃತ್ತಿವಲಯದಲ್ಲಿ ಸುತ್ತಮುತ್ತಲೂ ಕಂಡ ಪರಿಸರದಲ್ಲಿ ಸಿಕ್ಕ ಕಾವ್ಯವಸ್ತುಗಳನ್ನು ಕಾಪಿಟ್ಟುಕೊಂಡು ಅವುಗಳಿಗೆ ಅಕ್ಷರ […]
ಅಂಕಣ ಬರಹ ಕಳೆದುಕೊಂಡದ್ದು ಸಮಯವಾದರೆ ಹುಡುಕಲೂ ಆಗದು (ಟೈಂ ಬ್ಯಾಂಕ್ ಅಕೌಂಟ್ ಮೆಂಟೇನನ್ಸ್- ಹೀಗೆ ಮಾಡಿ ನೋಡಿ ) ಟೈಂ ನೋಡೋಕೂ ಟೈಂ ಇಲ್ಲ. ಎಲ್ಲಾ ಟೈಮಿನೊಳಗೂ ಮೈ ತುಂಬ ಕೆಲಸ. ಎಲ್ಲಿ ಕುಂತರೂ ಕೆಲಸ ಕೈ ಮಾಡಿ ಕರಿತಾವ..ಮೈ ಕೆರೆದುಕೊಳ್ಳಲೂ ಪುರುಸೊತ್ತಿಲ್ಲದಂಗ ಕೆಲಸ ಮಾಡಿದರೂ ಕೆಲಸ ಮುಗಿತಿಲ್ಲ. ಆದರೂ ಮಾಡಿದ ಕೆಲಸ ಒಂದೂ ನೆಟ್ಟಗಾಗ್ತಿಲ್ಲ ಎನ್ನುವದು ಅನೇಕರ ಗೊಣಗಾಟ. ಇಂಥ ಟೈಮಿನೊಳಗ ಕನಸು ಬೇರೆ ಕಾಡ್ತಾವ. ಕನಸು ಕಾಣಬೇಕೋ ನೆಟ್ಟಗಾಗುವಂಗ ಕೆಲಸ ಮಾಡೂ […]
ಅಂಕಣ ಬರಹ ಸಾಹಿತ್ಯಿಕ ರಾಜಕಾರಣ ಸಮಾಜಕ್ಕೆ ಅತೀ ಹೆಚ್ಚು ಅಪಾಯಕಾರಿ ಕೆ.ಬಿ.ವೀರಲಿಂಗನಗೌಡ್ರ ಪರಿಚಯ ಬಾಗಲಕೋಟ ಜಿಲ್ಲೆ, ಬಾದಾಮಿ ತಾಲೂಕಿನ ನಂದಿಕೇಶ್ವರ ಸ್ವಗ್ರಾಮ. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ(ಶಿರ್ಸಿ) ಪಟ್ಟಣದಲ್ಲಿ ಚಿತ್ರಕಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವೆ. ಪ್ರಕಟಿತ ಕೃತಿಗಳು ‘ಅರಿವಿನ ಹರಿಗೋಲು’ (ಕವನ ಸಂಕಲನ), ‘ಅವಳು ಮಳೆಯಾಗಲಿ’ (ಕಥಾ ಸಂಕಲನ), ಘಟಸರ್ಪ (ಸಾಮಾಜಿಕ ನಾಟಕ), ‘ಸಾವಿನಧ್ಯಾನ’ (ಲೇಖನಗಳ ಸಂಕಲನ), ‘ಮೌನ’ (ಸಂಪಾದಿತ) ಸಂದರ್ಶನ ಪ್ರಶ್ನೆ :ನೀವು ಚಿತ್ರ ಮತ್ತು ಕವಿತೆಗಳನ್ನು ಏಕೆ ಬರೆಯುತ್ತಿರಿ? ಉತ್ತರ :ನನ್ನೊಳಗೆ ನುಸುಳುವ […]
ಮಕ್ಕಳಿಗೂ ಒಂದು ವ್ಯಕ್ತಿತ್ವವಿದೆ
ಲೇಖನ ಮಕ್ಕಳಿಗೂ ಒಂದು ವ್ಯಕ್ತಿತ್ವವಿದೆ ಡಾ. ಸಹನಾ ಪ್ರಸಾದ್ ಇಂದಿನ ಜೀವನ ಬಹಳ ಸ್ಪರ್ಧಾತ್ಮಕವಾದುದು.ನಮ್ಮ ಯುವ ಜನಾಂಗವನ್ನು ನೋಡಿದಾಗ ಕೆಲವೊಮ್ಮೆ “ ಅಯ್ಯೋ ಪಾಪ” ಎನ್ನಿಸುವುದುಂಟು.ಎಷ್ಟು ಓದಿದರೂ ಸಾಲದು, ಎಷ್ಟು ಕಷ್ಟಪಟ್ಟರೂ, ಎಷ್ಟು ಅಂಕೆಗಳು ತೆಗೆದರೂ ಸಾಕಾಗುವುದಿಲ್ಲ. ಯಾವಾಗಲೂ ಒತ್ತಡದ ಬದುಕು. ಚಿಕ್ಕ ತರಗತಿಗಳಿಂದಲೇ ಶುರು.ತರಹ ತರಹದ ಕ್ಲಾಸುಗಳು, ಮನೆ ಪಾಠಗಳು, ಒಂದು ತರಗತಿಯಿಂದ ಇನ್ನೊಂದಕ್ಕೆ ಯಾವಾಗಲೂ ಓಟ. ನರ್ಸರಿಗೆ ಸೇರುವ ಮೊದಲೇ “ಕೋಚಿಂಗ್”. ವಿಧ ವಿಧವಾದ ಬಣ್ಣಗಳು,ಆಕೃತಿಗಳು, ಪದ್ಯಗಳನ್ನು ಕಂಠ ಪಾಠ ಮಾಡಬೇಕು. ತಾಯಿ ಪ್ರೀತಿಯಿಂದ […]
ಒಂದು ಸುಖದ ಹಾಡು.
