ಬದಲಾಗುವ ಸತ್ಯ

ಬದಲಾಗುವ ಸತ್ಯ

ಕವಿತೆ ಬದಲಾಗುವ ಸತ್ಯ ನೂತನ ದೋಶೆಟ್ಟಿ ನಿನ್ನೆಗಳ ಬಾನಲ್ಲಿ ನಿನ್ನ ನಗುವಿನ ನಕ್ಷತ್ರ‘ ಶೂಟಿಂಗ್ ಸ್ಟಾರ್ ‘ ಎಂದ ಗೆಳತಿಯ ಪುಳಕಮರೆತ ಜಿಜ್ಞಾಸೆಎದುರಲ್ಲಿ ನಿನ್ನ ಗುರಿಗಳು ಅವಳ ಪಿಟಿಪಿಟಿಸುವ ಬಾಯಲ್ಲಿಅವಸರದ ಬೇಡಿಕೆಗಳುನನ್ನ ಮುಚ್ಚಿದ ಕಂಗಳಲ್ಲಿನಿನ್ನ ಕನಸುಗಳ ಹಾರೈಕೆನಿನ್ನೆಯವರೆಗೆ ಇದೆಲ್ಲ ಸತ್ಯ ಇಂದುನೀನು, ನಕ್ಷತ್ರ , ಕನಸು ನನ್ನ ಮುಖದಲೊಂದು ಮುಗುಳ್ನಗೆತುಟಿಯಂಚಿನ ಅಚ್ಚರಿಗಲ್ಲದಲ್ಲೂರಿ ಕುಳಿತ ವಾಸ್ತವಶೂಟಿಂಗ್ ಸ್ಟಾರಿನತ್ತ ಹರಿದು ನೋಟನಾಳಿನ ಸತ್ಯಕ್ಕೆ ಸಿದ್ಧವಾಗಿತ್ತು. **********************

ಮಾತಿನಲ್ಲಿಯೇ ಇದೆ ಎಲ್ಲವೂ…

ಲೇಖನ ಮಾತಿನಲ್ಲಿಯೇ ಇದೆ ಎಲ್ಲವೂ… ಪೂಜಾ ನಾಯಕ್ ನುಡಿದರೆ ಮುತ್ತಿನ ಹಾರದಂತಿರಬೇಕು| ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು| ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು| ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು| ನುಡಿಯೊಳಗಾಗಿ ನಡೆಯದಿದ್ದರೆ, ಕೂಡಲಸಂಗಮದೇವನೆಂತೊಲಿವನಯ್ಯ ? ಇತ್ತೀಚಿಗೆ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಒಮ್ಮೆಲೇ ಹಿಂದೆ ಪ್ರೌಢಶಾಲೆಯಲ್ಲಿ ಓದಿದ ಬಸವಣ್ಣನವರ ವಚನದ ಈ ಸಾಲುಗಳು ಥಟ್ಟನೆ ನೆನಪಾಯಿತು. ನೆನಪಾಗುವುದರ ಹಿಂದೆ ಒಂದು ಘಟನೆಯಿದೆ.              ಅಂದು ಐದರ ಇಳಿ ಸಂಜೆಯ ಹೊತ್ತು. ನಾನು ಮತ್ತು ನನ್ನ ಗೆಳತಿ, ರಸಾಯನಶಾಸ್ತ್ರ ವಿಷಯದ ಪ್ರಾಯೋಗಿಕ ತರಗತಿಗಳನೆಲ್ಲ […]

