ಕಾವ್ಯಯಾನ
ನುಡಿ ನಾಗರ ಅರುಣಾ ರಾವ್ ಮನುಜನ ಮುಖದಲ್ಲಿನಗೆಯ ಮುಖವಾಡಮರೆಮಾಚುವುದುದುಗುಡ, ದುಮ್ಮಾನಅಷ್ಟೇಕೆ ?ಅಸೂಯೆ ಅನುಮಾನ! ಮುಖವಾಡದ ಹಿಂದಿನ ಮನಅರಿಯದೇ ನಿಜವನ್ನ?ಕಣ್ಣು ಹೇಳದಿದ್ದೀತೇಎದೆಯ ಮಾತನ್ನ?ನಂಬಬಹುದೇ ನಿನ್ನನ್ನಓ ನಾಲಿಗೆಯೇ?ನುಡಿವೆ ನೀ ಏನನ್ನ?ನೀ ಸುಮ್ಮನಿದ್ದರೇನೆ ಚೆನ್ನ! ನಿನ್ನಿಂದ ನೋವುಂಡ ಮನನಯನದಲ್ಲಿ ತೋರೀತುತನ್ನ ನೋವನ್ನ|ಎಲುಬಿಲ್ಲದ ಜಿಹ್ವೆ ನೀನುಡಿದ ನುಡಿಯದುಗಾಯಪಡಿಸೀತು ಎನ್ನ! ಬಿಗಿತುಟಿಯ ದುಡಿವಂದುನೋವಪಡುವಂದು, ಎಂದೆಂದಮಾತಿನಲಿ ಹುಡುಗಿಹುದು ಸತ್ಯಬಿಗಿದ ತುಟಿ ತರಬಲ್ಲದು ಹಾಸಕಟು ಮಾತಿಗಾತಿಗದೆರಾಮಬಾಣ! *********************************
ಕಾವ್ಯಯಾನ
ಮೂಕವೇದನೆ ಶಿವಲೀಲಾ ಹುಣಸಗಿ ಮೌನಕ್ಕೆ ನೂರು ಭಾವಲೇಪನದ ನಂಟುಹಕ್ಕಿ ರೆಕ್ಕೆ ಬಿಚ್ಚಿ ಹಾರಲಾಗದೆ ತತ್ತರಿಸಿದೆಕಣ್ಣಂಚಲಿ ಕಂಬನಿಯ ಹನಿಗಳುತೊಟ್ಟಿಕ್ಕಿದಂತೆ ಸಂತೈಸದಾ ಮನವುಮೂಲೆಗುಂಪಾಗಿ ರೋಧಿಸುತ್ತಿದೆ.ಹೊದ್ದ ಕಂಬಳಿಯ ತುಂಬಾ ತೂತುಬಿತ್ತರಿಸಲಾದಿತೇ ಅಂತರಾಳದ ಹೊರತುಬರದ ಮೇಲೆ ಬರೆಯಳೆದಂತೆ ನೆನಪುಕರಗಬಹುದೇ ಬುಗಿಲೆದ್ದ ಆಕ್ರೋಶದ ಕಂಪುಕಾದಕಬ್ಬಿಣವು ಕುಲುಮೆಯಲಿ ಪಳಗಿದಂತೆನಿನ್ನಾರ್ಭಟಕೆ ಒಂದು ಕ್ಷಣ ಮೈ ಮರೆತಂತೆಹಾಯ್ದ ಹೊದ್ದ ಮನವರಿಕೆಗಳ ತೀಡಿದಾಂಗೆಹರಯವೊಂದೆ ಇಳೆಗೆ ಆಗಾಗಾ ಮೈತಳೆದಾಂಗೆಬರಿದಾದ ಒಡಲು ಬೆಸದು ಮಿಸುಕಿದಂತೆಕಣ್ಣು,ಮೂಗು ಕೈಕಾಲು ಮೂಡಿದ್ದಂತೆಯಾವ ಮೂರ್ತವೋ ಕೊನೆಗಾಲಕೆಕಡಲ ಸೇರದಾ ಮರ್ಮವನು ಬಲ್ಲವರಾರುತುಟಿ ಕಚ್ಚಿ ಕರಗಿಸಿದ ಪಿಂಡದಂತೆ ಎಲ್ಲವುಮೌನವೊಂದು ಉತ್ತರವಾದಿತೆ ಕಂಗಳಿಗೆನಿನ್ನ […]
