ಜಯಶ್ರೀ ಎಸ್ ಪಾಟೀಲ-“ಎಂದು ನಗುವ ನಮ್ಮ ರೈತ”

ಕಾವ್ಯಸಂಗಾತಿ

ಜಯಶ್ರೀ ಎಸ್ ಪಾಟೀಲ

“ಎಂದು ನಗುವ ನಮ್ಮ ರೈತ”

ಭೂಮಿತಾಯಿಯ ಆಪ್ತ ಪುತ್ರ ರೈತ
ಬಿಸಿಲು ಮಳೆ ಚಳಿ ಗಾಳಿಗೆ ಅಂಜದಾತ
ಹಗಲಿರುಳು ಬೆವರು ಸುರಿಸಿ ದುಡಿವಾತ
ಕಾಯಕವೇ ಕೈಲಾಸವೆಂದು ನಂಬಿದಾತ

ಸಕಾಲಕ್ಕೆ ಮಳೆಯು ಬಾರದಿರಲು
ಬಿತ್ತಿದ ಬೀಜಗಳಿಗೆ ನೀರಿಲ್ಲದಿರಲು
ಬೆಳೆ ಬಾರದೆ ಬರಗಾಲ ಮೂಡಲು
ರೈತನು ದಿಕ್ಕು ತೋಚದೆ ಕಂಗಾಲು

ಅತಿಯಾದಾಗ ಬಡತನದ ಬೇಗೆಯು
ಕುಟುಂಬದ ನಿರ್ವಹಣೆ ಕಠಿಣವು
ಹೆಚ್ಚಾದಾಗ ಸಾಲದ ಹೊರೆಯು
ರೈತನ ಆತ್ಮಹತ್ತೆಗೆ ಕಾರಣವು

ಜಗಕೆ ಅನ್ನ ನೀಡುವ ಅನ್ನದಾತ
ತನಗೆ ಅನ್ನವಿಲ್ಲದಾಗಿ ಬಳಲುತ
ನೋವು ಕಷ್ಟಗಳನು ಸಹಿಸುತ
ಎಂದು ನಗುವ ನಮ್ಮ ರೈತ

ನಮ್ಮ ದೇಶದ ಬೆನ್ನೆಲಬು ರೈತ
ಇವನಿಲ್ಲದೆ ದೇಶದ ಏಳಿಗೆ ಕುಂಠಿತ
ನೀಡಬೇಕು ನಾವು ಸಹಾಯ ಹಸ್ತವ
ತೋರಬೇಕು ಪ್ರೀತಿಯಿಂದ ಗೌರವ

ರೈತ ಪರ ಸಂಘಟನೆಗಳು ಹೆಚ್ಚಲಿ
ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗಲಿ
ಕಷ್ಟ ಕರಗಿ ಬಾಳು ಬಂಗಾರವಾಗಲಿ
ಮೊಗದಲ್ಲಿ ಖುಷಿಯ ನಗು ಮೂಡಲಿ


ಜಯಶ್ರೀ ಎಸ್ ಪಾಟೀಲ

Leave a Reply

Back To Top