ಸುಧಾ ಪಾಟೀಲ್ ಕವಿತೆ-ಹುಡುಕುತ್ತಿರುವೆ

ಕಾವ್ಯಸಂಗಾತಿ

ಸುಧಾ ಪಾಟೀಲ್

ಹುಡುಕುತ್ತಿರುವೆ

ಜಗದ ಉದ್ಧಾರಕ್ಕಾಗಿ
ಪರರ ಹಿತಕ್ಕಾಗಿ
ಸಮಾಜದ ಒಳಿತಿಗಾಗಿ
ಚಿಂತಿಸುವವರ
ಹುಡುಕುತ್ತಿರುವೆ

ಜೀವನದ ಉದ್ದೇಶಕ್ಕಾಗಿ
ಬೇರೆಯವರ ಸುಖಕ್ಕಾಗಿ
ಸತ್ಯದ ಪ್ರತಿಪಾದಕರಾಗಿ
ಅನವರತ ನಿಲ್ಲುವವರ
ಹುಡುಕುತ್ತಿರುವೆ

ಬದುಕನ್ನು ಇದ್ದಂತೆ ಸ್ವೀಕರಿಸುವ
ಸಣ್ಣತನದ ಗೊಡವೆಗೆ ಹೋಗದೆ
ವಿಶಾಲಹೃದಯಿಗಳಾಗಿ
ಮೆರೆದಾಡುವವರನ್ನು
ಹುಡುಕುತ್ತಿರುವೆ

ಸ್ವಂತಿಕೆಯ ಮೆರೆಯುವ
ಎಲ್ಲವನ್ನೂ ನಗುನಗುತ್ತಾ ನಿಭಾಯಿಸುವ
ಹೆದರದೆ ಮುನ್ನುಗ್ಗುವ
ಮಾನವೀಯತೆಯಿರುವವರನ್ನು
ಹುಡುಕುತ್ತಿರುವೆ

ತಾನೂ ಬದುಕಿ ಬೇರೆಯವರ
ಬದುಕಲು ಬಿಟ್ಟು
ಹೊಣೆಗಾರಿಕೆ ಹೊತ್ತು
ಮುನ್ನಡೆಯುವ ಜೀವವನ್ನು
ಹುಡುಕುತ್ತಿರುವೆ

ಬದುಕಿಗಾಗಿ ಬದುಕ ಸವೆಸುವ
ಜೀವನದ ಮೌಲ್ಯಗಳ ಎತ್ತಿ ಹಿಡಿಯುವ
ಪಾರಮಾರ್ಥದ ಸಾಧನೆಗೈಯುವವವರನ್ನು
ಹುಡುಕುತ್ತಿರುವೆ


ಸುಧಾ ಪಾಟೀಲ್

4 thoughts on “ಸುಧಾ ಪಾಟೀಲ್ ಕವಿತೆ-ಹುಡುಕುತ್ತಿರುವೆ

Leave a Reply

Back To Top