ಕಾವ್ಯಯಾನ
ಮೌನ ರೇಷ್ಮಾ ಕಂದಕೂರ ಮೌನದ ಆಲಾಪಮಾತಿನ ಆರ್ಭಟ ಸರಿಸಿಶಾಂತ ಚಿತ್ತಕೆ ಆಹ್ವಾನ ದುಗುಡ ಅದುಮಿಡುತಸುಪ್ತ ಲೋಕದಿ ವಿಹಾರಜಂಜಡಗಳ ವಿರಮಿಸುವಿಕೆ ಸಮಸ್ಯಯ ಪಿರಾಮಿಡ್ಡಿಗೆಉಪಶಮನದ ಪರಿಸೂಕ್ಷ್ಮ ಅವಲೋಕನ ಪ್ರತಿಭಟಿಸುವ ಪ್ರತಿರೂಪನಿರ್ಣಯಗಳ ಸೂಚಿಕುಹಕತಗೆ ವಿಹಂಗಮ ನೋಟ ಗಟ್ಟಿತನದ ಪ್ರದರ್ಶನಹತೋಟಿಯ ಮನದೊಡಲುಮುಂದಿನ ಸವಾಲಿಗೆ ಅಣಿ ಚಿತ್ತದಲಿ ಅಚ್ಚೊತ್ತಿಮುತ್ತುವವರಿಗ ಎಚ್ಚರಿಕೆ ಘಂಟೆನಡುವೆ ಕೈ ಬಿಟ್ಟವರಿಗೆ ಸವಾಲು ನಿರಾಳತೆಯ ಸ್ವರೂಪವೇದನೆ ಸಹಿಸುವಿಕೆಅಂತರಾಳದ ಸತ್ವ. *******************
ಅನುವಾದ ಸಂಗಾತಿ
ಮಳೆ ಹನಿ ಕನ್ನಡಮೂಲ: ಸ್ಮಿತಾ ಅಮೃತರಾಜ್.ಸಂಪಾಜೆ. ಇಂಗ್ಲೀಷಿಗೆ: ಸಮತಾ ಆರ್. ಮಳೆ ನಿಂತುಹೋದ ಮೇಲೂಯಾರನ್ನೋ ಕಾಯುತ್ತಾಒಂಟಿ ಹಗ್ಗದ ಮೇಲೆಆತುಕೊಂಡ ಸಾಲು ಸಾಲುಮಳೆ ಮಣಿಗಳುಒಲ್ಲದ ಮನಸ್ಸಿನಿಂದಧರೆಗುರುಳುತ್ತಿವೆ. ಬೆಡಗು ಬಿನ್ನಾಣದಲಿಒಂದೇ ಬಿಂದು ಹನಿಹೂ ದಳದ ಮೇಲೆಎತ್ತಿ ಬೊಗಸೆಯೊಳಗಿಟ್ಟುಜೋಪಾನ ಮಾಡ ಬೇಕೆನ್ನುವಷ್ಟರಲ್ಲಿ..ಸಣ್ಣಗೊಂದು ನಕ್ಕುಹೂವಿನೆದೆಯೊಳಗೆ ಹುದುಗಿ ಹೋಯಿತು. ಎಲೆಯ ತುದಿಯಲ್ಲಿಕೊನೇ ಹನಿಇನ್ನೇನು ಬೀಳಬೇಕುನನ್ನೊಳಗೆ ತೀರದ ಸಂಕಟಮೆಲ್ಲಗೆ ಬೆರಳ ತುದಿಗೆಇಳಿಬಿಟ್ಟು ಕಣ್ಣ ಪಾಪೆಯೊಳಗೆಮುಚ್ಚಿಟ್ಟೆ. ನನಗೂ ಮಳೆಗೂ ಈಗತೀರದ ನಂಟು. *********************** A Drop..Even after the rain has stoppedAs if waiting for […]