ಅದಿತಿ

ಕವಿತೆ ಅದಿತಿ ಮುರಳಿ ಹತ್ವಾರ್  ತಣ್ಣಗೆ ಕುಳಿತಿತ್ತು ಆ ನಾಲ್ಕು ಕಾಲಿನ ಕುರ್ಚಿ:ಏಸಿ ರೂಮಿನೊಳಗೆ, ಮಾರ್ಬಲ್ಲು ಹಾಸಿನ ಮೇಲೆ.ಒಂದಿಷ್ಟೂ ಬಿಸಿಯಾಗಲಿಲ್ಲ ಅದುಅದರ ಮೇಲೇ ಕುಳಿತು ಆ ಒಂದೂವರೆ ಕಾಲಿನ, ಒಂಟಿ ಕಣ್ಣಿನಇರಾಕಿನವ ಕಣ್ಣು ಕಿತ್ತು ಬರುವ ಹಾಗೆ ಅವನ ಕಥೆ ಹೇಳಿಕೊಂಡಾಗ ಹೇಗೆ ಬಿಸಿಯಾದೀತು? ನಾಜೂಕಿನಿಂದಧೂಳೊರೆಸಿಕೊಳ್ಳುವದು ಅಭ್ಯಾಸವಾದಮೇಲೆ.ಬೇರು ಕಿತ್ತು, ಕೈ-ಕಾಲು ಕೊಯ್ದು,ನೀರು, ಎಣ್ಣೆಯಲದ್ದಿದ ತುಂಡುಗಳ ಅಂಟಿಸಿ,ಮೇಲೊಂದು ಹತ್ತಿಯ ಮೆತ್ತೆಯಿಟ್ಟು ಕಟ್ಟಿದ ಕುರ್ಚಿಯಲ್ಲವೇ ಅದು. ಆ ಆಫ್ರಿಕಾದ ಅಮ್ಮ, ಅಲ್ಲ, ಎಲ್ಲರ ಅಮ್ಮಅವಳ ಕಥೆ ಹೇಳಿಕೊಂಡಾಗಲೂ ಅಷ್ಟೇ.ಆಕೆ “ಅಯ್ಯೋ, […]

ದ್ವಿಪದಿಗಳು

ಕವಿತೆ ದ್ವಿಪದಿಗಳು ವಿ.ಹರಿನಾಥ ಬಾಬು ಹೊರಗೆ ಚಿಟ್ಟೆ ಹಾರುವುದ ನೋಡಿದೆಮೊನ್ನೆಯಿಂದ ಹೃದಯವೇಕೋ ಖಾಲಿ ಖಾಲಿ ಮೋಡಗಳು ಇದ್ದ ಮಳೆಯೆಲ್ಲಾ ಸುರಿಸಿ ನಿಂತಿವೆಮನಸು ನೀನಿಲ್ಲದೆ ಕತ್ತಲ ಕೋಣೆಯಾಗಿದೆ ನದಿಗಳು ಉಕ್ಕಿ ಹರಿಯುತ್ತಿವೆನಿನ್ನ ಹುಡುಕಿ, ಕೈಚೆಲ್ಲಿ ಕುಳಿತಿರುವೆ ಈಜಲಾಗದೆ ನೀರು ಹರಿದ ನೆಲದ ಮೇಲೆ ಅದರ ಹೆಜ್ಜೆ ಮೂಡಿದೆನಿನ್ನ ಬಂದು ಹೋಗುವಿಕೆಗೂ ಇಂಥದೇ ನವಿರು ಯಾಕೋ ಗಾಳಿ, ಛಳಿಗೆ ಮೂಲೆಯಲಿ ಮುದುಡಿ ಕುಳಿತಿದೆನೀನು ಕಾಣದೆ ಮನಸು ಗರಬಡಿದ ಹಾಗಿದೆ *********************