ಕವಿತೆ ಒಂದು ಸುಖದ ಹಾಡು. ನಂದಿನಿ ಹೆದ್ದುರ್ಗ ಪ್ರತಿ ಭೇಟಿಗೂ ಅವನುಳಿಸಿಹೋಗುತ್ತಿದ್ದ ಒಂದಾದರೂಕೊರತೆಯ ಕಾವಿನಲಿಬೇಯುತ್ತಾ ಬದುಕಿಕೊಳುವಸುಖದಅಭ್ಯಾಸವಾದವಳು ನಾನು. ಮರೆತೇ ಬಿಟ್ಟ ಈ ಬಾರಿಯಾಕೋ.ತೃಪ್ತ ಎದೆಯಲ್ಲಿ ಚಿಮ್ಮುವವೆತಪ್ತ ಹಾಡುಗಳು.?ಬೇಸರಕೆ ಆಕಳಿಕೆ. ಕತ್ತಿನೆತ್ತರದಲಿ ಅವನಿತ್ತಮುತ್ತುಗಳಅದೋ..ಆ ಮರದಡಿ ಹರಡಿಬಿಟ್ಟೆ..ಅವನ ಹಂಗಿರದೆಹಲವು ನಿಮಿಷಹಾಯೆನಿಸಿತು. ಹೊರಗೆ ಸಣ್ಣಗೆ ಸೋನೆ.ಅವನಿರದ ಎದೆಯೊಳಗೆಮತ್ತವನದೇ ಕಾಮನೆ. ಮೊಳಕೆಯೊಡೆಯುತಿದೆಬಿಸುಟ ಮುತ್ತೊಂದು.ಎರಡೆಲೆಯೆದ್ದು ಕಣ್ಣ ಪಿಳುಕಿಸಿದಒಡನೆಚಿಗುರು ಚಿವುಟಿ ಬಿಸುಟಲುಠರಾವು ಮಾಡಿರುವೆ. ಪಾತಾಳಕಿಳಿಯುತಿದೆ ಬೇರು.ಅವರಿವರಿಗೆ ಅಲ್ಲೊಂದು ಸಸಿಇರುವ ಕುರುಹೂ ಇರದೆ.ಎತ್ತರಕ್ಕಿಂತಲೂ ಆಳದಹುಚ್ಚಿನವಳು ನಾನು. ಅವನ ಸಣ್ಣಗೆ ನೋಯಿಸುತ್ತಒಳಗೊಳಗೆ ನಗುವಾಗೆಲ್ಲಾಕಿರುಬೆರಳನೆರಳೊಂದು ನವುರಾಗಿ ಕೊರಳತಾಕಿ ಹೋಗುತ್ತದೆ.ನಾನೀಗ ಸುಖವಾಗಿರುವೆ..****************************
ಮುಂಜಾವು
ಹಬೆಯಾಡುವ ಕಾಫಿ
ಬಿಸಿಬಿಸಿ ಸುದ್ಧಿ ಪತ್ರಿಕೆ
ಹಣೆಯಿಂದ ತೊಟ್ಟಿಕ್ಕಿದ ಬೆವರ ಹನಿ
ಹೃದಯಂಗಮ
ಕವಿತೆ ಹೃದಯಂಗಮ ಸ್ಮಿತಾ ಭಟ್ ನೀನಿರುವುದೇ ಬಡಿದುಕೊಳ್ಳಲುಅನ್ನುವಾಗಲೆಲ್ಲಒಮ್ಮೆ ಸ್ತಬ್ಧವಾಗಿಬಿಡುಎನ್ನುವ ಪಿಸುಮಾತೊಂದ ಹೇಳಬೇಕೆನಿಸುತ್ತದೆ! ‘ಹೃದಯದ ಮಾತು ಕೇಳಬೇಡಬುದ್ಧಿಯ ಮಾತು ಕೇಳು’ಎನ್ನುವ ಫಿಲಾಸಫಿಗಳಎದೆಗಾತುಕೊಳ್ಳುವ ಕಿವಿಗಳಿಗೆ ಇಯರ್ ಪೋನ್ ಜೋತು ಬಿದ್ದುಲಬ್ ಡಬ್ಒಂಟಿಬಡಿತ! ಅಡಿಯಿಂದ ಮುಡಿಯವರೆಗೂಪಾರುಪತ್ಯದ ಅಧಿಕಾರ ಹೊತ್ತರೂನಿರಂತರ ಚಲನೆಯಲ್ಲಿ ನಿಲ್ಲುವ ಅಧಿಕಾರವಿಲ್ಲ! ಚೂರೇ ಚೂರು ದಣಿವಿಗೆ ಕೊಸರಿಕೊಂಡರೂಭುಗಿಲೇಳುವ ಭಯದ ಹನಿ. ಇರ್ರಿ, ಹೃದಯ ಬಡಿತ ಶುರುವಾಗಲಿ ಈಗೇನೂ ಹೇಳುವದಿಲ್ಲ –ಎದೆಯ ಮೇಲೆ ಕೈ ಇಟ್ಟು ಸ್ಕ್ಯಾನಿಂಗ್ ಕೋಣೆಯಿಂದ ಹೊರ ಬರುವ ಜೀವಮನದೊಳಗಿನ ಪ್ರತೀ ಭಾವಕ್ಕೂ ಸ್ಪಂದಿಸಿ –ಲಬ್ ಡಬ್ ಮತ್ತಷ್ಟು […]