ಅವರೆಲ್ಲ ಎಲ್ಲಿ ಹೋದರು?

ಕವಿತೆ

ಅವರೆಲ್ಲ ಎಲ್ಲಿ ಹೋದರು?

ಜಯಶ್ರೀ ಭ.ಭಂಡಾರಿ.

ಹದಿಹರೆಯದ ದಿನಗಳಲ್ಲಿನ
ಮಲೆನಾಡಿನ ಮೂಲೆಯ
ಅಜ್ಜಿಯ ನೆನಪು
ಸೌದೆ ಒಲೆ ಮೇಲೆ
ಕಾದ ಹಂಡೆ ನೀರು
ತಲೆಗೆ ಮೈಗೆ
ಎಣ್ಣೆ ಪೂಸಿ
ಆರೈಕೆ ಬೆರೆತ ಅಭ್ಯಂಜನ
ರುಚಿ ರುಚಿ ಊಟ
ಬೆಳಕಿಲ್ಲದ ಕೋಣೆಯಲ್ಲಿ
ಕುಲಾಯಿ ಕಟ್ಟಿಕೊಂಡು
ಹಾಯಾಗಿ ನಿದ್ರಿಸುವ ಸುಖ
ಪ್ರಕೃತಿ ಹಸಿರು ಸುವ್ವಲಾಲಿ
ಹಾಡಿ ಮಲಗಿಸುತ್ತಿತ್ತು
ಬಸಿರು ಬಾಣಂತನದಲ್ಲಿ ತಿಂಗಳುಗಟ್ಟಲೆ
ಉಪಚರಿಸುತ್ತಿದ್ದ ತಾಯಿ
ಅಕ್ಕ ಭಾವನ ಸದಾ ಎದಿರು
ನೋಡುತ್ತಿದ್ದ ಒಲವಿನ ಸಹೋದರಿಯರು
ಮದುವೆಯಾಗಿ ತಂಗಿ ತವರನಿಂದ
ದೂರಾಗ್ತಾಳೆ ಅಂತ ಕೊರಗುತ್ತಿದ್ದ ಅಣ್ಣ
ಇವರೆಲ್ಲ ಈಗೆಲ್ಲಿ ಹೋದರು?

ತಂಗೀನ ಕರೆಯದೆ ಜಾತ್ರೆ ಮಾಡುವ ಅಣ್ಣ
ಅಕ್ಕನ ಕರಿದರೆ ಕಿರಿಕಿರಿ ಎನ್ನುವ ತಮ್ಮ
ಸತಿಮಣಿಯೇ ರ‍್ವಸ್ವ ಎನ್ನುವರಲ್ಲ
ವೃದ್ಧಾಪ್ಯದಲ್ಲಿ ತಂದೆ ತಾಯಿಗಳು ಭಾರ
ಅವರು ಇಂದು ಮನೆಯಿಂದ ಬಹುದೂರ
ಕೂಡಿ ಬಾಳಿದರೆ ಸ್ರ‍್ಗ ಸುಖ ಮರೆತರಲ್ಲ
ಅವಿಭಕ್ತ ಕುಟುಂಬಗಳೆಲ್ಲ ಚೆಲ್ಲಾಪಿಲ್ಲಿ
ಸ್ವರ‍್ಥವೇ ತುಂಬಿಹುದು ಜಗದಲಿ


‌‌‌‌‌‌‌.
‌‌‌‌ಅವರು ಇಂದು…

ಆಧುನಿಕ ತಲೆಮಾರಿನ ಸೋಗಿನಲ್ಲಿ
ಬದಲಾಗಿದ್ದಾರೆಯೇ?
ಎಲ್ಲ ಸಂಬಂಧಗಳು ಈಗ
“ಮೇಲ್ಪದರ ಸಂಬಂಧ”
ಎನಿಸುತ್ತಿಲ್ಲವೆ?…

*******************************

3 thoughts on “ಅವರೆಲ್ಲ ಎಲ್ಲಿ ಹೋದರು?

  1. ಆ ಸತಿ ಕೂಡ ಮಹಿಳೆಯೇ. ಮಹಿಳೆಯ ವರ್ತೆನೆ ಬಸಲಾಗಿದೆ. ಹೀಗಾಗಿ ಕುಟುಂಬದ ವಾರ್ತೆನೆ, ಬೇಡಿಕೆಗಳು ಬದಲಾಗಿವೆ

  2. ಸ್ವಾರ್ಥ ಬದುಕಿನ ಆಸೆಗೆ ಕೊನೆಯೇ ಇಲ್ಲ
    ನಾನು ಮಾತ್ರ ಚೆನ್ನಾಗಿ ಇರಬೇಕು ಅನ್ನೋ ಕಲಿಯುಗದ ಬುದ್ಧಿಯೇ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣ

    ಸೊಗಸಾಗಿ ಮೂಡಿಬಂದಿದೆ ತಮ್ಮ ಬರಹ

Leave a Reply

Back To Top