ರಂಗಸ್ವಾಮಿ ಮಾರ್ಲಬಂಡಿ ಕವಿತೆ-ಗೋರಿಯ ದೇವತೆ

ಕಾವ್ಯ ಸಂಗಾತಿ

ರಂಗಸ್ವಾಮಿ ಮಾರ್ಲಬಂಡಿ

ಗೋರಿಯ ದೇವತೆ

ಉಸಿರೆ ನಿಂತೋಗುತಿದೆ
ಕಣ್ಣಲ್ಲೊ ನಿನ್ನ ಚಿತ್ರ ಮೂಡಿದಾಗ
ಯಾಕೆ ಎಂದು ಕೇಳುವ
ಸಮಯ ಬಂದಾಗಿದೆ ಈಗ,
ನೀನಾ, ನಿನ್ನ ಬಿಂಬವೊ
ಕಾಣುತ್ತಿರುವುದು…!

ಕನಸಲ್ಲೆ ಎಂಬ ಕನವರಿಕೆಯಲಿ
ಕಾಣುತಿದೆ ನಿನ್ನ ಕಾಲ್ಗಜ್ಜೆ…!
ಆಶೆಗೆ ಗೋರಿ ಕಟ್ಟಬೇಡ
ಮಸಣದಲಿ ಇದ್ದಿದ್ದರೆ
ನಾನು ನೀನು ಮಾತ್ರ
ಬೇರೆಯವರು, ಸಂಗಡಿಗರು, ನೆಂಟರು ಯಾರದರೇನು
ಪ್ರೇಮಿಗಳ ಅಂತಿಮ ಯಾತ್ರೆಗೆ ಸೆದೆ ಹೊರುವವರು…!

ಜೀವ ಕೊಡುವುದೊ
ಪ್ರಾಣ ಪ್ರತಿಷ್ಟೆ ಮಾಡುವುದು, ದೇವರ ಮೂರ್ತಿಗೆ
ದೈವ ಸಾಕ್ಷಿ ನೀನು…!

ದೇಹದಾಟದಲೆಲ್ಲಾ
ದೇವತೆ ಅಂತೂ ನೀನೆ….!
ದೇವರೆ ಸಾಕ್ಷಿ‌ ನೋಡು ಈ ದೇಗುಲದ ಮೂರ್ತಿಗೆ..!


ರಂಗಸ್ವಾಮಿ ಮಾರ್ಲಬಂಡಿ

One thought on “ರಂಗಸ್ವಾಮಿ ಮಾರ್ಲಬಂಡಿ ಕವಿತೆ-ಗೋರಿಯ ದೇವತೆ

Leave a Reply

Back To Top