ಕಾವ್ಯಯಾನ
ಇಲ್ಲಿ ಎಲ್ಲವೂ ಬದಲಾಗುತ್ತದೆ ಅರ್ಪಣಾ ಮೂರ್ತಿ ದಿನಕ್ಕೊಂದು ಬಣ್ಣ ಬದಲಿಸುವಇದೇ ಇಳಿಸಂಜೆಗಳಲ್ಲಿನಾ ಬದಲಾಗದ ನೆನಪ ಹರವಿದ್ದೇನೆ, ಬರಡು ಬಯಲಿನಮನಸುಗಳ ನಡುವೆನಾಕೊನರಿದ ಕೊರಡಿನ ಹಸಿರನ್ನಷ್ಟೇ ಮನಕ್ಕಿಳಿಸಿಕೊಂಡಿದ್ದೇನೆ, ದಿಕ್ಕು ತಪ್ಪಿದ ನದಿಗಳುಅಲ್ಲೆಲ್ಲೋ ಸಂಗಮಿಸುವಾಗನಾನಿಲ್ಲಿ ಅಲೆದಾಡಿ ನದಿಯ ಕಾಯುವ ಕಡಲಾಗಿದ್ದೇನೆ., ಹೌದು ಇಲ್ಲಿ ಎಲ್ಲವೂ ಬದಲಾಗಿದೆ, ನಾನು?ಊಹೂ,ನಾನೀಗಲೂಬಾರದ ಅಮವಾಸ್ಯೆಯ ಚಂದಿರನ ಬೆಳಕಚುಕ್ಕಿಯಲಿ ಹುಡುಕುವಕಾತರದ ಕಣ್ಣಾಗಿದ್ದೇನೆ…. ************************
ಅನುವಾದ ಸಂಗಾತಿ
ಗೋಲಿಗಳು ಹಿಂದಿಮೂಲ:- ಮರಹೂಮ್ ಇಮ್ತಿಯಾಜ. ಕನ್ನಡಕ್ಕೆ:-ಡಿ.ಎಮ್. ನದಾಫ್ ನನ್ನ ಬಾಲ್ಯದ ಮೊದಲಗಳಿಕೆ ಅದ ನಾನು ಕಡು ಶ್ರಮದಿ ಗಳಿಸಿದೆ,ಹಗಲೆನ್ನಲಿಲ್ಲ,ರಾತ್ರಿಯನಲಿಲ್ಲಹಸಿವೆನಲಿಲ್ಲ,ನೀರಕಾಣಲಿಲ್ಲ,ಬರೀ ಗಳಿಕೆಯೋ ಗಳಿಕೆ. ಹಲ ಹಲವು ಬಣ್ಣ-ಬಣ್ಣದವುಕೆಲ-ಕೆಲವು ಒಡಕು ತಡುಕುವಿಧ-ವಿಧದ ಹೊಂಬಣ್ಣದವುಕೆಲವು ನನ್ನಂತೆ ಅಮೂಲ್ಯಹಲವಲ್ಲಿ ಗೋವ ಕಂಗಳ ನೈರ್ಮಲ್ಯ ಕಿಸೆಯ ಕೊನೆ ಮೂಲೆ ಹರಿದಿತ್ತುಆದರೂ ಅದು ಗೋಟಿಗಳಿಂದ ತುಂಬಿತ್ತು.