ಡಾ.ಕಸ್ತೂರಿ ಕವಿತೆ-ಸಾಲು ದೀಪಗಳು

ಕಾವ್ಯ ಸಂಗಾತಿ

ಡಾ.ಕಸ್ತೂರಿ

ಸಾಲು ದೀಪಗಳು

* ನಮ್ಮ ಮನೆಯ
ಸಾಲು ದೀಪಗಳು
ಹಚ್ಚಿ. ಹಚ್ಚಿ ಇಟ್ಟರುವೆ
ಅವು ಎಂದೂ
ಆರದ ದೀಪ
ಉದ್ಗಾರದ ಮಾತಿಲ್ಲ
ಅವು  ಆಗಮಿಕ
ದೀಪಗಳು  ಬುದ್ದನು
ಮಹಾವೀರನು
ಬಸವ ಅಕ್ಕ
ಅಲ್ಲಮ.ಸಿದ್ದರಾಮ
ಮುಕ್ತಾಯಕ್ಕ
ಲಕ್ಕಮ್ಮ ಚೆನ್ನಬಸವ
ಪುರಂದರ.ಕನಕ
ಸರ್ವಜ್ಞ.ಮಲ್ಲಮ್ಮ.ಚೆನ್ನಮ್ಮಾ.ಸಂಗೋಳಿ ರಾಯಣ್ಣಾ. ಗಾಂಧಿ
ಅಂಬೇಡ್ಕರ್
ಮದರ್ ಥೆರೆಸಾ .ನೇಲ್ಸನ್ ಮಂಡೇಲಾ ನನ್ನ ದೃಷ್ಟಿಯಲಿ
ಮನುಕುಲ ಬೆಳಗುವ
ಮಾನವ್ಯದ ಮನಸ್ಸಿನ
ನಿಗೂಡ ಕಾಳ  ರಾತ್ರಿಕತ್ತಲೆ
ಕಳೆಯುವ.ನಂದಾ
ದೀಪಗಳು.
ಸೂರ್ಯನನ್ನು ಮರ ಮಾಡುವ ಶಕ್ತಿ
ಮೋಡ ರಾಜನಿಗೆ
ಇರುವದಾದರೆ
ಅದನು ಓಡಿಸುವ ಶಕ್ತಿ
ಮಾರುತನಿರುವ
ಹಾಗೆ ಜಗದ
ಜಾಡ್ಯ  ಕಾರಿರುಳ ಕಳೆದ
ಈ ಸಾಲು ದೀಪಗಳು

———————————————————–

ಡಾ.ಕಸ್ತೂರಿ ದಳವಾಯಿ

One thought on “ಡಾ.ಕಸ್ತೂರಿ ಕವಿತೆ-ಸಾಲು ದೀಪಗಳು

Leave a Reply

Back To Top