ಅಂಕಣ ಬರಹ ಮಾತಲ್ಲಿ ಹಿಡಿದಿಡಲಾಗದ ಚಿತ್ರ… ಕೆಲವರ ವ್ಯಕ್ತಿತ್ವವೇ ಹಾಗಿರುತ್ತದೆ. ಜೇನು ತುಪ್ಪದಲ್ಲಿ ಅದ್ದಿ ತೆಗೆದಷ್ಟು ಸವಿಯಾಗಿ. ಅದೆಷ್ಟು ವಿನಯತೆ, ಅದೆಷ್ಟು ಭೂಮಿಗಿಳಿದ ಮನುಷ್ಯ ಎನಿಸಿಬಿಡುವಂತೆ. ಮನುಷ್ಯ ಏನೂ ಗೊತ್ತಿಲ್ಲದ ಸಂದರ್ಭದಲ್ಲಿ ಮುಗ್ಧನಷ್ಟೇ ಸ್ವಾರ್ಥಿಯೂ ಇರುತ್ತಾನೆ. ಅದು ಪುಟ್ಟ ಮಗುವಿನಲ್ಲಿ ಕಂಡು ಬರುವಂತಹ ಮುಗ್ಧತೆ ಮತ್ತು ಸ್ವಾರ್ಥ. ತದ ನಂತರ ಬೆಳೆಯುತ್ತ ಬೆಳೆಯುತ್ತಾ ಅವನ್ನು ತನಗೆ ಬೇಕಾದ ಹಾಗೆ ಬಳಸುವುದನ್ನು ಕಲಿಯುತ್ತಾನೆ. ಆದರೆ ಜ್ಞಾನ ಸಂಪಾದನೆ ಮಾಡುತ್ತಾ ಮಾಡುತ್ತಾ ವಿನೀತನಾಗಿ ಬಿಡುತ್ತಾನೆ. ಅವನೆಲ್ಲಾ ಅಹಂಕಾರವೂ ಸತ್ತುಹೋಗುತ್ತದೆ. ಜ್ಞಾನ […]

ಅಂಕಣ ಬರಹ ಹೊಸ ದನಿ-ಹೊಸ ಬನಿ-೧೧ ಭಾವಕ್ಕಿಂತಲೂ ಬುದ್ಧಿಯ ನಡೆಯಲ್ಲೇ ತವಕಿಸುವ ದಿಲೀಪ ಕುಮಾರ್ ಪದ್ಯಗಳು. ಹೊಸ ಕಾಲದ ಹುಡುಗ ಹುಡುಗಿಯರು ಫೇಸ್ಬುಕ್ ವಾಟ್ಸ್ ಆಪಿನಂಥ ಸಾಮಾಜಿಕ ಜಾಲತಾಣದಲ್ಲಿ ಬರೆದುದನ್ನು ತಿದ್ದುವ ಮೊದಲೇ ಪ್ರಕಟಿಸಿ ಬಿಡುವುದರಿಂದ ನಿಜಕ್ಕೂ ಕವಿತೆಗಳಾಗುವ ತಾಕತ್ತಿದ್ದ ರಚನೆಗಳು ಕೂಡ ಗರ್ಭಪಾತಕ್ಕೆ ಸಿಲುಕಿ ಅಂಥ ತಾಣಗಳಲ್ಲೇ ತಿಣುಕುತ್ತಿರುವ ಕೆಲವರ ಲೈಕು ಈಮೋಜಿ ಕಮೆಂಟುಗಳಿಂದಲೇ ಉಬ್ಬಿ ಹೋಗಿ ಆ ಕವಿ ಮಿಣುಕುಗಳು ನಕ್ಷತ್ರಗಳಾಗುವ ಮೊದಲೇ ಉರಿದು ಬಿದ್ದು ಹೋಗುತ್ತಿರುವ ಕಾಲವಿದು. ಅಪರೂಪಕ್ಕೆ ಹೊಸತಲೆಮಾರಿನ ಕೆಲವು ಹುಡುಗ […]