ವೇಗವಾಗಿ ಓಡಿದಾಗಲೆಲ್ಲಇವುಗಳ ಕಿಂಕಿಣಿ ಕಿವಿ ತುಂಬುತಿತ್ತು. ನಾನು ನನಗಿಂತ ಅವುಗಳನ್ನೇಹೆಚ್ಚು ಸಂಭಾಳಿಸಿದ್ದೆ’ಹಿಟ್ಟಿನ ಬುಟ್ಟಿಯಲ್ಲಿ ಬಚ್ಚಿಟ್ಟಿದ್ದೆ,ಗೊತ್ತಾಗುತ್ತಿಲ್ಲ ಗೆಳೆಯ ನನ್ನ ಗೋಟಿಗಳು ಎಲ್ಲಿ ಕಳೆದು ಹೋದವು?ತುಂಬಿ ಹರಿಯುವ ನದಿಯಂತೆ ನನ್ನ ಯೌವನದ ಸೆಳೆವಿನಲ್ಲಿ […]
ಲಲಿತ ಪ್ರಬಂಧ
ನೆನಪಿಗೆ ಬರುತ್ತಿಲ್ಲ ಶೀಲಾ ಭಂಡಾರ್ಕರ್ ತಂಗಿ ಫೋನ್ ಮಾಡಿ..” ಅಕ್ಕಾ.. ಈ ಸಲ ದಸರಾ ರಜದಲ್ಲಿ ಊರಿಗೆ ಬಂದಾಗ ಸಾಲೆತ್ತೂರಿಗೆ ಹೋಗಿ ಬರೋಣ್ವಾ? ” ಅಂದಾಗ ನಾನು ಖುಷಿಯಿಂದ “ಹೇಯ್ ನಾನೂ ಅದನ್ನೇ ಯೋಚಿಸ್ತಿದ್ದೆ.. ಖಂಡಿತ ಹೋಗೋಣ” ಅಂದೆ. ಅದಕ್ಕವಳು “ಎಷ್ಟೋ ದಿನದಿಂದ ನನಗೆ ತುಂಬಾ ಆಸೆ ಆಗ್ತಿದೆ ನಾವು ಕಲಿತ ಸ್ಕೂಲು, ಅಪ್ಪನ ಬ್ಯಾಂಕು, ನಾವಿದ್ದ ಮನೆ, ಶೇಷಪ್ಪನ ಅಂಗಡಿ” … ಅನ್ನುವಾಗ ನಾನು ಪಟಕ್ಕನೆ., “ರತ್ನಾಕರ. ನಾನು ರತ್ನಾಕರನನ್ನು ನೋಡಬೇಕು” ಅನ್ನುವುದರೊಳಗೆ ನಮ್ಮವರು ಮನೆಯೊಳಗೆ […]
ಲೀಲಾ ಕಲಕೋಟಿ ಎರಡು ಬರಹಗಳು
ಲೀಲಾ ಕಲಕೋಟಿ ನ್ಯಾನೋ ಕಥೆ ಸಂಜೆಯಾಗಿ ತಾಸೆರಡಾಗಿತ್ತು. ಹಂಗೆ.. ಹೊರಗ ಹೊಂಟೆ.ಅವನು ನನ್ನ ನೋಡಕೋತ ನನ್ನ ಜೋಡಿ ಬೆನ್ನ ಹತ್ತಿದಾ .ಆದರೂ ಸುಮ್ಮನೆ ಹೊಂಟೆ.ಅವನೂ ಮತ್ತ ನನ್ನ……!ಸ್ವಲ್ಪ ನಿಂತೆ ಅವನೂ ನಿಂತು ನನ್ನ ನೋಡಿ ನಗಾಕ್ಹತ್ತಿದಾ.ಮನೀಕಡೆ ಹೊಂಟೆ ನನ್ನ ನೆಳ್ಳನೂ ನನ್ನ ಜೋಡಿ ಬರದಂಗ ಮಾಡಿದಾ . ಮನಿ ಮುಟ್ಟಿದೆ ಖರೆ ಲೈಟ್ ಹೋಗಿತ್ತು. ಅವನು ಕತ್ತಲೆ ಕರಗಿಸಿ ತನ್ನ ಬೆಳದಿಂಗಳ ಬಾಹು ಬಂಧನದಿ ಮೈಮನಕೆ ಮುದ ನೀಡಿದ. ಅವನನ್ನೇ ನೋಡುತ್ತ ಮೌನ ಮುರಿದು ನನಗರಿವಿಲ್ಲದಂತೆ ಕಟ್ಟಿಗೆ […]
ಗಝಲ್
ಗಝಲ್ ದೇವು ಮಾಕೊಂಡ ಎಚ್ಚರಗೊಂಡ ಕನಸಿಗೆ ಕಾತರಿಸಬೇಡ ಸಂಗಾತಿಮುಂಗುರುಳ ಸ್ವಪ್ನ ಕಾಣಬೇಡ ಸಂಗಾತಿ ಅವರ ಬದುಕು ಅವರೇ ಕಂಡುಕೊಂಡಿಲ್ಲಬೇರೆಯವರ ಮನದ ಭಾವನೆಗೆ ಕಾಯಬೇಡ ಸಂಗಾತಿ ಸುಖದ ಕಡಲು ಬಿಟ್ಟು ಬಯಲಾಗಿ ಬಂದು ಶೂನ್ಯವಾದೆಹಗಲ ಕುದುರೆಯನೇರಿ ಇರುಳು ತಿರುಗಬೇಡ ಸಂಗಾತಿ ಅತ್ತು ಗಾಯಗೊಂಡ ಕಣ್ಣಿಗೆ ಮುಲಾಮು ತರಬೇಕಿದೆಬಿರುಗಾಳಿಗೆ ಉಕ್ಕೇರುವ ನದಿಯ ದಾರಿ ಹುಡುಕಬೇಡ ಸಂಗಾತಿ ಜಗದ ಕೂಗಿಗೆ ಕಿವಿ ಏಕೆ ಕೊಡುತ್ತಿರುವೆ ‘ದೇವ’ಹಳೆ ಕಂದಕದ ನಿಟ್ಟುಸಿರ ಬವಣೆ ನೂಕಬೇಡ ಸಂಗಾತಿ **************************************
ಕಾವ್ಯಯಾನ
ಚೀನಿ ಗಾದೆ ನೂತನ ದೋಶೆಟ್ಟಿ ಮನದಲ್ಲಿ ಹಸಿರು ಗಿಡ ನೆಡುಹಾಡು ಹಕ್ಕಿ ಬಂದೇ ಬರುವುದುಒಂದು ದಿನ ಚೀನಿ ಗಾದೆಯ ನಂಬಿಎದೆಯಂಗಳದಲ್ಲಿನಗುವ ಹಸಿರು ಗಿಡ ಹಾಡು ಕೇಳದೆಹೊರಟ ನಿಟ್ಟುಸಿರಿಗೂಶಾಂತತೆಯ ಪಾಠ ಮೈಯೆಲ್ಲ ಕಿವಿಯಾಗಿಕಾಯುತಿದೆ ಹಸಿರು ಗಿಡಮನದ ಪ್ರತಿ ಮೀಟಿನಲೂಹಕ್ಕಿ ಗಾನದ ಕನವರಿಕೆ ಗಳಿಗೆಗಳ ಲೆಕ್ಕಸರಿ ಹೋಗಲೇ ಇಲ್ಲಹಕ್ಕಿ ಬರುವುದೋ ಇಲ್ಲವೋಹಾಡು ಕೇಳುವುದೊ ಇಲ್ಲವೊ ಮನ ಕರಗಿ ಹರಿಯಿತುಗಿಡದಲ್ಲಿ ಹಸುರಿತ್ತುತಾನು ಅತ್ತು ನಗುವ ಹಂಚಿಗಾದೆಯ ಉಳಿಸಿತ್ತು. *************************************