ಹಲವು ಭಾವಗಳನ್ನು ಒಟ್ಟಿಗೆ ಸೆರೆಹಿಡಿಯುವ ರೂಪಕಗಳು ಸೂಜಿ ಕಣ್ಣಿಂದ ತೂರಿದದಾರಕ್ಕೆ ಒಳಗಿಲ್ಲ ಹೊರಗಿಲ್ಲ ಈ ಒಂದು ಸಾಲಲ್ಲಿಯೇ ತನ್ನ ಇಡೀ ಕಾವ್ಯದ ಸತ್ವವನ್ನು ನಮ್ಮೆದುರಿಗೆ ತೆರೆದಿಟ್ಟ ಕೃಷ್ಣ ಗಿಳಿಯಾರ ಎಂಬ ವೈದ್ಯರ ಪರಿಚಯ ಯಾರಿಗಿಲ್ಲ ಹೇಳಿ. ವೃತ್ತಿಯಲ್ಲಿ ವೈದ್ಯರಾದರೂ ನವಿರು ಗೆರೆಗಳು ಅವರ ಭಾವಾಭಿವ್ಯಕ್ತಿಯ ಪ್ರತಿರೂಪ. ಭಟ್ಕಳದಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಕೃಷ್ಣ ಗಿಳಿಯಾರರ ಕ್ಯಾಮರಾಕ್ಕೆ ಫೋಸ್ ನೀಡಲೆಂದೇ ಬಹಳಷ್ಟು ಹೂವುಗಳು ಅರಳುತ್ತವೆ. ಹೆಚ್ಚಿನ ಪಕ್ಷಿಗಳು ಅವರೆದುರು ಹೊಸ ಮದುವಣಗಿತ್ತಿಯಂತೆ ನುಲಿಯುತ್ತ ನಡೆಯುತ್ತವೆ. ಸೂರ್ಯ ಬಳಕುತ್ತ ತನ್ನದೊಂದು […]
ಪಾಲಿಸೋ ಹೂವ ನಾನು ಚಿಕ್ಕವಳಿದ್ದಾಗ ಊರಿನ ಆಂಜನೇಯ ದೇವಸ್ಥಾನದ ದೇವರ ಪಲ್ಲಕ್ಕಿ ವರುಷಕ್ಕೊಮ್ಮೆ ನಮ್ಮ ಮನೆಗೆ ಬರುತ್ತಿತ್ತು. ಮನೆಯ ಹಿರಿಯರೆಲ್ಲರೂ ಭಯ-ಭಕ್ತಿಗಳಿಂದ ದೇವರನ್ನು ಸ್ವಾಗತಿಸಲು ಸಿದ್ಧರಾದರೆ, ನನ್ನ ಮನಸ್ಸಿನಲ್ಲೊಂದು ವಿಚಿತ್ರವಾದ ಸಡಗರ ತುಂಬಿಕೊಳ್ಳುತ್ತಿತ್ತು. ಕಲ್ಲು-ಮುಳ್ಳು ಬಿಸಿಲು ಯಾವುದನ್ನೂ ಲೆಕ್ಕಿಸದೆ ಮಡಿಬಟ್ಟೆಯಲ್ಲಿ ಪಲ್ಲಕ್ಕಿ ಹೊರುತ್ತಿದ್ದ ಗಂಡಸರು, ಅವರ ಕಾಲುಗಳನ್ನು ತಣ್ಣೀರಿನಿಂದ ತೊಳೆದು ಹಳೆಹಾಡುಗಳನ್ನು ಹಾಡುತ್ತ ಪಲ್ಲಕ್ಕಿಯನ್ನು ಸ್ವಾಗತಿಸುತ್ತಿದ್ದ ಹೆಂಗಸರು, ದೇವರು-ಶಾಸ್ತ್ರ ಯಾವುದರ ಬಗ್ಗೆಯೂ ಸ್ಪಷ್ಟ ಕಲ್ಪನೆಯಿಲ್ಲದೆ ದೇವರ ಆಗಮನವನ್ನು ನೆಂಟರು ಬಂದಂತೆ ಸಂಭ್ರಮಿಸುತ್ತಿದ್ದ ಮಕ್ಕಳು ಹೀಗೆ ಬಿಡಿಬಿಡಿಯಾದ ಪ್ರಪಂಚಗಳನ್ನು […]
ಸ್ವಾಭಿಮಾನಿ