ಪ್ರಕೃತಿಯ ವಿಕೋಪಗಳು ಮತ್ತು ಪರಿಸರ ಸಂರಕ್ಷಣೆ

ಲೇಖನ ಪ್ರಕೃತಿಯ ವಿಕೋಪಗಳು ಮತ್ತು  ಪರಿಸರ ಸಂರಕ್ಷಣೆ ಶ್ರೀನಿವಾಸ. ಎನ್.ದೇಸಾಯಿ ಪ್ರಕೃತಿಯ ವಿಕೋಪಗಳು ಮತ್ತು  ಪರಿಸರ ಸಂರಕ್ಷಣೆಯ ಮುನ್ನೆಚ್ಚರಿಕೆಯ ಕ್ರಮಗಳು.. ನಾವು ನಮ್ಮನ್ನು ಹೇಗೆ ರಕ್ಷಣೆ ಮಾಡಿಕೊಳ್ಳುತ್ತೇವೆಯೋ ಹಾಗೇಯೇ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕೂಡಾ ಕ್ರಮಬದ್ಧವಾಗಿ, ಕಾಳಜಿಯಿಂದ, ಜವಾಬ್ದಾರಿಯುತವಾಗಿ ರಕ್ಷಣೆ ಮಾಡಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಯಾಕೆಂದರೆ ಇತ್ತೀಚೆಗೆ ಆಗುತ್ತಿರುವ ಪ್ರಕೃತಿಯ ವಿಕೋಪಗಳಿಂದ ನಾವು ಅಕ್ಷರಶಃ ತತ್ತರಸಿ ಹೋಗಲು ಮುಖ್ಯ ಕಾರಣ ನಾವು ಮಾಡಿರುವ ಮತ್ತು ಮಾಡುತ್ತಿರುವ ಪರಿಸರ ನಾಶಕ್ಕೆ ಇಡೀ ಭೂಮಂಡಲದ ಚಿತ್ರಣವೇ ಬದಲಾಗುತ್ತಿದೆ. ನಾವಿಲ್ಲಿ […]

ದುಃಖ

ಕವಿತೆ ದುಃಖ ಚಂದ್ರಿಕಾ ನಾಗರಾಜ್ ಹಿರಿಯಡಕ ಅಯ್ಯೋಒಡೆದು ಬಿಡುಹೆಪ್ಪು ಗಟ್ಟಿರುವ ದುಃಖವ ಎಷ್ಟುಹೊತ್ತು ಹೊರಲಿಉಬ್ಬಿರುವ ಗಂಟಲ ಎಷ್ಟೆಂದು ಸಮಾಧಾನಿಸಲಿಅಡರಿರುವ ಕತ್ತಲಬೆಳಕೆಂದು ಕಂಗಳಿಗೆಷ್ಟು ನಂಬಿಸಲಿಹರಿದು, ಒಡೆದುಕಡಲಾಗಿಸುಹರಿಯಲಿಕಪ್ಪು ನೆತ್ತರುಹಾಳು ನೆತ್ತರುಬಸಿದಿಟ್ಟ ಒಲವಸುಡು ಸುಡುವಆಟದಲಿಕೈ ಸುಟ್ಟಿದ್ದಲ್ಲಕರಟಿ ಹೋಗಿದೆಬದುಕುಒಂದಷ್ಟು ಬವಣೆಗಳ ರಾಶಿಇನ್ನೊಂದಷ್ಟು ಖುಷಿಸತ್ತು ಸತ್ತು ನರಳುತಿದೆಎದೆ ಎತ್ತರಕ್ಕೆ ಬೆಳೆದು ನಿಂತಿದೆಇಲ್ಲ ಭಾವಗಳೆತ್ತರವ ಮೀರುತಿದೆಅಪನಂಬಿಕೆಯೆಂಬೋ ಅರ್ಥಹೀನತೆಗೆ‘ನೀನು’ ಎಂಬನಾಮಕರಣ ಮಾಡಿಸಿಹಿ ಹಂಚುವುದಿಲ್ಲಅಯ್ಯೋಒಡೆದು ಬಿಡುಹಂಚಿ ಹೋಗಲಿಕಹಿಯ ಒಗರೆಲ್ಲಾಆತ್ಮೋದ್ಧಾರದ ಸಣ್ಣ ಬೆಳಕೊಂದುಹಾಯಲಿಕದವಿಕ್ಕದಎದೆಯಂಗಳದ ತುಂಬೆಲ್ಲಾ ************************

