ಡಾ ಅನ್ನಪೂರ್ಣಾ ಹಿರೇಮಠ-ಸೋಲುವ ಪ್ರೀತಿ ಪಟು

ಕಾವ್ಯ ಸಂಗಾತಿ

ಡಾ ಅನ್ನಪೂರ್ಣಾ ಹಿರೇಮಠ

ಸೋಲುವ ಪ್ರೀತಿ ಪಟು

ಕಲಕದಿರಲೇ ನೋವಿನಲೆಗಳೇ ನೊಂದ ಈ ಅಂತರಾಳವಾ
ಕೆದಕದಿರೆಲೆ ವಿರಹದಲೆಗಳೇ ಬೆಂದ ಈ ಜೀವವಾ//

ನಿಮ್ಮಬ್ಬರವ ತಾಳಲಾರೆನು ಬಿರುಸಿನಲೆ ಸಹಿಸಲಾರೆ
ಅನಂತ ಕಷ್ಟಗಳನೇ ಉಂಡು ಉಂಡು ನಡುಗಿದೆ ಎನ್ನೆದೆ
ಬರಗುಡುವ ತೆರೆಗಳ ಸಹಿಸಿ ಸಹಿಸಿ ಹೆದರಿರುವೆ
ಉಕ್ಕಿ ಬರುವ ಇಕ್ಕೆಲಗಳ ಹರವಿಗೆ ಕಂಗಾಲಾಗಿರುವೆ
ಮುಳುಗುವ ಭಯವಿಲ್ಲ ಬದುಕುಳಿವ ದಾರಿ ಕಾನೆ,//

ಬೃಹದಾಕಾರದ ಜಲಚರಗಳನಂತ ಬೆನ್ನುಹತ್ತಿವೆ
ನುಂಗಲು ಬಾಯ್ ತೆರೆದು ಹೊಂಚು ಹಾಕುತಿವೆ
ನುಸುಳಿದರಿಲ್ಲ ಸುಳಿದಾಡಿದರಿಲ್ಲ ಹೋರಾಟದೇ
ಈಜಿ ಈಜೀ ಸೋತು ಹೋಗಿವೆ ತೋಳ ರೆಕ್ಕೆಗಳು
ಮೃತ್ಯುವಿನ ಬಾಹುಬಲ ತನ್ನ ತೆಕ್ಕೆಗೆ ಸೆಳೆಯುತಿದೆ
ಪಾರಾಗುವ ದಾರಿ ಕಾಣೆ ಆತಂಕವ ನೂಕಿ ಬಾಳಲರಿಯೆ//

ಕಳೆದವನಂತ ಹಗಲು ರಾತ್ರಿಗಳು ಹೋರಾಟದಲೆ
ಸೂರ್ಯ ಚಂದ್ರ ಚುಕ್ಕಿಗಳೆಲ್ಲ ಕುಕ್ಕಿ ಕುಕ್ಕಿ
ಹಸಿರಲೆ ಹೂ ಮೊಗ್ಗು ಕುಸುಮಗಳೆಲ್ಲ ಚುಚ್ಚಿ ಚುಚ್ಚಿ
ವಸಂತದಲೂ ಗಂಟಲು ಬಿಗಿದು ಮೌನಯಾತ್ರೆ
ನಿತ್ಯ ಸ್ಮಶಾನದತ್ತ ಸಾಗುತಿದೆ ಬಯಕೆಗಳ ಮೆರವಣಿಗೆ/)

ಬೆಂಗಾಡಲಿ ದಿಕ್ಕುಗಾನದೆ ಸುತ್ತುತಿಹೆನು
ಬಿಸಿಲ್ಗುದುರೆ ಬೆನ್ನತ್ತಿ ಓಡಿ ಓಡಿ ಸೋತಿಹೇನು
ಎಲ್ಲಿ ನೋಡಿದರಲ್ಲಿ ಭಯದ ಕಾರ್ಮೋಡ
ಭೀತಿಯ ರಣಮಳೆ ಸುರಿದು ಸುರಿದು
ಏಳದಂತೆ ಬೀಳಿಸಿದೆ ನೆಲಕ್ಕಪ್ಪಳಿಸಿ ಬಯಲಾಲಯವ
ಕುಸಿದಿದೆ ಭರವಸೆ ಮುರಿದಿದೆ ಬಂಧದಾ ಪ್ರೇಮ
ಒಲವಿಗೆ ಬರಸಿಡಿಲು ಗೆಲುವಿಲ್ಲದ ಸ್ಪರ್ಧೆಯ
ನಿತ್ಯ ಸ್ಪರ್ಧಿಸುವ ಸೋಲುವ ಪ್ರೀತಿ ಪಟು ನಾನಾಗಿಹೆನು//


ಡಾ ಅನ್ನಪೂರ್ಣಾ ಹಿರೇಮಠ

One thought on “ಡಾ ಅನ್ನಪೂರ್ಣಾ ಹಿರೇಮಠ-ಸೋಲುವ ಪ್ರೀತಿ ಪಟು

  1. ಕವನ ಮತ್ತು ಕವನದ ಶೀರ್ಷಿಕೆ ಮತ್ತು ಅದಕ್ಕೆ ಒಪ್ಪುವ ಚಿತ್ರಕಲೆ ಸೂಪರ್ ಹಿಟ್

Leave a Reply

Back To Top