ಪುಟ್ಟ ಕಥೆ ಸ್ವಾಭಿಮಾನಿ ಮಾಧುರಿ ಕೃಷ್ಣ ಸಂಬಂಧಿ ಮಹಿಳೆ…ಹನ್ನೆರಡಕ್ಕೆ ಮದುವೆಯಾಗಿತ್ತು. ಎಲ್ಲರೂ ಮೊದಲ ಮಗುವಿನ ಬರವಿನಲ್ಲಿದ್ದರೆ ಅಪ್ಪನಾಗುವವನು ಮಾಯ ! ಕಷ್ಟಪಟ್ಟು ಹುಡುಕಿ ಹುಡುಕಿ ಕರೆ ತರುತ್ತಿದ್ದರು.ಮೂರು ಮಕ್ಕಳಾದ ಮೇಲೆ ತಿಳಿವು ಬಂದದ್ದು ಇನ್ನೂ ಇಪ್ಪತ್ತರ ಗಡಿಯಲ್ಲೇ ಇದ್ದ ಯುವತಿ ಹೆಂಡತಿಗೆ. ಬಗಲಲ್ಲೆರಡು ಸೀರೆ ತುರುಕಿಕೊಂಡು ಕಾದೇ ಕಾದಳು. ಐದು ತಿಂಗಳ ಮೊಲೆಹಾಲು ಕುಡಿಯುತ್ತಿದ್ದ ಮಗುವನ್ನು ಕೆಳಗಿಳಿಸಿ ಸದ್ದಿಲ್ಲದೆ ಅಪರರಾತ್ರಿಯಲ್ಲಿ ಗಂಡನ ಹಿಂದೆ ಹೋದಳು.ಟಿಕೇಟು ಕೇಳಿದಾಗ ಮುಂದೆ ಮುದುಡಿ ಕುಳಿತ ಗಂಡನೆಡೆ ಕೈ ಮಾಡಿದಳು. ದೂರದ ತಮಿಳುನಾಡಿನಲ್ಲಿ […]
ಶ್…. ! ನಿಶ್ಯಬ್ದವಾಗಿರಿ ನೀವು
ಕವಿತೆ ಶ್…. ! ನಿಶ್ಯಬ್ದವಾಗಿರಿ ನೀವು ತೇಜಾವತಿಹೆಚ್.ಡಿ. ಅದೇ ದಾರಿಯಲ್ಲಿನಿತ್ಯ ಪ್ರಯಾಣಿಸುತ್ತಿದ್ದೆನನ್ನದೇ ಲಹರಿಯಲ್ಲಿಐಹಿಕದ ಜಂಜಾಟದಲ್ಲಿಮನಸ್ಸಿನ ಹೊಯ್ದಾಟದಲ್ಲಿ ನಿಗೂಢ ಬದುಕ ಬಯಲಿನಲ್ಲಿಎಲ್ಲವೂ ಬೆತ್ತಲೆನಮ್ಮದೇನಿದೆ ಇಲ್ಲಿ,? ಆಗೋ.. ಅಲ್ಲಿ ಗೋಚರಿಸುತ್ತಿದೆಪ್ರಶಾಂತ ನೀರವ ತಾಣ…ಇಲ್ಲೇ ಹಿತವೆನಿಸುತ್ತದೆ ನನಗೆ ಶ್……! ನಿಶ್ಯಬ್ದವಾಗಿರಿ ನೀವುಎಚ್ಚರಗೊಂಡಾರು ಮತ್ತೆ ಇದ್ದಾಗಹಾಸಿಗೆ ಹೊದಿಕೆಯಿಲ್ಲದೆ ನಲುಗಿದ ಜನರುಬೆಚ್ಚಗೆ ಮಲಗಿಹರಿಲ್ಲಿಮಣ್ಣಿನ ಪದರಗಲಾಗಿ! ಅಹಮ್ಮಿನ ಕೋಟೆಯೊಳಗೆಅಹಂಕಾರದಿಂದ ಮೆರೆದವರೆಲ್ಲಾಮಣ್ಣುಸೇರಿ ಗೆದ್ದಲಿಡಿದಿಹರಿಲ್ಲಿ.. ! ತಾನು ತಾನೆಂದು ತನ್ನವರ ಸ್ವಾರ್ಥಕ್ಕಾಗಿಕಚ್ಚಾಡಿದವರೆಲ್ಲಾಏಕಾಂಗಿಯಾಗಿ ಕೊಳೆಯುತಿಹರಿಲ್ಲಿ.. ! ಕ್ಷಣಿಕ ಬಾಳಲಿ ವಿಶ್ವ ಗೆಲ್ಲುವಶಾಶ್ವತ ಕನಸು ಕಂಡುನನಸಾಗದೇ ಉಳಿದುಕನವರಿಸಿ ನರಳಿವಸ್ತಿ ಮಾಡಿಹರಿಲ್ಲಿ.. ! […]
