ಕಾವ್ಯಯಾನ

ಚೀನಿ ಗಾದೆ

ನೂತನ ದೋಶೆಟ್ಟಿ

ನ್ಯಾಯಕ್ಕಾಗಿ ಕೂಗು

ಮನದಲ್ಲಿ ಹಸಿರು ಗಿಡ ನೆಡು
ಹಾಡು ಹಕ್ಕಿ ಬಂದೇ ಬರುವುದು
ಒಂದು ದಿನ

ಚೀನಿ ಗಾದೆಯ ನಂಬಿ
ಎದೆಯಂಗಳದಲ್ಲಿ
ನಗುವ ಹಸಿರು ಗಿಡ

ಹಾಡು ಕೇಳದೆ
ಹೊರಟ ನಿಟ್ಟುಸಿರಿಗೂ
ಶಾಂತತೆಯ ಪಾಠ

ಮೈಯೆಲ್ಲ ಕಿವಿಯಾಗಿ
ಕಾಯುತಿದೆ ಹಸಿರು ಗಿಡ
ಮನದ ಪ್ರತಿ ಮೀಟಿನಲೂ
ಹಕ್ಕಿ ಗಾನದ ಕನವರಿಕೆ

ಗಳಿಗೆಗಳ ಲೆಕ್ಕ
ಸರಿ ಹೋಗಲೇ ಇಲ್ಲ
ಹಕ್ಕಿ ಬರುವುದೋ ಇಲ್ಲವೋ
ಹಾಡು ಕೇಳುವುದೊ ಇಲ್ಲವೊ

ಮನ ಕರಗಿ ಹರಿಯಿತು
ಗಿಡದಲ್ಲಿ ಹಸುರಿತ್ತು
ತಾನು ಅತ್ತು ನಗುವ ಹಂಚಿ
ಗಾದೆಯ ಉಳಿಸಿತ್ತು.

*************************************

One thought on “ಕಾವ್ಯಯಾನ

Leave a Reply

Back To Top