ಡಾ ಅನ್ನಪೂರ್ಣಾ ಹಿರೇಮಠ-ಸೋಲುವ ಪ್ರೀತಿ ಪಟು
ಕಾವ್ಯ ಸಂಗಾತಿ
ಡಾ ಅನ್ನಪೂರ್ಣಾ ಹಿರೇಮಠ
ಸೋಲುವ ಪ್ರೀತಿ ಪಟು
ಜಯಶ್ರೀ ಎಸ್ ಪಾಟೀಲ-“ಎಂದು ನಗುವ ನಮ್ಮ ರೈತ”
ಕಾವ್ಯಯಾನ
November 20, 2023admin
ಜಯಶ್ರೀ ಎಸ್ ಪಾಟೀಲ-“ಎಂದು ನಗುವ ನಮ್ಮ ರೈತ”
ಕಾವ್ಯಸಂಗಾತಿ
ಜಯಶ್ರೀ ಎಸ್ ಪಾಟೀಲ
“ಎಂದು ನಗುವ ನಮ್ಮ ರೈತ”
ಸುಧಾ ಪಾಟೀಲ್ ಕವಿತೆ-ಹುಡುಕುತ್ತಿರುವೆ
ಕಾವ್ಯಸಂಗಾತಿ
ಸುಧಾ ಪಾಟೀಲ್
ಹುಡುಕುತ್ತಿರುವೆ
ಡಾಕಸ್ತೂರಿ ದಳವಾಯಿ ಕವಿತೆ ಮಣ್ಣು
ಕಾವ್ಯ ಸಂಗಾತಿ
ಡಾಕಸ್ತೂರಿ ದಳವಾಯಿ
ಮಣ್ಣು
ಧಾರಾವಾಹಿ-ಅಧ್ಯಾಯ –11 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ತನ್ನ ಅಸಮ್ಮತಿಯನ್ನು ನಾಣುವಿಗೆ ಸ್ಪಷ್ಟ ಪಡಿಸಿದ ಕಲ್ಯಾಣಿ ಪತಿಯು ಮಕ್ಕಳಿಗೆ ಹೇಳಿದ ಪ್ರತಿಯೊಂದು ಮಾತೂ ಕಲ್ಯಾಣಿ ಅಡುಗೆ ಮನೆಯಿಂದ ಕೇಳಿಸಿಕೊಳ್ಳುತ್ತಾ ಇದ್ದರು. ಮಕ್ಕಳ ಮನಸ್ಸಿಗೆ ಉಂಟಾಗುವ ಆಘಾತ ನೆನೆದು ಕಣ್ಣು ತುಂಬಿ ಬಂದಿತ್ತು. ಇಂದು ಮತ್ತೊಮ್ಮೆ ತಾನು ಮನದಲ್ಲಿ ಮಾಡಿಕೊಂಡ ದೃಢ ನಿರ್ಧಾರವನ್ನು ಪತಿಯೊಂದಿಗೆ ನಿವೇದಿಸಿಕೊಳ್ಳಬೇಕು ಎಂದು ನಿರ್ಧರಿಸಿದರು. ಮೌನವಾಗಿ ಎಲ್ಲರೂ ಊಟ ಮಾಡಿದರು. ಮಕ್ಕಳೆಲ್ಲಾ ತಮ್ಮ ಕೋಣೆಗೆ ಮಲಗಲು ಹೋದರು. ನಾರಾಯಣನ್ ಒಬ್ಬರನ್ನು ಬಿಟ್ಟರೆ ಬೇರೆ ಎಲ್ಲರ […]
ನಾಗರಾಜ ಬಿ.ನಾಯ್ಕ.ಉಸಿರ ಆರಾಧನೆಗೆ…….
ಕಾವ್ಯ ಸಂಗಾತಿ ನಾಗರಾಜ ಬಿ.ನಾಯ್ಕ. ಉಸಿರ ಆರಾಧನೆಗೆ……. ಪುಟ್ಟ ಮಗುವಿನ ಅಳುವಅಮ್ಮನ ಕಣ್ಣಲ್ಲಿ ಸಂತೈಸುವನಗುವೊಂದ ಪ್ರೀತಿ ಎನ್ನಲೇ……ಹಾರಿಹೋದ ಹಕ್ಕಿಯ ದಾರಿಯಕಾಯುತಿರುವ ಮರಿಗಳನೋಟವನ್ನು ಪ್ರೀತಿ ಎನ್ನಲೇ…..ನಡೆವ ನಿಧಾನ ನಡಿಗೆಗೆಆಧಾರವಾಗುವ ಪರಿಚಯದಹೆಗಲಿಗೆ ಪ್ರೀತಿಯೆನ್ನಲೇ…..ಮಾತಲ್ಲೇ ಮನ ಕರಗಿಸುವಸೋಜಿಗದ ಶಬ್ದಗಳಿಗೆಕಾವ್ಯ ಸೂಚಿಗೆ ಪ್ರೀತಿಯೆನ್ನಲೇ…..ಮಣ್ಣ ಕಣದಿ ಜೀವಿತದಒಲವಾಗಿ ಕುಳಿತಭರವಸೆಗೆ ಪ್ರೀತಿಯೆನ್ನಲೇ…..ದನಿಯಿರದ ಭಾವದಲಿಋಣಿಯಾದ ಒಲವಿಗೆಮೌನದಲ್ಲೂ ನಗುವಾದನಲಿವಿಗೆ ಪ್ರೀತಿಯೆನ್ನಲೇ……ಕರಗಿದ ಹೃದಯದ ಮಾತು ಜೇನುಮೌನ ಮಲ್ಲಿಗೆಯ ಹಾಡುಬೆವರ ಹನಿಯಹಿರಿಮೆಗೆ ಪ್ರೀತಿಯೆನ್ನಲೇ….ಆಪ್ತತೆಯ ಚೆಲುವಿಗೆಮನವರಳಿಸೋ ಗೆಲುವಿಗೆಉಸಿರ ಆರಾಧನೆಗೆಪ್ರೀತಿಯೆನ್ನಲೇ……… ನಾಗರಾಜ ಬಿ.ನಾಯ್ಕ. .