ಭವದ ಭಾವಸೇತು
ಕವಿತೆ ಭವದ ಭಾವಸೇತು ನಾಗರೇಖಾ ಗಾಂವಕರ್ ಮನದೊಡಲ ಕಡಲಪ್ರಕ್ಷುಬ್ಧ ಸುಳಿಗಳುಮುತ್ತಿಕ್ಕುವ ಅಲೆಗಳಾಗುತ್ತವೆ,ಆ ಪ್ರೀತಿಗೆ ಯಮುನೆ ತಟದಿ ಕೂತಹೂತ ಕಾಲಿನ ಆಕೆಮುರುಳಿಯಲಿ ಬೆರೆತಉಸಿರ ತೇಕುತ್ತಾಕಣ್ಣ ಬೆಳಕನ್ನೆ ಹಾಸಿಭಾವ ಸೇತುವಿನ ನಾಡಿ ಹಿಡಿದುಭವದ ನೆರಳಿಗೆ ಹಂಬಲಿಸುತ್ತಾಳೆ. ಯಾವ ರಾಗವದು, ಬೆಸೆದದ್ದುಒಪ್ಪುತಪ್ಮ್ಪಗಳ ಭಿನ್ನಸಹಮತಗಳ ನಡುವೆಸಂಕಲಿಸಿ ಹೃದಯಗಳ ಬೆಸುಗೆ ಹೊನಲು ಬೆಳಕಿನ ಕೂಡಮಂದ್ರಸ್ಥಾಯಿಯ ನುಡಿಸಿಅಗೋಚರದ ಮಹಲಿನಲಿಮುಕ್ತಿ ಮಂಟಪವಿಟ್ಟುರಾಗದ್ವೇಷದ ಬೆಂಕಿಯನುತಣ್ಣಗಾಗಿಸಿ ಪರವತೋರುತ್ತಾನೆ ಪ್ರೀತಿಯಲಿ ಮುಳುಗುವ ಹರಿಗೋಲುತೂತುಗಳ ಹೊದ್ದ ಬರಿದುಜೀವದ ಗೋಳು.ಅಲ್ಲೂ ಪಯಣದ ಹಂಬಲದಮುಗಿಯದಾ ಬದುಕಪ್ರೀತಿಯ ಪಾಡುಹಾಡುತ್ತಾನೆ ಪ್ರೀತಿಸುವುದೆಂದರೆಆತ್ಮಕ್ಕೆ ಆತ್ಮವೇ ಆಗಿನಿಲುಕದ ನೆಲೆಯಲ್ಲೂಆಲಿಂಗನದ ಕನಸ ಹೊತ್ತುಸಾಗುವುದು,ಎಂದವನ […]
ಸೌಗಂಧಿಕಾ
ಪುಸ್ತಕಪರಿಚಯ ಸೌಗಂಧಿಕಾ ನನಗೆ ಪ್ರವಾಸ ಮಾಡುವಾಗ ಪುಸ್ತಕದ ಪುಟಗಳನ್ನ ತೆರೆದು ಸವಿಯುವುದೆಂದರೇ ತಾಯಿ ತುತ್ತು ಮಾಡಿ ಬಾಯಿಗೆ ಹಾಕುವಾಗ ಸಿಗುವ ಸುಖದಷ್ಟೇ ನನಗೆ ಆನಂದ. “ಸೌಗಂಧಿಕಾ” ಕವನ ಸಂಕಲನ ನನ್ನ ಕೈ ಸೇರಿ ಸುಮಾರು ಆರೇಳು ತಿಂಗಳು ಕಳಿಯಿತೇನೋ ಆದರೆ ಎರಡು ಮೂರು ಬಾರಿ ಸವಿದರೂ ಕವನಸಂಕಲನದ ಜನಕಿಗೆ ನನ್ನ ಮನದಾಳದ ನುಡಿಗಳನ್ನ ಹೇಳಲು ಇಷ್ಟು ದಿನ ಬೇಕಾಯಿತು. ಎರಡು ದಿನದ ಹಿಂದೆ ಕೊಚ್ಚಿಗೆ ಪ್ರಯಾಣ ಮಾಡುವಾಗ ಮನದಲಿ ಬೇಸರದ ಛಾಯೆಯೇ ಆವರಿಸಿಕೊಂಡಿತು. ಈ ಬೇಸರವನ್ನ ದೂರಮಾಡಿದ್ದು […]
