ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ.
ಉಸಿರ ಆರಾಧನೆಗೆ…….
ಪುಟ್ಟ ಮಗುವಿನ ಅಳುವ
ಅಮ್ಮನ ಕಣ್ಣಲ್ಲಿ ಸಂತೈಸುವ
ನಗುವೊಂದ ಪ್ರೀತಿ ಎನ್ನಲೇ……
ಹಾರಿಹೋದ ಹಕ್ಕಿಯ ದಾರಿಯ
ಕಾಯುತಿರುವ ಮರಿಗಳ
ನೋಟವನ್ನು ಪ್ರೀತಿ ಎನ್ನಲೇ…..
ನಡೆವ ನಿಧಾನ ನಡಿಗೆಗೆ
ಆಧಾರವಾಗುವ ಪರಿಚಯದ
ಹೆಗಲಿಗೆ ಪ್ರೀತಿಯೆನ್ನಲೇ…..
ಮಾತಲ್ಲೇ ಮನ ಕರಗಿಸುವ
ಸೋಜಿಗದ ಶಬ್ದಗಳಿಗೆ
ಕಾವ್ಯ ಸೂಚಿಗೆ ಪ್ರೀತಿಯೆನ್ನಲೇ…..
ಮಣ್ಣ ಕಣದಿ ಜೀವಿತದ
ಒಲವಾಗಿ ಕುಳಿತ
ಭರವಸೆಗೆ ಪ್ರೀತಿಯೆನ್ನಲೇ…..
ದನಿಯಿರದ ಭಾವದಲಿ
ಋಣಿಯಾದ ಒಲವಿಗೆ
ಮೌನದಲ್ಲೂ ನಗುವಾದ
ನಲಿವಿಗೆ ಪ್ರೀತಿಯೆನ್ನಲೇ……
ಕರಗಿದ ಹೃದಯದ ಮಾತು ಜೇನು
ಮೌನ ಮಲ್ಲಿಗೆಯ ಹಾಡು
ಬೆವರ ಹನಿಯ
ಹಿರಿಮೆಗೆ ಪ್ರೀತಿಯೆನ್ನಲೇ….
ಆಪ್ತತೆಯ ಚೆಲುವಿಗೆ
ಮನವರಳಿಸೋ ಗೆಲುವಿಗೆ
ಉಸಿರ ಆರಾಧನೆಗೆ
ಪ್ರೀತಿಯೆನ್ನಲೇ………
ನಾಗರಾಜ ಬಿ.ನಾಯ್ಕ.
.
super
ನವಿರಾಗಿ ಹೆಣೆದ ಪ್ರೀತಿಯ ಕೌದಿಯಿದು.
ಎಲ್ಲವೂ ಪ್ರೀತಿಯ ರೂಪವೇ ಆಗಿದೆ.
ಪ್ರೀತಿ ಅನ್ನೋದು ಬದುಕಿನ ಅವಿಸ್ಮರಣೀಯ ಅನುಭವ.. ಮನದ ನವಿರಾದ ಅನುಭವ.. ತಣ್ಣನೆ ಹರಿಯುವ ನದಿಯ ರೀತಿ.. ಪ್ರತಿ ಮನವ ಅರಳಿಸುವುದು ಪ್ರೀತಿ.. ಪ್ರೀತಿ ಎಂದರೆ ಉಸಿರು… ಪ್ರೀತಿಯ ವಿವಿಧ ರೂಪವನ್ನು ಒಂದು ಚೌಕಟ್ಟಿನಲ್ಲಿ ಇಟ್ಟ ರೀತಿ ಅನುಪಮ..
ನಾನಾ