ಡಾ. ಮೀನಾಕ್ಷಿ ಪಾಟೀಲ್-ದಿನಚರಿ
ಬೆಳಗಾನ ಮಾಡಿದ ಸಂಸಾರ ಸಂತೆಯ
ಕನಸುಗಳ ಕಂಬಳಿಯ ಹೊದಿಸಿ
ಬೆಚ್ಚನೆ ಮಲಗಿಸಿ
ಬೆಳ್ಳಿಚಿಕ್ಕಿ ಮೂಡುವ ಮುಂಚೆ
ಎದ್ದು ರವಿಯ ಬರುವಿಗೆ
ಬಾನಂಗಳದ ತುಂಬೆಲ್ಲ
ನೀರ ತಳಿ ಹೊಡೆದು
ಬಣ್ಣದ ಚಿತ್ತಾರವ ರಂಗೋಲಿಯ ಬಿಡಿಸಿ
ಮುತ್ತಿನ ನೀರ ಹನಿ
ಲತೆಗಳಿಗೆ ಸಿಂಪಡಿಸಿ
ಹಿತ್ತಲಿನ ಗಿಡಗಳಿಗೆ ನೀರುಣಿಸಿ
ಹಾಡೊಂದನ್ನು ಗುನುಗುನಿಸುತ್ತ
ಮರೆತ ಒಲೆಯ ಮೇಲಿನ
ಹಾಲು ಉಕ್ಕೇರಿ ನನ್ನ ಎಚ್ಚರಿಸಿತ್ತು
ತನುವಿಗೊಂದಿಷ್ಟು ಕಸರತ್ತು
ಯೋಗ ಧ್ಯಾನ
ತನು – ಮನಗಳ ಯೋಗಾಯೋಗ
ಸಮಯ ಏಳಾಗುತ್ತಿದೆ
ಕಸಗೂಡಿಸಿದ ಕೈಗಳಿಗೆ
ಕಾಫಿ ಕೊಟ್ಟು ಸಮಾಧಾನಿಸಬೇಕು
ಒಲೆ ಹೊತ್ತಿಸಬೇಕು
ಗಾಣದೆತ್ತಿಗೆ ಗುಗ್ಗರಿ ಇಡಬೇಕು
ನೆರವಾಗುತ್ತದೆ ನೊಗ ಎಳೆಯಲು
ದೈನಂದಿನ ರೊಟ್ಟಿಗೆ ಜೋಡಿಸಬೇಕು ಪಲ್ಲೆ
ತಿಂಡಿಗೆ ತಡವರಿಸಬೇಕು ನಿತ್ಯವೂ
ಅವಲಕ್ಕಿ ಉಪ್ಪಿಟ್ಟು ಮೂಗು ಮುರಿಯುವರು
ಇಡ್ಲಿ ದೋಸೆ ಪೂರಿ ಬಾಯಿ ಚಪ್ಪರಿಸುವರು
ಬೆಳಗಿನಿಂದ ಬೈಗಿನವರೆಗೂ
ಹೊರಡಬೇಕಿನ್ನು ನಿತ್ಯ ಕಾಯಕಕ್ಕೆ
ಹಳೇ ಗೋಡೆಗೆ ಬಣ್ಣ ಬಳಿದಂತೆ
ಸುಕ್ಕುಗಟ್ಟಿದ ಮುಖಕ್ಕೆ ಬಣ್ಣ ಬಳಿದು
ಕೆನ್ನೆಗೊಂದಿಷ್ಟು ಮಿಂಚು ಸವರಿ
ಅಧರಕ್ಕೆ ರಂಗು ಲೇಪಿಸಿ
ವೇಷಾಗಾರರಂತೆ ವೇಷ ಮರೆಸಿ
ಹಾಡುತ್ತ ನಡೆಯಬೇಕಿದೆ
ಬದುಕಿನ ಪಥದಿ
ಡಾ. ಮೀನಾಕ್ಷಿ ಪಾಟೀಲ್
ರಂಗಸ್ವಾಮಿ ಮಾರ್ಲಬಂಡಿ ಕವಿತೆ-ಗೋರಿಯ ದೇವತೆ
ಕಾವ್ಯ ಸಂಗಾತಿ
ರಂಗಸ್ವಾಮಿ ಮಾರ್ಲಬಂಡಿ
ಗೋರಿಯ ದೇವತೆ
ಡಾ.ಕಸ್ತೂರಿ ಕವಿತೆ-ಸಾಲು ದೀಪಗಳು
ಕಾವ್ಯ ಸಂಗಾತಿ
ಡಾ.ಕಸ್ತೂರಿ
ಸಾಲು ದೀಪಗಳು
ಪೂರ್ಣಿಮಾ ಯಲಿಗಾರ ಅವರ ಲೇಖನ-ಅನುಭವವೇ ಬದುಕಿಗೊಂದು ದೊಡ್ಡ ಪಾಠ-
ಅನುಭವ ಸಂಗಾತಿ
ಪೂರ್ಣಿಮಾ ಯಲಿಗಾರ
ಅನುಭವವೇ ಬದುಕಿಗೊಂದು ದೊಡ್ಡ ಪಾಠ-