ಗುಪ್ತಗಾಮಿನಿ
ಕವಿತೆ ಗುಪ್ತಗಾಮಿನಿ ಮಮತಾ ಶಂಕರ ಇಲ್ಲಿ ಹುಟ್ಟಿದ ಮೇಲೆನಾವು ಇಲ್ಲಿನ ಕೆಲವುಅಲಿಖಿತ ಆದೇಶಗಳ ಪಾಲಿಸಲೇಬೇಕಾಗುತ್ತದೆ ಯಾರೋ ಅಜ್ನಾತ ಕ್ರೂರಿಗಳ ಕೈಗೆ ಸಿಕ್ಕುನಾವು ನಲುಗಬಹುದೆಂಬ ಒಣ ಗುಮಾನಿಯಿಂದತಮ್ಮ ಕರುಣಾಳು ಕೈಯಿಂದ ನಮ್ಮನ್ನು ರಕ್ಷಿಸುತ್ತೇವೆಂದುಮುಸುಕಲ್ಲಿ ಮುಚ್ಚಿಟ್ಟು ಕಾಪಿಡುತ್ತಾರೆ….ಮತ್ತು ಪತಿ ಪಿತ ಸುತರಾದಿಯಾಗಿಅವರೆಲ್ಲಾ ನಮ್ಮನ್ನು ಪೊರೆಯುವವರೆಂದುಕರೆಯಲ್ಪಡುವವರಾಗಿ ನಮ್ಮನಡೆಯಲಾಗದ ನಿಶ್ಯಕ್ತ ಕಾಲುಗಳಾಗಿರುತ್ತಾರೆಹಾಗೆಯೇಇವರೆಲ್ಲಾ ಶೂರರೇ ಆಗಿರಬೇಕೆಂಬ ಕರಾರೇನಿರುವುದಿಲ್ಲ…. ಕೆಲವೊಮ್ಮೆ ನಾವುನಿರ್ವೀರ್ಯರ ನಿಷ್ಪಂದರ ಸುಪರ್ದಿಯಲ್ಲಿಸುಖಿಗಳೆಂದು ಜಗತ್ತಿಗೆ ತೋರಿಸುವಲ್ಲಿನೆಮ್ಮದಿಯ ಪಡೆದವರಾಗಿರುತ್ತೇವೆ…. ಹೇಗಿದೆ ನೋಡಿ….ಸುಳ್ಳಿನ ಪ್ರತಿಬಿಂಬವನ್ನು ಜಗತ್ತು ನಂಬುತ್ತದೆಅಷ್ಟೇಕೆ…..? ಪೋಷಿಸುತ್ತದೆ ಕೂಡ….. ಓ…… ಮಾಯೆ ಮುಸುಕಿದ ಜಗದ ಕಣ್ಣೇನಿನಗೆಂದೂ […]
ಸವಿ ಬೆಳದಿಂಗಳು
ಕವಿತೆ ಸವಿ ಬೆಳದಿಂಗಳು ರಾಘವೇಂದ್ರ ದೇಶಪಾಂಡೆ ಈ ಸಂಜೆ, ಈ ಒಂಟಿತನಸಾಕ್ಷಿಯಾಗುತಿದೆ ಆಕಾಶದಿನದ ವಿದಾಯಕೆಸಂಜೆ ಸಮೀಪಿಸುತ್ತಿದ್ದಂತೆನೆನಪಾದೆ ನೀ ನನ್ನಲಿ…ಗಾಳಿಯಲ್ಲಿ ತೇಲಿ ಬರುತಿದೆಸುವಾಸನೆಯೊಂದು ಅಪರಿಚಿತವಾಗಿಕೆಲವೊಮ್ಮೆ ಪರಿಚಿತವಾಗಿಯೂಹೇಳುವುದು ಕಥೆಯನ್ನು ಒಮ್ಮೊಮ್ಮೆಕೇಳಲು ಪ್ರಯತ್ನಿಸುವೆನೆನಪಾದೆ ನೀನಾಗಆಗಸದಿ ಚಂದ್ರ ಇಳಿದು ಬರುತಿರುವಾಗಹುಡುಕಿಕೊಂಡು ಬಂದನೇ ಚಂದ್ರಆಕಾಶದಲ್ಲಿ ಯಾರನ್ನಾದರೂ …! ತಿಳಿದುಕೊಳ್ಳಲು ಬಯಸುವೆನುಚಂದ್ರನ ಬಗ್ಗೆ ಯಾರಲ್ಲಾದರುನೆನಪಾದೆ ನೀನಾಗಪಸರಿಸುವ ಸುಗಂಧದಲ್ಲಿಆಸ್ವಾದಿಸುವೆ ತಂಗಾಳಿಯಲಿ ನಿನ್ನನು…ಕರೆಯುವರಾರೊ ಮೆದುಧ್ವನಿಯಲಿಬೆಳದಿಂಗಳ ಹೆಸರಿನಲಿನಿರ್ಮಿಸುತಿರುವೆ ಮೆಟ್ಟಿಲುಗಳಏರಿ ಬೆಳದಿಂಗಳ ಸವಿಯಲು.ಪ್ರಯತ್ನಿಸುತ್ತೇನೆ ಏರಲುನೆನಪಿಸಿಕೊಂಡು ನಿನ್ನನುಕೇವಲ ನಿನಗಾಗಿ ಮಾತ್ರವೇ …! *****************************************
ಟೆಲಿಮೆಡಿಸನ್-
ಲೇಖನ ಟೆಲಿಮೆಡಿಸನ್- ದೂರವಾಣಿಯಮೂಲಕತಲುಪಿಸುವಸಹಾಯವಾಣಿ ಡಾ.ವಿಜಯಲಕ್ಚ್ಮೀಪುರೋಹಿತ್ ದೂರವಾಣಿಯಮೂಲಕವೇರೋಗಿಯ/ ರೋಗದಅವಸ್ಥೆತಿಳಿದುಕೊಂಡುಸೂಕ್ತಸಲಹೆ, ಸಂಶಯಪರಿಹಾರ, ಪಥ್ಯಪಾಲನೆ, ಔಷಧಿ, ಉಪಚಾರಕ್ರಮ, ಮನೋಸ್ಥೈರ್ಯಬೆಳೆಸುವದು,ಅವಶ್ಯಕತೆಇದ್ದಲ್ಲಿಅಂಬುಲನ್ಸವ್ಯವಸ್ಥೆಕಲ್ಪಿಸುವದು, ರೋಗಿಯನ್ನಸೂಕ್ತವಾದಆಸ್ಪತ್ರೆಗೆಸೇರಿಸುವದುಇತ್ಯಾದಿಸೇವೆಗಳನ್ನುಬರೀದೂರವಾಣಿಸಂಭಾಷಣೆಯಮೂಲಕಒದಗಿಸುವಮಹತ್ವದಕಾರ್ಯವನ್ನುಈಟೆಲಿಮೆಡಿಸಿನ್ಸೇವೆಯಮೂಲಕಮಾಡಲಾಗುತ್ತದೆ. ಕೋವಿಡ 19 , ಇದುಕೊರೊನಾಎಂಬವೈರಸ್ಮುಖಾಂತರಮನುಕುಲಕ್ಕೆಬಂದುತೊಂದರೆಉಂಟುಮಾಡಿದಹೊಸಕಾಯಿಲೆ . ಕಣ್ಣು, ಮೂಗುಬಾಯಿಯಮೂಲಕಮಾನವದೇಹವನ್ನುಸೇರುವಈವೈರಾಣುಗಂಟಲಪ್ರವೇಶಿಸಿಅಲ್ಲಿಂದlungs ಪುಪ್ಪುಸದಕಾರ್ಯಕ್ಷಮತೆಯನ್ನುತಗ್ಗಿಸುತ್ತಹೋಗುತ್ತದೆ. ಹಾಗೆಯೆಉಸಿರಾಟದತೊಂದರೆಗಂಭೀರವಾಗಬಹುದು, ಅಲ್ಲದೆಬೇರೆಅವಯವಗಳಿಗೂರೋಗಹರಡಿತೀವ್ರತೊಂದರೆಉಂಟಾಗಬಹುದುಒಮ್ಮೊಮ್ಮೆರೋಗಿಯುಸಾವನ್ನಪ್ಪಬಹುದು. ಇಂತಹವಿಷಮಪರಿಸ್ಥಿತಿಯಲ್ಲಿನಮ್ಮಕರ್ನಾಟಕಸರಕಾರವನ್ನುಅವರಶ್ಲಾಘನೀಯಕೆಲಸವನ್ನುನಾವೆಲ್ಲಮೆಚ್ಚಲೇಬೇಕು. “ಆಪ್ತಮಿತ್ರ“ಸಹಾಯವಾಣಿಸಂಪರ್ಕನಾಡಿನಎಲ್ಲಜನತೆಗೂಕಲ್ಪಿಸಿಕೋಟ್ಟಿದ್ದಾರೆ. ಈಸಹಾಯವಾಣಿಯುನಮ್ಮಮಾನ್ಯಮುಖ್ಯಮಂತ್ರಿಗಳಾದಶ್ರೀಯಡಿಯೂರಪ್ಪನವರು, ಆರೋಗ್ಯಇಲಾಖೆಯಮಂತ್ರಿಗಳುಅಲ್ಲದೇ disaster management team (ವಿಪತ್ತುನಿರ್ವಹಣೆತಂಡ.) ಮತ್ತುಕರ್ನಾಟಕದಆರೋಗ್ಯಹಾಗೂಕುಟುಂಬರಕ್ಷಣೆಯವರೂ ( karnataka health and family welfare)ಈಸಹಾಯವಾಣಿಯಸದುದ್ದೇಶದಲ್ಲಿಭಾಗವಹಿಸಿದ್ದಾರೆ. ನಮ್ಮಆಯುಷ್ಯಇಲಾಖೆಯ joint director dr sridhar ಅವರೂ commissionar _ಆದಶ್ರೀಮತಿ ಮೀನಾಕ್ಷಿನೇಗಿಅವರುಸೇರಿದಂತೆರೋಗದಹತೋಟಿಗೆಸರಿಯಾದಸಮಯಕ್ಕೆಇದನ್ನುಸಾರ್ವಜನಿಕಬಳಕೆಗೆಸಿಧ್ದಪಡಿಸಿದ್ದಾರೆ. ಅಲ್ಲದೇಈಡಿಜಿಟಲ್ಆ್ಯಾಪ( digital app) ಮಾಡುವಲ್ಲಿ(Infosys )ಇನಫೋಸಿಸ್ಸಂಸ್ಥೆಯವರಸಹಾಯಹಸ್ತವೂಇದೆ. CRM system develop ಮಾಡಿದ್ದಾರೆ. […]
ಜುಮ್ಮಾ- ಕಥಾ ಸಂಕಲನ ಜುಮ್ಮಾ- ಕಥಾ ಸಂಕಲನತೆಲುಗು ಮೂಲ: ವೇಂಪಲ್ಲಿ ಶರೀಫ್ಕನ್ನಡಕ್ಕೆ:ಸೃಜನ್ಪ್ರ : ನವಕರ್ನಾಟಕ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೭೫ಪುಟಗಳು : ೯೬ ಮುಸ್ಲಿಂ ಸಂವೇದನೆಗಳಿಗೆ ಧ್ವನಿ ನೀಡುವ ಮತ್ತು ಓದುಗರ ಮನಮಿಡಿಯುವಂತೆ ಮಾಡುವ ೧೩ ಹೃದಯಸ್ಪರ್ಶಿ ಕಥೆಗಳ ಸಂಕಲನವಿದು. ಮುಖ್ಯವಾಗಿ ಗ್ರಾಮೀಣ ತಳ ಸಮುದಾಯದವರ ಕುರಿತಾದ ಕಥೆಗಳು ಇಲ್ಲಿವೆ. ಬದುಕಿನಲ್ಲಿ ಸುಖವೆಂದರೇನೆಂದೇ ತಿಳಿಯದ ಅಸ್ತಿತ್ವಕ್ಕಾಗಿ ಹೆಣಗಾಡುವ ಮಂದಿ ಇಲ್ಲಿದ್ದಾರೆ. ಲೇಖಕರಾದ ವೇಂಪಲ್ಲಿ ಶರೀಫ್ ತಮ್ಮ ಸುತ್ತಮುತ್ತ ತಾವು ಕಂಡ ಜಗತ್ತನ್ನು ಸ್ವಲ್ಪವೂ ಉತ್ಪ್ರೇಕ್ಷೆಯಿಲ್ಲದೆ […]