ಸಂದಣಿ

ವಿಶೇಷ ಕಥೆ ಸಂದಣಿ ಅಶ್ವಥ್ ಬೆಳಗಿನ ಆಮೆವೇಗದ ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಂಡು ಕಾಯುತ್ತಾ ಸಂಯಮ ಸಮಾಧಾನಗಳನ್ನೊಂದಿಷ್ಟು ಅಭ್ಯಾಸ ಮಾಡಿ ಆಫೀಸು ತಲುಪುವುದು ಸತೀಶನಿಗೆ ನಿತ್ಯಕರ್ಮವಾಗಿತ್ತು. ಅಕಸ್ಮಾತಾಗಿ ಬೆಳಗಿನ ಜಾವ ಮೂರು ನಾಲ್ಕುಗಂಟೆಯಲ್ಲೋ ಅಥವಾ ಅರ್ಧದಿನ ರಜಾಹಾಕಿ ಮನೆಗೆ ಮರಳುವಾಗಲೋ ಟ್ರಾಫಿಕ್ನಲ್ಲಿ ಸಿಕ್ಕಿಕೊಳ್ಳದೇ ಮನೆ ತಲುಪಿದ ದಿನ ತನ್ನ ಬೈಕಿಗೆ ರೆಕ್ಕೆ ಬಂದಿವೆಯೇನೋ ಅನಿಸುವಷ್ಟರ ಮಟ್ಟಿಗೆ ಹದಿನೈದು ನಿಮಿಷದ ಕಿರು ಪ್ರಯಾಣವಾಗಿರುತ್ತಿತ್ತು. ಬೆಂಗಳೂರಿನಲ್ಲಿರುವ ಹತ್ತು ವರ್ಷಗಳಲ್ಲಿ ‍ಮೂರು ಕಂಪನಿಗಳನ್ನು ಬದಲಾಯಿಸಿದರೂ ಎಲ್ಲೂ ಈಗಿನಷ್ಟು ಹತ್ತಿರವಾಗಿರಲಿಲ್ಲ. ಮೊದಲೆಲ್ಲಾ ೩ ಪ ಗಂಟೆಗಳವರೆಗಿನ […]

ಅಂಕಣ ಬರಹ ಪದೇ ಪದೇ ಕಾಡೋದು ಮನುಷ್ಯನ ವೈರುಧ್ಯಗಳು, ಸಂಬಂಧಗಳು. ಸಾಮಾಜಿಕ ತಲ್ಲಣ ತವಕಗಳು” ಮಮತಾ ಅರಸೀಕೆರೆ ಪರಿಚಯ :ಮಮತಾ ಅರಸಿಕೆರೆ ಕವಯಿತ್ರಿ. ವೃತ್ತಿಯಿಂದ ಶಿಕ್ಷಕಿ. ಚಿಕ್ಕಮಗಳೂರಿನ ಬೆಳವಾಡಿ ಅಪ್ಪನ ಊರು. ತುಮಕೂರು ಅವರ ತಾಯಿಯ ತವರು. ಶಿಕ್ಷಣ ಪಡೆದದ್ದೆಲ್ಲವೂ ಜಾವಗಲ್ ನಲ್ಲಿ. ಶಿಕ್ಷಕ ವೃತ್ತಿಯಲ್ಲಿದ್ದು, ಎಂ.ಎ.ಬಿಎಡ್ ಪಡೆದವರು. ವೃತ್ತಿಯಿಂದ ಶಿಕ್ಷಣ ಇಲಾಖೆಯಲ್ಲಿ ಈಗ ಸಿಆರ್‌ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂರು ಕೃತಿಗಳು ಪ್ರಕಟವಾಗಿವೆ. ಕಾವ್ಯ, ಅನುವಾದ ಹಾಗೂ ಮಕ್ಕಳ ೩ ನಾಟಕಗಳು ಎಂಬ ಕೃತಿಗಳನ್ನು ಹೊರ ತಂದಿರುವ ಇವರ […]

Back To Top