ಕವಿತೆ
ಮುಂಜಾವು
ಮಾಲತಿ ಶಶಿಧರ್
ತೊಳೆದ ಆಕಾಶ
ತಪ್ಪಿಸಿಕೊಂಡ ಚುಕ್ಕಿ
ಅಪೂರ್ಣ ರಂಗೋಲಿ
ಹಕ್ಕಿಯ ಹಾಡು
ಮೈ ಮುರಿಯುವ ಸೂರ್ಯ
ನಾಚಿ ಕರಗಿತು ಇಬ್ಬನಿ
ಹಬೆಯಾಡುವ ಕಾಫಿ
ಬಿಸಿಬಿಸಿ ಸುದ್ಧಿ ಪತ್ರಿಕೆ
ಹಣೆಯಿಂದ ತೊಟ್ಟಿಕ್ಕಿದ ಬೆವರ ಹನಿ
ಬಿರಿದ ಗುಲಾಬಿ ಹೂವು
ಅರಳಿ ನಿಂತ ಚಿಟ್ಟೆ
ರೆಕ್ಕೆ ಕಟ್ಟಿ ಹಾರಿದ ಮನಸು
ಹೊರಗೆ ಮತ್ತೆ ಮಳೆ
ಕಣ್ಣ ಕೊನೆಯ ಕಂಬನಿ
ಸದಾ ಕಾಡುವ ನೆನಪು
**************************