ಕವಿತೆ
ಸವಿ ಬೆಳದಿಂಗಳು
ರಾಘವೇಂದ್ರ ದೇಶಪಾಂಡೆ
ಈ ಸಂಜೆ, ಈ ಒಂಟಿತನ
ಸಾಕ್ಷಿಯಾಗುತಿದೆ ಆಕಾಶ
ದಿನದ ವಿದಾಯಕೆ
ಸಂಜೆ ಸಮೀಪಿಸುತ್ತಿದ್ದಂತೆ
ನೆನಪಾದೆ ನೀ ನನ್ನಲಿ…
ಗಾಳಿಯಲ್ಲಿ ತೇಲಿ ಬರುತಿದೆ
ಸುವಾಸನೆಯೊಂದು ಅಪರಿಚಿತವಾಗಿ
ಕೆಲವೊಮ್ಮೆ ಪರಿಚಿತವಾಗಿಯೂ
ಹೇಳುವುದು ಕಥೆಯನ್ನು ಒಮ್ಮೊಮ್ಮೆ
ಕೇಳಲು ಪ್ರಯತ್ನಿಸುವೆ
ನೆನಪಾದೆ ನೀನಾಗ
ಆಗಸದಿ ಚಂದ್ರ ಇಳಿದು ಬರುತಿರುವಾಗ
ಹುಡುಕಿಕೊಂಡು ಬಂದನೇ ಚಂದ್ರ
ಆಕಾಶದಲ್ಲಿ ಯಾರನ್ನಾದರೂ …!
ತಿಳಿದುಕೊಳ್ಳಲು ಬಯಸುವೆನು
ಚಂದ್ರನ ಬಗ್ಗೆ ಯಾರಲ್ಲಾದರು
ನೆನಪಾದೆ ನೀನಾಗ
ಪಸರಿಸುವ ಸುಗಂಧದಲ್ಲಿ
ಆಸ್ವಾದಿಸುವೆ ತಂಗಾಳಿಯಲಿ ನಿನ್ನನು…
ಕರೆಯುವರಾರೊ ಮೆದುಧ್ವನಿಯಲಿ
ಬೆಳದಿಂಗಳ ಹೆಸರಿನಲಿ
ನಿರ್ಮಿಸುತಿರುವೆ ಮೆಟ್ಟಿಲುಗಳ
ಏರಿ ಬೆಳದಿಂಗಳ ಸವಿಯಲು.
ಪ್ರಯತ್ನಿಸುತ್ತೇನೆ ಏರಲು
ನೆನಪಿಸಿಕೊಂಡು ನಿನ್ನನು
ಕೇವಲ ನಿನಗಾಗಿ ಮಾತ್ರವೇ …!
*****************************************
Abinandanegalu deshpande ooleya veraha kavite.tqu